By Village Missionary Movement
Sunday, 08-Sep-2024ಧೈನಂದಿನ ಧ್ಯಾನ(Kannada) – 08.09.2024 (Kids Special)
ಸಾಕ್ಷಿಯಾಗಿರು
"...ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ" - ಮತ್ತಾಯ. 5:16
ಹಾಯ್ ಪುಟಾಣಿಗಳೇ, ಆಟ ಅಂದ್ರೆ ನಿಮಗೆ ತುಂಬಾ ಇಷ್ಟ ತಾನೇ! ರಜೆ ಕೊಟ್ಟರೆ ನಿಮ್ಮನ್ನು ಹಿಡಿಯೋಕೇನೆ ಸಾಧ್ಯ ಇಲ್ಲ ಅಲ್ವಾ? ನೀವು ಯಾವ ಆಟವನ್ನು ತುಂಬಾ ಇಷ್ಟಪಟ್ಟು ಆಡುತ್ತೀರ ಎಂದು ಕೇಳಿದರೆ ನಿಮ್ಮಲ್ಲಿ ಹೆಚ್ಚಿನವರು ಕ್ರಿಕೆಟ್ ಎಂದು ಹೇಳುತ್ತಾರೆ. ನಿಮ್ಮಂತೆಯೇ ಕುಮಾರ್‌ಗೂ ಕ್ರಿಕೆಟ್ ಹುಚ್ಚಿತ್ತು. ಅಷ್ಟೇ ಅಲ್ಲ, ವಿದ್ಯಾಭ್ಯಾಸದಲ್ಲಿ, ಆಲಯಕ್ಕೆ ಹೋಗಿ ಪ್ರಾರ್ಥನೆ ಮಾಡುವುದರಲ್ಲಿ ಅವನನ್ನು ಮೀರಿಸುವವರಿಲ್ಲ.
ರಜೆಯ ದಿನದಂದು ಕುಮಾರ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ. ಸಂತೋಷದಿಂದ ಆಡುತ್ತಾ, ಕಿರುಚುತ್ತಾ ಇರುವಾಗ ಢಮಾರ್ ಎಂದು ಒಂದು ದೊಡ್ಡ ಶಬ್ಧ! ಹಿಂತಿರುಗಿ ನೋಡಿದಾಗ ಅವರು ಹೊಡೆದ ಚೆಂಡು ಪಕ್ಕದ ಮನೆಯ ಕಿಟಕಿ ಗಾಜು ಒಡೆದಿತ್ತು. ಆಟವಾಡುತ್ತಿದ್ದವರೆಲ್ಲ ಕಿಟಕಿ ಒಡೆದಿದ್ದಕ್ಕೆ ಕುಮಾರ್ ನನ್ನು ದೂಷಿಸಿ ಓಡಿಹೋದರು. ಇವನೋ ಒಬ್ಬನೇ ಅಳುತ್ತಾ ಆ ಮನೆ ಕಡೆ ನಡೆದ. ಒಬ್ಬ ದುಂಡುಮುಖದ, ಎತ್ತರದ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದರು. ಇವನಿಗೆ ಅವರನ್ನು ಕಂಡು ಭಯವಾಯಿತು. ಆದರೂ ಅವನು ಅಳುತ್ತಾ ಅವರ ಬಳಿಗೆ ಹೋಗಿ, "ಕ್ಷಮಿಸಿ ಅಂಕಲ್, ನಾನು ನಿಮ್ಮ ಮನೆಯ ಕಿಟಕಿಯನ್ನು ಒಡೆದಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ ಎಂದು ಬೇಡಿಕೊಂಡನು, ನಾನು ನನ್ನ ತಂದೆಗೆ ಕಿಟಕಿಯ ವೆಚ್ಚವನ್ನು ತಿಳಿಸಿ ಅದನ್ನು ನಿಮಗೆ ಕೊಡುತ್ತೇನೆ" ಎಂದು ಹೇಳಿದನು. ಆ ಅಂಕಲ್ ಕುಮಾರ್ ಕಡೆಗೆ ನೋಡಿ, "ಅಳಬೇಡ ತಮ್ಮ! ನಿನ್ನ ಜೊತೆ ಬಂದವರೆಲ್ಲ ತಮ್ಮ ತಪ್ಪಿನ ಅರಿವಿಲ್ಲದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ನೀನು ಮಾತ್ರ ನಿನ್ನ ತಪ್ಪಿಗೆ ಕ್ಷಮೆ ಕೇಳಲು ಬಂದಿದ್ದೀಯ, ನಿನ್ನ ಒಳ್ಳೆಯ ಗುಣವನ್ನು ನಾನು ಮೆಚ್ಚುತ್ತೇನೆ" ಎಂದು ಹೇಳಿ ಮನೆಯೊಳಗೆ ಹೋಗಿ ಒಂದು ದೊಡ್ಡ ಚಾಕ್ಲೇಟ್ ತೆಗೆದುಕೊಂಡು ಬಂದು ಅವನ ಕೈಯಲ್ಲಿ ಕೊಟ್ಟು ಕಳುಹಿಸಿದರು. ಇವನೂ ಸಹ ಖುಷಿಯಿಂದ ಮನೆಯತ್ತ ನಡೆಯುತ್ತಿದ್ದ. ಆಗ ಇವರು ಆಡುತ್ತಿದ್ದುದನ್ನು ಕಿಟಕಿ ಒಡೆದುಹಾಕಿದ್ದನ್ನು ಮತ್ತು ಕುಮಾರನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ್ದನ್ನು ಇದನ್ನೆಲ್ಲಾ ನೋಡುತ್ತಿದ್ದ ಮುದುಕನೊಬ್ಬ ಕುಮಾರನನ್ನು ಕರೆದು "ಯಾರು ನೀನು? ನಿನ್ನ ಹೆಸರೇನು? ಇಷ್ಟು ಒಳ್ಳೆಯ ಗುಣಗಳು ನಿನಗೆ ಹೇಗೆ ಬಂದವು?" ಎಂದು ಒಂದೊಂದಾಗಿ ವಿಚಾರಿಸಿದರು. ಇವನು "ನಾನೊಬ್ಬ ಕ್ರೈಸ್ತ ಹುಡುಗ" ಎಂದು ಹೇಳಿ ಕ್ರಿಸ್ತನ ಪ್ರೀತಿಯನ್ನು ಒತ್ತಿ ಹೇಳಿದನು. ಇದನ್ನು ಕೇಳುತ್ತಿದ್ದ ಆ ಮುದುಕನ ಹೃದಯದಲ್ಲಿ ನಾನು ಇಷ್ಟು ವರ್ಷ ಒಬ್ಬ ಕ್ರೈಸ್ತನಾಗಿದ್ದರೂ ನನ್ನಲ್ಲಿ ಇಂತಹ ಒಳ್ಳೆಯ ಗುಣಗಳಿಲ್ಲವೇ ಎಂದು ಮನದಲ್ಲಿ ಬೇಸರಗೊಂಡರು.
ಹೌದು! ತಮ್ಮ, ತಂಗಿ ನೀವು ಹೇಗೆ? ಈ ಕುಮಾರನಂತೆಯೇ ನೀವು ಮಾಡಿದ ತಪ್ಪನ್ನು ಮರೆಮಾಚದೆ ಕ್ಷಮೆ ಯಾಚಿಸಿ ಮಾದರಿಯಾಗಿ ನಡೆದು ಇತರರನ್ನು ಕ್ರಿಸ್ತನೆಡೆಗೆ ಮುನ್ನಡೆಸುತ್ತೀರಾ?
- Mrs. ದೆಬೋರಾಳ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482