Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.09.2024
Share:

By Village Missionary Movement

Thursday, 05-Sep-2024

ಧೈನಂದಿನ ಧ್ಯಾನ(Kannada) – 05.09.2024

 

ಕ್ರಿಯೆ 

 

“ಸತ್ಕಾರ್ಯಮಾಡುವದರಲ್ಲಿ ನೀನೇ ಮಾದರಿಯಾಗಿರು." - ತೀತ 2:7

 

ಚೀನಾ ದೇಶಕ್ಕೆ ಹೊರಟ ಮಿಷನರಿಯಾದ ಹಡ್ಸನ್ ಟೇಲರ್ ಒಮ್ಮೆ ಮಧ್ಯರಾತ್ರಿಯಲ್ಲಿ ಹಸಿವಿನಿಂದ ಬಳಲುತ್ತಿರುವ ಕುಟುಂಬಕ್ಕಾಗಿ ಪ್ರಾರ್ಥಿಸಲು ಕರೆಯಲ್ಪಟ್ಟರು. ಅವರು ಪ್ರಾರ್ಥಿಸಲು ಪ್ರಾರಂಭಿಸಿದಾಗ, ಮಾತುಗಳು ಹೊರಬರದೆ ಗಂಟಲು ಕಟ್ಟಿಕೊಂಡಿತು. ಏಕೆಂದರೆ ಆತನ ಜೇಬಿನಲ್ಲಿದ್ದ ಬೆಳ್ಳಿಯ ಹಣವೇ ಆ ಕುಟುಂಬದ ಹಸಿವು ನೀಗಿಸಲು ಸಾಕಾಗುತ್ತಿತ್ತು. ಅವರ ಹೃದಯದಲ್ಲಿ "ಜನರಿಗಾಗಿ ಪರಿತಪಿಸುವ ದೇವರನ್ನು ಆರಾಧಿಸುತ್ತೀಯ, ಪ್ರಕಟಿಸುತ್ತೀಯ. ಆದರೆ ನಿನ್ನಲ್ಲಿರುವ ಹಣವನ್ನು ಕೊಟ್ಟು ನನ್ನನ್ನು ನಂಬಲು ಸಿದ್ಧನಿಲ್ಲವೇ" ಎಂದು ದೇವರು ಪ್ರೇರೇಪಿಸಿದರು. ಕೂಡಲೇ ಹಡ್ಸನ್ ಬೆಳ್ಳಿ ನಾಣ್ಯವನ್ನು ಕುಟುಂಬದವರಿಗೆ ನೀಡಿ ಪ್ರಾರ್ಥಿಸಿ ಹೊರಟುಹೋದರು. ಅದು ಅವರ ಬಳಿಯಿದ್ದ ಕೊನೆಯ ನಾಣ್ಯವಾದ್ದರಿಂದ ಅವರ ಮನಸ್ಸಿನಲ್ಲಿ ಹಿಂಜರಿಕೆ ಇತ್ತು. ಮರುದಿನ ಬೆಳಿಗ್ಗೆ ಅಂಚೆಯಲ್ಲಿ ಒಂದು ಚಿನ್ನದ ನಾಣ್ಯ ಬಂದಿತು. ಅದನ್ನು ನೋಡಿದ ಅವರು, "ದೇವರ ಬ್ಯಾಂಕಿನಲ್ಲಿ ಇಟ್ಟ ಹಣ 12 ಗಂಟೆಯಲ್ಲಿ 10 ಪಟ್ಟು ಹೆಚ್ಚು ಸಿಗುತ್ತದೆ" ಎಂದರು.

  

ಇಂದು ಲೋಕದಲ್ಲಿ ಇಂತಹ ಕ್ರಿಯೆ ಮಾಡುವ ಜನರು ಇಲ್ಲ. ಪ್ರಾರ್ಥಿಸುವವರು ಅನೇಕರು. ಆದರೆ ದೇವರು ನಮ್ಮ ಪ್ರಾರ್ಥನೆಯನ್ನು ಮಾತ್ರ ಪ್ರೀತಿಸುವ ದೇವರಲ್ಲ. ನಮ್ಮ ಕ್ರಿಯೆಗಳನ್ನೂ ಅವರು ಪ್ರೀತಿಸುತ್ತಾರೆ. ದೊರ್ಕಳು ಎಂಬ ಶಿಷ್ಯೆಯು ಒಳ್ಳೆಯ ಸತ್ಕ್ರಿಯೆಗಳನ್ನು ಮಾಡುತ್ತಿದ್ದಳು. ಅವಳ ಪ್ರಾಣ ಹೋದಾಗಲೂ ಅದನ್ನು ಮರಳಿ ಪಡೆಯುವ ಕೃಪೆಯನ್ನು ದೇವರು ಅನುಗ್ರಹಿಸಿದರು. ಪೇತ್ರನು ಪ್ರಾರ್ಥಿಸಿದ ಪ್ರಾರ್ಥನೆ ಮಾತ್ರವಲ್ಲ, ದೊರ್ಕಳು ಮಾಡಿದ ಒಳ್ಳೆಯ ಕಾರ್ಯವು ದೇವರ ಮುಂದೆ ಬಂದು ಅವಳು ಜೀವಂತವಾಗಿ ಎದ್ದೇಳುವಂತೆ ಮಾಡಿತು. ನಾವು ಎಫೆಸ 2:10 ರಲ್ಲಿ ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು ಎಂದು ಓದುತ್ತೇವೆ. ಮತ್ತು ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ ಎಂದು ಯಾಕೋಬ 2:26 ರಲ್ಲಿ ನೋಡುತ್ತೇವೆ. ದಣಿವರಿಯದೆ ಸತ್ಕಾರ್ಯಗಳನ್ನು ಮಾಡಿದಾಗ ದೇವರು ನಮಗೆ ನಿತ್ಯಜೀವವನ್ನು ಕೊಡುತ್ತಾರೆ ಎಂಬುದನ್ನು ಸತ್ಯವೇದದಲ್ಲಿ ಕಾಣುತ್ತೇವೆ. ದೇವರು ನಮ್ಮ ಹೃದಯದಿಂದ ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ನೋಡಿ ಅದಕ್ಕೆ ತಕ್ಕ ಪ್ರತಿಫಲವನ್ನು ಇಹದಲ್ಲಿಯೂ ಪರದಲ್ಲಿಯೂ ಕೊಡಲು ಶಕ್ತರಾಗಿದ್ದಾರೆ. 

 

ಪ್ರಿಯರೇ, ನೀವು ಮಾಡುವ ಸತ್ಕ್ರಿಯೆಯೇ ನಿಮ್ಮ ಬೆಳಕು ಎಂದು ಯೇಸು ಕ್ರಿಸ್ತನು ಹೇಳುತ್ತಿದ್ದಾರೆ. ಜನರು ನಿಮ್ಮ ಒಳ್ಳೆಯ ಕಾರ್ಯಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ ಎನ್ನುತ್ತಾರೆ. ನೀವು ಇನ್ನು ಮುಂದೆ ಕೇವಲ ಮಾತಾಡುವವರೂ ಪ್ರಾರ್ಥನೆ ಮಾಡುವವರೂ ಮಾತ್ರವೇ ಆಗಿರದೆ ಕ್ರಿಯೆ ಮಾಡುವ ವ್ಯಕ್ತಿಗಳಾಗಿರಿ. ಏಕೆಂದರೆ ನಿಮ್ಮ ಸತ್ಕಾರ್ಯಗಳ ಮೂಲಕವೇ ಮನುಷ್ಯರು ನಿಮ್ಮಲ್ಲಿರುವ ಕ್ರಿಸ್ತನನ್ನು ನೋಡಲು ಸಾಧ್ಯ. ಯೇಸುವಿಗೆ ಸಾಲ ಕೊಡುವವರಾಗಿದ್ದೀರಿ. ಅವರು ಅವರ ಶಕ್ತಿಗೆ ಅನುಗುಣವಾಗಿ ಹಡ್ಸನ್ ಟೇಲರ್‌ಗೆ ಹತ್ತು ಪಟ್ಟು ಕೊಟ್ಟಂತೆ, ನೀವು ಸಹ ಮನಃಪೂರ್ವಕವಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಸಾವಿರ ಪಟ್ಟು ನೀಡಲು ಶಕ್ತರಾಗಿದ್ದಾರೆ. ಕ್ರಿಯೆಯನ್ನು ಸೇರಿಸೋಣ. ಕತ್ತಲೆಯಲ್ಲಿರುವವರ ನಡುವೆ ನಮ್ಮ ಬೆಳಕು ಪ್ರಕಾಶಿಸಲಿ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

25,000 ಹಳ್ಳಿಗಳಲ್ಲಿ ಸುವಾರ್ತೆ ಸಾರಲು ಹಸ್ತಪ್ರತಿಗಳು ಮತ್ತು ಬೈಬಲ್ ಗಳ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet