Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.04.2021
Share:

By Village Missionary Movement

Monday, 26-Apr-2021

ಧೈನಂದಿನ ಧ್ಯಾನ(Kannada) – 26.04.2021

ಮುಂಜಾನೆಯಲ್ಲಿ ಎಚ್ಚರವಾಗಿರಿ

"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು." - ಮಾರ್ಕನು 1:35

ಅಮೆರಿಕಾದ 16 ನೇ ಅಧ್ಯಕ್ಷನಾಗಿದ್ದ ಅಬ್ರಹಾಮ್ ಲಿಂಕನ್ ನನ್ನು ನೋಡಿ ಒಂದು ಮುಖ್ಯವಾದ ಕಾರ್ಯಕ್ಕೆ ಆಲೋಚನೆ ಪಡೆಯುವುದಕ್ಕಾಗಿ ಹಿರಿಯ ರಾಜಕೀಯ ಅಧಿಕಾರಿಗಳು ಮುಂಜಾನೆ ಬಹುಬೇಗನೆ ಹೊರಟರು. ಅಬ್ರಹಾಮ್ ಲಿಂಕನ್ ರವರು ಮುಂಜಾನೆಯೇ ಎದ್ದೇಳುವ ಅಭ್ಯಾಸವುಳ್ಳವರು ಎಂಬುದು ಅವರು ತಿಳಿದಿದ್ದರು. ಅವರ ಕೋಣೆಯ ಪಕ್ಕದಲ್ಲಿ ಹೋದಾಗ ಅವರು ಯಾರೊಂದಿಗೋ ಮಾತನಾಡುತ್ತಿರುವಂತಹ ಸ್ವರ ಕೇಳಿಸಿತು. ಆದ್ದರಿಂದ ಅವರನ್ನು ತೊಂದರೆ ಪಡಿಸುವ ಮನಸ್ಸಿಲ್ಲದೆ ಅವರು ಬರುವವರೆಗೂ ಪಕ್ಕದ ಕೋಣೆಯಲ್ಲಿ ಕಾದಿದ್ದರು. ಬಹಳ ಹೊತ್ತು ಕಳೆದು ಅಬ್ರಹಾಮ್ ಲಿಂಕನ್ ರವರು ಹೊರಗೆ ಬಂದರು.  "ಅಯ್ಯಾ ನಾವು ಮುಂಜಾನೆಯೇ 5 ಗಂಟೆಗೆ ಬಂದು ಬಿಟ್ಟೆವು, ನೀವು ಯಾರೊಂದಿಗೋ ಮಾತನಾಡುತ್ತಿದ್ದಿರಿ, ಆದ್ದರಿಂದ ಕಾದಿದ್ದೆವು, ಎಂದರು. ಬೇರೆ ಯಾರೂ ಅಲ್ಲ ನಾನು ದೇವರೊಂದಿಗೆ ಮಾತನಾಡುತ್ತಿದ್ದೆನು ಎಂದು ಅಬ್ರಹಾಮ್ ಲಿಂಕನ್ ಹೇಳಿದ ಕೂಡಲೇ ಅವರಿಗೆಲ್ಲ ದೊಡ್ಡ ಆಶ್ಚರ್ಯ! ಅವರ ಆಶ್ಚರ್ಯವನ್ನು ಕಂಡ ಅಬ್ರಹಾಂ ಸ್ವಲ್ಪ ವಿವರಣೆ ಕೊಟ್ಟರು.  "ನನ್ನ ಅಜ್ಜಿ ಮುಂಜಾನೆ ಎದ್ದಕೂಡಲೇ ದೇವರೊಂದಿಗೆ ಮಾತ್ರವೇ ಮೊದಲು ಮಾತನಾಡಬೇಕು ಎಂದು ಹೇಳಿದರು. ಆ ಪಾಠವನ್ನು ಇನ್ನೂ ಬಿಟ್ಟು ಬಿಡದೆ ಮೊದಲು ದೇವರೊಂದಿಗೆ ನಾನು ಮಾತನಾಡುತ್ತಿದ್ದೇನೆ"  ಎಂದರು. ಇದುವೇ ಉತ್ತಮವಾಗಿ ಅವರು ಆಳ್ವಿಕೆ ಮಾಡಲು ಕಾರಣವಾಯಿತು.

ಯೇಸುಕ್ರಿಸ್ತನು ಮುಂಜಾನೆ ಇನ್ನೂ ಮೊಬ್ಬಿರುವಾಗ ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ಪ್ರಾರ್ಥಿಸುತ್ತಿದ್ದರು. ಇವರು ಜೀವಿಸಿದ ದಿನಗಳಲ್ಲಿ ಮುಂಜಾನೆಯೆದ್ದು ಪ್ರಾರ್ಥಿಸುವವರಾಗಿದ್ದರು. ಆದ್ದರಿಂದಲೇ ಇವರು ಜಯ ಕರವಾಗಿ ತನ್ನ ಸೇವೆಯ ಮಾರ್ಗವನ್ನು ನೆರವೇರಿಸಿ ಮುಗಿಸಿದರು. ಕರ್ತನಾದ ಯೇಸು ಕ್ರಿಸ್ತನು ಮೊದಲು ತಂದೆಯೊಂದಿಗೆ ಮಾತನಾಡಿದರು. ದೇವರ ಚಿತ್ತವನ್ನು ತಿಳಿದು ನಡೆಯುವುದೇ ಅವರ ಮೊದಲ ಕೆಲಸವಾಗಿತ್ತು. ಆದ್ದರಿಂದಲೇ ಮೊಬ್ಬಿರುವಾಗಲೇ ಅವರು ಎದ್ದರು, ಪ್ರಾರ್ಥಿಸಿದರು. ಮುಂಜಾನೆಯೇ ಎದ್ದು ಪ್ರಾರ್ಥಿಸಿ ನಮಗೆಲ್ಲಾ ಮೂಲ ಮಾದರಿಯನ್ನು ತೋರಿಸಿಕೊಟ್ಟು ಹೋಗಿದ್ದಾರೆ.

ಇದನ್ನು ಓದುತ್ತಿರುವ ಪ್ರಿಯರೇ! ಮುಂಜಾನೆಯ ಪ್ರಾರ್ಥನೆ ಬಹಳ ಬೆಲೆಯುಳ್ಳದ್ದು. ನಮಗೆ ಮುಂಜಾನೆಯೇ ಎದ್ದೇಳುವ ಅಭ್ಯಾಸ ಇದೆಯಾ? ಹಾಗೆ ಎದ್ದರೂ ದೇವರನ್ನು ಹುಡುಕುತ್ತೇವಾ? ಮೊದಲು ಯಾರೊಂದಿಗೆ ಮಾತಾಡಲು ಬಯಸುತ್ತೇವೆ? ಯೋಚಿಸಿ ನೋಡೋಣ. ಮುಂಜಾನೆಯಲ್ಲಿ ಕಂಬಳಿಯನ್ನು ತ್ಯಜಿಸಿ ಎದ್ದೇಳುವುದರಿಂದಲೇ ಆ ದಿನದ ಜಯವು ಪ್ರಾರಂಭವಾಗಿಬಿಡುತ್ತದೆ. ಹಲ್ಲುಜ್ಜಿ, ಮುಖ ತೊಳೆದು ಸಿದ್ದರಾಗಿ ಅವರನ್ನು ಭೇಟಿಮಾಡಲು ಕುಳಿತುಕೊಳ್ಳಿರಿ. ಮುಂಜಾನೆಯಲ್ಲಿ ದೇವರೊಂದಿಗೆ ಮಾತನಾಡಿ ಬಿಟ್ಟು ಬೇರೆ ಕೆಲಸಗಳನ್ನು ಮಾಡೋಣ. ಮುಂಜಾನೆಯಲ್ಲಿ ಎಚ್ಚರವಾಗೋಣ, ಮುಂಜಾನೆ ಪ್ರಾರ್ಥನೆಯಲ್ಲಿ ನೆಲೆಗೊಳ್ಳೋಣ. ನಾವು ಈ ಲೋಕವನ್ನು ಜಯಿಸಿ, ಜಯ ಹೊಂದೋಣ!
-    Mrs. ಶಕ್ತಿ ಶಂಕರ್ ರಾಜನ್

ಪ್ರಾರ್ಥನಾ ಅಂಶ:-
ನಮ್ಮ ಸೇವೆಯನ್ನು ಪ್ರಾರ್ಥನೆಯಿಂದ ಬೆಂಬಲಿಸುತ್ತಿರುವ ಪಾಲುದಾರರನ್ನು ದೇವರು ಆತ್ಮ ಭಾರದಿಂದಲೂ ಪ್ರಾರ್ಥನಾ ಆತ್ಮದಿಂದಲೂ ತುಂಬಿಸಿ ಭಾರದೊಂದಿಗೆ ಪ್ರಾರ್ಥನೆ ಮಾಡಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet padişahbet giriş bets10 extrabet royalbet süperbetin jojobet padişahbet holiganbet galabet matbet matbet giriş hilbet bahiscasino celtabet antikbet betoffice