By Village Missionary Movement
Sunday, 01-Sep-2024ಧೈನಂದಿನ ಧ್ಯಾನ(Kannada) – 01.09.2024 (Kids Special)
ಕೃತಜ್ಞತೆ ಮರೆಯಬಾರದು
"ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" - ಕೀರ್ತನೆ 103:2
ಆ ಸೊಂಪಾದ ಹುಲ್ಲುಗಾವಲಿನಲ್ಲಿ ಜಿಂಕೆಯೊಂದು ಸಂತೋಷದಿಂದ ಮೇಯುತ್ತಿತ್ತು. ಅದು ತುಂಬಾ ಚೆನ್ನಾಗಿ ಬಲುತಿದ್ದ ಜಿಂಕೆಯಾಗಿತ್ತು. ಆಗ ಇಬ್ಬರು ಮೂರು ಜನ ಬೇಟೆಗಾರರು ಬೇಟೆಯಾಡಲು ಆ ಕಡೆ ಬಂದರು. ಅವರ ಕಣ್ಣುಗಳು ಈ ಜಿಂಕೆಯನ್ನು ನೋಡಿದವು. ಎಂತಹ ಕೊಬ್ಬಿದ ಜಿಂಕೆ, ಹೇಗಾದರೂ ಮಾಡಿ ಇವತ್ತು ಬೇಟೆಯಾಡಬೇಕು ಎಂದುಕೊಂಡು ಅದರ ಮೇಲೆ ಬಾಣ ಬಿಟ್ಟರು. ಅದೃಷ್ಟವಶಾತ್ ಆ ಬಾಣ ಜಿಂಕೆಗೆ ತಾಗಲಿಲ್ಲ. ತನಗೆ ಅಪಾಯವಿದೆ ಎಂದು ಅರಿತ ಜಿಂಕೆ ವೇಗವಾಗಿ ಓಡತೊಡಗಿತು.
ಬೇಟೆಗಾರರು ಕೂಡ ಜಿಂಕೆಯನ್ನು ಅಟ್ಟಾಡಿಸಿಕೊಂಡು ಓಡಿದರು. ಜಿಂಕೆ ಗಾಳಿಯಂತೆ ಹಾರಿಹೋಯಿತು. ಒಂದು ಪೊದೆಯಲ್ಲಿ ಹೋಗಿ ಅಡಗಿಕೊಂಡಿತು. ಬೆಳೆದ ಬಳ್ಳಿಗಳು ಜಿಂಕೆಯನ್ನು ತಮ್ಮ ಎಲೆಗಳಿಂದ ಮುಚ್ಚಿಕೊಂಡವು. "ಜಿಂಕೆಯೇ ಚಿಂತಿಸಬೇಡ ಆ ಬೇಟೆಗಾರರ ಕಣ್ಣುಗಳಲ್ಲಿ ಬೀಳದಂತೆ ಎಲೆಗಳಾದ ನಾವು ನಿನ್ನನ್ನು ರಕ್ಷಿಸುತ್ತೇವೆ" ಎಂದವು. ಜಿಂಕೆಯೂ ಸಹ ಸದ್ದು ಮಾಡದೆ ನಿಂತಿತು. ಬೇಟೆಗಾರರು ಜಿಂಕೆಯನ್ನು ಕಾಣದೆ ದಿಗ್ಭ್ರಮೆಗೊಂಡರು. ಸ್ವಲ್ಪ ಹೊತ್ತು ಮೌನವಾಗಿ ನಿಂತರು.
ಅಡಗಿದ್ದ ಜಿಂಕೆಯು ಬೇಟೆಗಾರರು ಹೋದರೆಂದು ಭಾವಿಸಿತು. ಅಬ್ಬಾಡಾ ತಪ್ಪಿಸಿಕೊಂಡೆನೆಂದು ಭಾವಿಸಿ ಬೇಟೆಗಾರರ ಕಣ್ಣಿಗೆ ಬೀಳದಂತೆ ಬಚ್ಚಿಟ್ಟಿದ್ದ ಬಳ್ಳಿಯ ಎಲೆಗಳನ್ನು ‘ಇನ್ನು ನೀವು ನನಗೆ ಬೇಕಾಗಿಲ್ಲ" ಎಂಬಂತೆ ಪರ ಪರ ಎಂದು ಕಚ್ಚಿ ತಿನ್ನಲು ಪ್ರಾರಂಭಿಸಿತು. ಹಾಗೆ ತಿನ್ನಲು ಪ್ರಾರಂಭಿಸಿದಾಗ ಉಂಟಾದ ಶಬ್ದದಿಂದಲೂ ಮತ್ತು ಎಲೆಗಳನ್ನು ತಿನ್ನುವುದರಿಂದ ಉಂಟಾದ ಅಂತರದಿಂದಲೂ ಬೇಟೆಗಾರರು ಜಿಂಕೆ ಇರುವ ಸ್ಥಳವನ್ನು ಕಂಡುಕೊಂಡರು. ಸ್ವಲ್ಪವೂ ತಡಮಾಡದೆ ಜಿಂಕೆಯನ್ನು ಬೇಟೆಯಾಡಿದರು. ಕೃತಜ್ಞತೆ ಇಲ್ಲದ ಜಿಂಕೆ ಸತ್ತುಹೋಯಿತು.
ಪ್ರೀತಿಯ ಮುದ್ದು ಪುಟಾಣಿಗಳೇ! ಸ್ವಲ್ಪ ಯೋಚಿಸಿ ನೋಡಿ. ನಾವು ಈರೀತಿ ಎಷ್ಟು ಬಾರಿ ಮಾಡಿದ್ದೇವೆ. ಇತರರು ನಮಗಾಗಿ ಮಾಡಿದ ಒಳ್ಳೆಯದನ್ನು ಮರೆತು ನಾವು ಕೃತಜ್ಞತೆ ಇಲ್ಲದವರಾಗಿ ನಡೆದುಕೊಂಡಿದ್ದೇವಲ್ಲವೇ? ನಮಗೆ ಒಳ್ಳೆಯದಾಗುವ ತನಕ ಅವರ ಜೊತೆ ಇದ್ದು ನಮ್ಮ ಕೆಲಸ ಮುಗಿದ ಮೇಲೆ ಎಸ್ಕೇಪ್ ಆಗುತ್ತೇವಲ್ಲವೇ? ಯೇಸಪ್ಪನ ಮಕ್ಕಳು ಈ ರೀತಿ ವರ್ತಿಸಬಾರದು. ಸಣ್ಣ ಸಹಾಯಕ್ಕಾಗಿ ಇತರರಿಗೆ ಧನ್ಯವಾದ ಹೇಳಲು ಅಭ್ಯಾಸ ಮಾಡಿಕೊಳ್ಳಿ. ಇತರರು ನಮಗೆ ಸ್ವಲ್ಪ ಸಹಾಯ ಮಾಡಿದ್ದರೂ ಸಹ, ಅವರಿಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಲು ನಾವು ಅವಕಾಶಗಳನ್ನು ಹುಡುಕಬೇಕು.
ಯೇಸು ಕ್ರಿಸ್ತನು ಸಹ ಕೃತಜ್ಞತೆಯ ಹೃದಯವನ್ನು ನಿರೀಕ್ಷಿಸುತ್ತಾರೆ. ಅವರು ನಮಗೆ ದಿನನಿತ್ಯವೂ ಜೀವ, ಸೌಖ್ಯ, ಬಲ ಮತ್ತು ಹೇರಳವಾದ ಪ್ರಯೋಜನಗಳನ್ನು ನೀಡುತ್ತಲೇ ಇದ್ದಾರಲ್ಲವೇ! ಇದೆಲ್ಲದಕ್ಕಾಗಿ ನೀನು ಅವರಿಗೆ ಕೃತಜ್ಞತೆ ಹೇಳುತ್ತೀಯಾ? ಯೋಚಿಸಿ ನೋಡಿ ಕೃತಜ್ಞತೆಯ ಮಗುವಿನಂತೆ ಬದುಕಲು ಪ್ರಯತ್ನಿಸು. Ok ನಾ!
- L. ಪ್ರಭಾಕರನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482