Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.08.2024
Share:

By Village Missionary Movement

Saturday, 31-Aug-2024

ಧೈನಂದಿನ ಧ್ಯಾನ(Kannada) – 31.08.2024

 

ಎಲುಬುಗಳಿಗೆ ಕ್ಷಯ

 

"ಸ್ವಸ್ಥವಾದ ಹೃದಯವು ದೇಹಕ್ಕೆ ಜೀವ; ಮತ್ಸರವು ಎಲುಬುಗಳಿಗೆ ಕ್ಷಯವು" - ಜ್ಞಾನೋಕ್ತಿಗಳು 14:30

  

ಒಬ್ಬ ಶಿಲ್ಪಿ ಅತ್ಯಂತ ಉತ್ತಮವಾದ ಪ್ರತಿಮೆಯನ್ನು ಮಾಡಿ ಸಾರ್ವಜನಿಕ ವೀಕ್ಷಣೆಗೆ ಇಟ್ಟನು. ಪ್ರತಿಮೆಯ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಬರೆಯಲು ಅವರು ಅದರ ಬಳಿ ಕಪ್ಪು ಹಲಗೆಯನ್ನು ಇಟ್ಟಿದ್ದರು. ಅದನ್ನು ನೋಡಿದವರೆಲ್ಲರೂ ಅದರ ಕಲಾತ್ಮಕ ಮಾಧುರ್ಯಕ್ಕೆ ಬೆರಗಾಗಿ ಶಿಲ್ಪಿಯನ್ನು ಹೊಗಳಿದರು. ಆದರೆ ಅಲ್ಲಿಗೆ ಮತ್ತೊಬ್ಬ ಶಿಲ್ಪಿ ಬಂದ. ಅವನ ಹೃದಯದಲ್ಲಿ ತುಂಬಿದ್ದ ಅಸೂಯೆ ಅವನ ಕಣ್ಣುಗಳು ತಪ್ಪನ್ನು ಹುಡುಕುವಂತೆ ಮಾಡಿತು. ಆದ್ದರಿಂದ ಅವನು ಹಲವಾರು ಗಂಟೆಗಳ ಕಾಲ ಶಿಲೆಯನ್ನು ಬಹಳ ಎಚ್ಚರಿಕೆಯಿಂದ ಪರೀಕ್ಷಿಸಿದನು. ಕೊನೆಗೆ ಅದರಲ್ಲಿ ಒಂದು ಕೊರತೆಯನ್ನು ಕಂಡುಹಿಡಿದನು. ಕಪ್ಪು ಹಲಗೆಯ ಮೇಲೆ ಆ ಸಣ್ಣ ದೋಷವನ್ನು ದೊಡ್ಡ ಅಕ್ಷರಗಳಲ್ಲಿ ಬರೆದನು. ಆ ನಂತರ ಅಲ್ಲಿಗೆ ಬಂದವರೆಲ್ಲ ಆ ಕೊರತೆಯನ್ನು ಸೂಕ್ಷ್ಮವಾಗಿ ನೋಡಿದರು. ಅವರಿಗೆ ಶಿಲೆಯ ಸೊಬಗು ಗೊತ್ತಾಗಲಿಲ್ಲ.

  

ಸತ್ಯವೇದದಲ್ಲಿ ಸಹೋದರರು ಯೋಸೇಫನ ಮೇಲೆ ಅಸೂಯೆಪಟ್ಟದ್ದನ್ನು ನೋಡಬಹುದು. ಯೋಸೇಫನು ಯಾಕೋಬನ ವೃದ್ಧಾಪ್ಯದಲ್ಲಿ ಜನಿಸಿದ ಕಾರಣ, ಅವರು ಅವನನ್ನು ಇತರ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ ಅವನಿಗೆ ವರ್ಣರಂಜಿತ ಅಂಗಿಯನ್ನು ಕೊಟ್ಟರು. ಅವನು ಕಂಡ ಕನಸಿನ ನಿಮಿತ್ತವಾಗಿ ಅವನ ಮೇಲೆ ಅಸೂಯೆ ಪಟ್ಟು ಅವನನ್ನು ಕೊಂದುಹಾಕೋಣ ಎಂದು ಭಾವಿಸಿದರು. ನಂತರ ಇಷ್ಮಾಯೇಲರ ಕೈಯಲ್ಲಿ 20 ಬೆಳ್ಳಿಯ ನಾಣ್ಯಗಳಿಗೆ ಮಾರಿಬಿಟ್ಟರು. ಅವರು ಯೋಸೇಫನನ್ನು ಐಗುಪ್ತಕ್ಕೆ ಕರೆದೊಯ್ದರು. ಐಗುಪ್ತದಲ್ಲಿ ಮಿದ್ಯಾನ್ಯನಾದ ಫರೋಹನ ಅಧಿಪತಿಯಾದ ಪೋಟೀಫರನಿಗೆ ಮಾರಿದರು. ಕರ್ತನು ಯೋಸೇಫನ ಸಂಗಡ ಇದ್ದರು. ಆದ್ದರಿಂದ ಅವರನ್ನು ಐಗುಪ್ತಕ್ಕೆ ಅಧಿಕಾರಿಯಾಗಿ ಮಾರ್ಪಡಿಸಿದರು. ಅಸೂಯೆ - ಯೋಸೇಫನು ತಂದೆಯನ್ನು ಬಿಟ್ಟು, ಮನೆಯನ್ನು ಬಿಟ್ಟು ಮತ್ತು ದೇಶವನ್ನು ಬಿಟ್ಟು ಹೋಗಲು ಕಾರಣವಾಯಿತು. ಆದರೂ ಎಲ್ಲವೂ ದೇವರ ಚಿತ್ತವಾಗಿತ್ತು. ಮತ್ತೊಬ್ಬರನ್ನು ಕಂಡು ಅಸೂಯೆ ಪಡುವುದು ನಿಮಗೂ ಇದೆ. ನೆರೆಯವನ ಮೇಲೆ ಅಸೂಯೆ ಪಡುವುದು ಸರಿಯಲ್ಲ. ಮತ್ತೊಬ್ಬರ ಜೀವನವನ್ನೋ ಅಥವಾ ಆಶೀರ್ವಾದವನ್ನೋ ನೋಡಿ ಅಸೂಯೆಪಡಬಾರದು. ದೇವರ ವಾಕ್ಯವು ಹೀಗೆ ಹೇಳುತ್ತದೆ, ಅಸೂಯೆಯು ಎಲುಬಿಗೆ ಕ್ಷಯ (T.B). ಕ್ಷಯರೋಗವು ಹೊರಗೆ ಕಾಣದೆ ದೇಹದ ಆರೋಗ್ಯವನ್ನು ಒಳಗಿನಿಂದ ನಾಶಪಡಿಸುತ್ತದೆ ಮತ್ತು ಆಂತರಿಕ ಅಂಗಗಳನ್ನು ನಾಶಪಡಿಸುತ್ತದೆ. ಅಸೂಯೆಯನ್ನು ಇದಕ್ಕೆ ಹೋಲಿಸಿ ಹೇಳಲಾಗಿದೆ.  

  

ಇದನ್ನು ಓದುತ್ತಿರುವ ನಾವು ಎಂತವರಾಗಿದ್ದೇವೆ ಎಂದು ಯೋಚಿಸಿ ನೋಡೋಣ. ನಮಗೊಂದು ಸಿಗಲಿಲ್ಲ ಎಂದು ಪಶ್ಚಾತ್ತಾಪ ಪಡುವ ಬದಲು, ಮತ್ತೊಬ್ಬರಿಗೆ ಅದು ಸಿಗಲಿಲ್ಲ ಎಂದು ಖುಷಿ ಪಡುವ ಅಸೂಯೆ ನಮ್ಮಲ್ಲಿದೆಯೇ ಎಂದು ನೋಡಿ ನಮ್ಮನ್ನು ನಾವು ತಿದ್ದಿಕೊಳ್ಳೋಣ.

- C. ಪಾಲ್ ಜೆಬಸ್ಟಿನ್ 

 

ಪ್ರಾರ್ಥನಾ ಅಂಶ:

ಕೈಪ್ರತಿ ಸೇವೆಯ ಮೂಲಕ ಭೇಟಿಯಾಗುದ ಜನರು ದೇವರ ಪ್ರೀತಿಯನ್ನು ಅನುಭವಿಸಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al