Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.08.2024
Share:

By Village Missionary Movement

Friday, 30-Aug-2024

ಧೈನಂದಿನ ಧ್ಯಾನ(Kannada) – 30.08.2024

 

ನೀವೂ ಸಹ ಶಿಷ್ಯರೇ 

 

"…ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು" - 1 ಪೇತ್ರ 2:21

  

ಒಂದು ಸೇವಕ ಕುಟುಂಬ ಕಾಶ್ಮೀರ ರಾಜ್ಯಕ್ಕೆ ಸೇವೆ ಸಲ್ಲಿಸಲು ಹೊರಟಿತು. ಆದರೆ ಅವರಿಗೆ ಅಲ್ಲಿ ಮಾತನಾಡುವ ಭಾಷೆ ಗೊತ್ತಿಲ್ಲ. ಅವರು ಮನೆಯಲ್ಲೇ ಪ್ರಾರ್ಥಿಸುತ್ತಾ, ಸತ್ಯವೇದವನ್ನು ಓದುತ್ತಾ ಈ ಭಾಷೆಯನ್ನು ಕಲಿಯುತ್ತಾ ಬಂದರು. ಒಂದು ರಾತ್ರಿ ಒಬ್ಬ ಮುದುಕ ಬಂದು ಸೇವಕನ ಮನೆಯ ಬಾಗಿಲು ತಟ್ಟಿ, ಮರಿ ಹಾಕುವ ಹಂತದಲ್ಲಿದ್ದ ತನ್ನ ಮೇಕೆ ಕಾಡಿಗೆ ಹೋಗಿದೆ ಎಂದು ಹೇಳಿದನು. ನೀವು ಪ್ರಾರ್ಥಿಸುವವರು ಎಂದು ಜನ ಹೇಳೋದು ಕೇಳಿಸಿಕೊಂಡೆ, ಆ ಕುರಿ ಸುರಕ್ಷಿತವಾಗಿ ಇರಬೇಕೆಂದು ಪ್ರಾರ್ಥಿಸಿ ಎಂದು ಹೇಳಿ ಹೊರಟುಹೋದರು. ಆ ಸೇವಕರು ಮೇಕೆಯೇ ತಾನೇ ಕಾಣಿಸದೇ ಹೋಗಿರೋದು ಎಂದು ಅಸಡ್ಡೆ ತೋರದೆ, ಆ ರಾತ್ರಿಯಿಡೀ ಪ್ರಾರ್ಥಿಸಿದರು. ಮಾರನೆಯ ದಿನ ಮುದುಕನು ಬಂದು ಮಾರಣಾಂತಿಕ ಮೃಗಗಳು ವಾಸಿಸುವ ಆ ಕಾಡಿನಲ್ಲಿ ತನ್ನ ಮೇಕೆ‌ ಮರಿಹಾಕಿ ಮರಿಯೊಂದಿಗೆ ಸುರಕ್ಷಿತವಾಗಿ ಹಿಂತಿರುಗಿತು. ಇನ್ನು ಮುಂದೆ ನಾನು ಕೂಡ ಆ ಯೇಸುವನ್ನು ದೇವರೆಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.

   

ಹೊಸ ಒಡಂಬಡಿಕೆಯಲ್ಲಿ ಪೌಲನಾದ ಸೌಲನು ನಮಗೆ ಗೊತ್ತು . ಇವರು ಸ್ತೆಫನನ್ನು ಕೊಲೆಮಾಡುವಾಗ ಕೊಲೆಮಾಡಿದವರ ಗುಂಪಿನಲ್ಲಿ ಅವರೇ ಪ್ರಮುಖ ವ್ಯಕ್ತಿಯಾಗಿದ್ದರು. ಮತ್ತು ಕ್ರೈಸ್ತರಿಗೆ ತುಂಬಾ ಕಿರುಕುಳ ನೀಡಿದರು. ಹೀಗಿದ್ದ ಸೌಲನನ್ನು ಒಂದು ದಿನ ಕರ್ತನು ಭೇಟಿಯಾದರು. ತಕ್ಷಣವೇ ಸೌಲನು ರಕ್ಷಿಸಲ್ಪಟ್ಟನು ಮತ್ತು ತಡಮಾಡದೆ ದೀಕ್ಷಾಸ್ನಾನ ಪಡೆದು ಯೇಸುವನ್ನು ಬೋಧಿಸಲು ಪ್ರಾರಂಭಿಸಿದರು. ಸಭೆಗೆ ಕಿರುಕುಳ ನೀಡಿದ ಸೌಲನು ಪೌಲನಾದನು. ದೊಡ್ಡ ಉಜ್ಜೀವನ ಉಂಟಾಯಿತು.

 

ಪ್ರಿಯರೇ! ಸಂದರ್ಭಗಳು ಅನುಕೂಲಕರವಾಗಿಲ್ಲದ ಕಾರಣ ನೀವು ಸೇವೆಯಲ್ಲಿ ಮತ್ತು ಸುವಾರ್ತಾಬೋಧನೆಯಲ್ಲಿ ಎಡವಿ ಬೀಳುತ್ತಿದ್ದೀರಾ? ಭಾಷೆ ತಿಳಿದಿಲ್ಲದ ಸ್ಥಳದಲ್ಲಿ ಮತ್ತು ಪ್ರತಿಕೂಲವಾದ ಸಂದರ್ಭಗಳಲ್ಲಿ, ದೇವರು ತನ್ನ ಕೆಲಸವನ್ನು ಮಾಡುತ್ತಲೇ ಇರುತ್ತಾನೆ. ಸರಿಯಾದ ಸಮಯದಲ್ಲಿ ಅವರು ಪರಿಸ್ಥಿತಿಯನ್ನು ಸರಿಪಡಿಸುತ್ತಾರೆ ಮತ್ತು ಕೆಲಸಗಳನ್ನು ಮಾಡುತ್ತಾರೆ ದೇವರ ಮಾತನ್ನು ಪಾಲಿಸಿ ಆತನ ಮಾರ್ಗವನ್ನು ಅನುಸರಿಸಿದರೆ ಸಾಕು. ಅದ್ಭುತಗಳು ನಡೆಯುತ್ತವೆ, ಬದಲಾವಣೆಗಳು ಸಂಭವಿಸುತ್ತವೆ. ದೇವರ ನಾಮವು ಮಹಿಮೆಹೊಂದುತ್ತದೆ. ನಿಮ್ಮನ್ನು ಉಪಯೋಗಿಸುತ್ತಾರೆ. ಕರ್ತನ ಕೈಯಲ್ಲಿ ನಿಮ್ಮ ಚಿತ್ತವನ್ನು ಮಾಡಲು ನಾನಿದ್ದೇನೆ ಎಂದು ನಮ್ಮನ್ನು ಸಮರ್ಪಿಸಿಕೊಳ್ಳುವಾಗ, ಯೇಸುವನ್ನು ಅನುಸರಿಸುವ ನಮ್ಮ ಮೂಲಕ ಅನೇಕ ಶಿಷ್ಯರನ್ನು ಮಾಡುವುದು ಅವರಿಗೆ ಸುಲಭವಾದ ಕಾರ್ಯ. ಅವರ ಹೆಜ್ಜೆಜಾಡುಗಳನ್ನು ಅನುಸರಿಸುವ ನಾವು ಅವರಂತೆಯೇ ಮಾರ್ಪಡುತ್ತೇವೆ! ಅನೇಕರನ್ನು ಶಿಷ್ಯರನ್ನಾಗಿ ಮಾಡೋಣ!!

- Sis. ಎಸ್ತೇರ್ ಸೆಲ್ವಿ

 

ಪ್ರಾರ್ಥನಾ ಅಂಶ:

ನಮ್ಮ ಮಿಷನರಿ ಮಕ್ಕಳ ವಿದ್ಯಾಭ್ಯಾಸದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al