Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.08.2024
Share:

By Village Missionary Movement

Thursday, 29-Aug-2024

ಧೈನಂದಿನ ಧ್ಯಾನ(Kannada) – 29.08.2024

 

ಬೆರೆಯದಂತೆ ಎಚ್ಚರವಹಿಸಿ

 

"…ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ” - ಯಾಜಕಕಾಂಡ 20:24

  

ಒಂದು ಕಾಡಿನಲ್ಲಿ ಒಂದು ಕಪ್ಪೆ ಮತ್ತು ಇಲಿ ಸ್ನೇಹಿತರಾಗಿದ್ದರು. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಅಂದರೆ, ಹಗ್ಗ ಹಿಡಿದು ಒಂದು ಕಡೆ ಕಪ್ಪೆ ಇನ್ನೊಂದು ಕಡೆ ಇಲಿ ಕಟ್ಟಿಕೊಂಡು ಕಾಡೆಲ್ಲಾ ತಿರುಗುವ ಮಟ್ಟಿಗೆ! ಮಳೆಗಾಲ ಬಂತು. ಕಾಡಿನ ಕೆರೆಗಳೆಲ್ಲ ತುಂಬಿದ್ದವು. ನೀರು ಕಂಡ ಕಪ್ಪೆ ತನ್ನ ಸ್ನೇಹಿತನನ್ನು ಮರೆತು ಕೊಳಕ್ಕೆ ಹಾರಿ ಆಕಡೆ ಈಕಡೆ ಈಜುತ್ತಿತ್ತು. ಆದರೆ ಇನ್ನೊಂದು ಬದಿಯಲ್ಲಿ ಕಟ್ಟಿದ್ದ ಇಲಿಯ ಸ್ಥಿತಿಯು ದಯನೀಯವಾಗಿತ್ತು. ಉಸಿರುಗಟ್ಟಿ ಕೊನೆಗೆ ಸತ್ತುಹೋಯಿತು. ಗಿಡುಗವು ಸತ್ತ ಇಲಿಯನ್ನು ಕಂಡು ಅದನ್ನು ಎತ್ತಿದಾಗ ಕಪ್ಪೆ ಕೂಡ ಅದರ ಆಹಾರವಾಯಿತು. ಇದು ಅನುಚಿತ ಸ್ನೇಹದ ಪರಿಣಾಮವಾಗಿದೆ.                   

 

ನಾವು ಈ ಜಗತ್ತಿನಲ್ಲಿ ವಾಸಿಸುತ್ತಿದ್ದರೂ, ನಾವು ಈ ಪ್ರಪಂಚದವರಲ್ಲ, ನಾವು ಬೇರೆಯಾಗಿದ್ದೇವೆ. ನಾವು ಯಾವಾಗ ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟೆವೋ, ಆಗಲೇ ಲೋಕದವರನ್ನು ಬಿಟ್ಟು ಪ್ರತ್ಯೇಕ ಜೀವನಕ್ಕೆ ಬಂದುಬಿಟ್ಟೆವು. ಹೇಗಾದರೂ ಬದುಕಿರಿ ಎಂದು ದೇವರು ನಮ್ಮನ್ನು ಬಿಟ್ಟು ಬಿಡದೇ ತನ್ನ ಸಂಕಲ್ಪಕ್ಕೆ, ತನ್ನ ಪ್ರೀತಿಗೆ, ಕರೆತಂದರು. ದೇವರ ಜನರಾದ ನಾವು ಆತನ ನಾಮದ ಮಹಿಮೆಗಾಗಿ ಪ್ರತ್ಯೇಕಿಸಲ್ಪಟ್ಟ ಜೀವನವನ್ನು ನಡೆಸಲು ಕರೆಯಲ್ಪಟ್ಟಿದ್ದೇವೆ.

  

ಇಂದಿನ ಸತ್ಯವೇದ ಭಾಗದಲ್ಲಿ, ಅಬ್ರಹಾಮನ ಜೀವನದಲ್ಲಿ ಕರ್ತನು ಮಾಡಿದ ಮತ್ತೊಂದು ಪ್ರತ್ಯೇಕತೆಯನ್ನು ನಾವು ಓದುತ್ತೇವೆ. ಯಾವುದರಿಂದೆಲ್ಲಾ ಬೇರ್ಪಡಿಸಿದರು, ಮೊದಲನೆಯದು ತನ್ನ ದೇಶದಿಂದ, ಎರಡನೆಯದು ಅವರ ಜನಾಂಗದಿಂದ, ಮೂರನೆಯದು ಅವರ ತಂದೆಯ ಮನೆಯಿಂದ. ಇದಕ್ಕೆಲ್ಲಾ ಕಾರಣವೇನು? ಆ ಸಮಾಜವು ಅವರನ್ನು ಕಳಂಕಿಸಬಹುದು. ಆದುದರಿಂದ ನೀನು ಪ್ರತ್ಯೇಕವಾಗಿ ಬಾಬಿಲೋನ್ ದೇಶದಿಂದ ಹೊರಗೆ ಬರಬೇಕು ಎಂದು ಹೇಳಿದರು. ದೇವರ ಮಕ್ಕಳು ಜಗತ್ತಿಗೆ ಅನುಗುಣವಾಗಿರಬಾರದು. ದಾನಿಯೇಲ್ ಮತ್ತು ಯೋಸೇಫನು ಪ್ರತ್ಯೇಕ ಜೀವನವನ್ನು ನಡೆಸಿ ದೇವರ ಆಶೀರ್ವಾದವನ್ನು ಪಡೆದುಕೊಂಡರು.

 

ಪ್ರೀತಿಯ ದೇವರ ಮಕ್ಕಳೇ! ಇದನ್ನು ಓದುತ್ತಿರುವ ನೀವೂ ಸಹ ದೇವರಿಂದ ಆರಿಸಲ್ಪಟ್ಟವರು. ನಾವು ಬದುಕುತ್ತಿರುವ ಈ ದಿನಗಳಲ್ಲಿ ಆತ್ಮಕ್ಕೆ ಮಸಿ ಬಳಿಯುವ ಅನೇಕ ಸಂಗತಿಗಳು ನಮ್ಮ ಸುತ್ತ ಇರುತ್ತವೆ. ಈ ಸಮಾಜದಲ್ಲಿ ಕಂಡುಬರುವ ವಿಚಿತ್ರಗಳು, ಸೈತಾನನ ಬಲೆಗಳು, ಭ್ರಮೆಗಳು ಇತ್ಯಾದಿಗಳಿಗೆ ನಾವು ಸಿಲುಕಿಕೊಳ್ಳದಂತೆ ಪ್ರತ್ಯೇಕಿಸಲ್ಪಟ್ಟ ಜೀವನವನ್ನು ನಡೆಸುವಂತೆ ದೇವರು ನಮ್ಮಲ್ಲಿ ಬಯಸುತ್ತಿದ್ದಾರೆ. ಇದನ್ನು ಅರಿತುಕೊಂಡವರಾಗಿ, ಯೇಸುವಿನ ಸಾಕ್ಷಿಗಳಾಗಿ ಬದುಕಲು ನಾವು ಇಂದೇ ನಮ್ಮ ಜೀವನವನ್ನು ಕಣ್ಣೀರಿನಿಂದ ಸಮರ್ಪಿಸೋಣ. ದೇವರ ಆಶೀರ್ವಾದ ಪಡೆಯಲು ಸಿದ್ಧರಾಗೋಣ.  

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಅನ್ನ ನೀಡುವ ಯೋಜನೆಯ ಫಲಾನುಭವಿಗಳು ದೇವರ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al