By Village Missionary Movement
Monday, 26-Aug-2024ಧೈನಂದಿನ ಧ್ಯಾನ(Kannada) – 26.08.2024
ನಿಮ್ಮ ಮೌಲ್ಯ ಏನು?
"….ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ" - 1 ಪೇತ್ರ 1:19
ಕ್ರಿ.ಪೂ 75 ರಲ್ಲಿ ಜೂಲಿಯಸ್ ಸೀಸರ್ ಎಂಬ ರೋಮನ್ ಚಕ್ರವರ್ತಿ ಹಣಕ್ಕಾಗಿ ಅಪಹರಿಸಲ್ಪಟ್ಟ ಒಂದು ಕಥೆಯನ್ನು ಹೇಳುತ್ತಾರೆ. ಅವರನ್ನು ಬಿಡಿಸಲು 20 ತಲಾಂತು ಬೆಳ್ಳಿಯನ್ನು ಕೇಳಿದರು. ಸೀಸರ್ ಈ ಮೊತ್ತಕ್ಕೆ ನಕ್ಕರು, ವಿಮೋಚನಾ ಮೌಲ್ಯವನ್ನು ಸಾವಿರ ತಲಾಂತುಗಳಾಗಿ ಹೆಚ್ಚಿಸುವಂತೆ ಹೇಳಿದರು. ಯಾಕಂದರೆ ಅವರು 20 ಕ್ಕಿಂತ ಹೆಚ್ಚು ತಲಾಂತುಗಳಿಗೆ ಯೋಗ್ಯನೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಈತ ಯಾರೆಂದು ಅಪಹರಣಕಾರರಿಗೆ ಗೊತ್ತಿರಲಿಲ್ಲ.
ಸೀಸರ್ ಗರ್ವವಾಗಿ ತನ್ನ ಮೌಲ್ಯವನ್ನು ಹಣದಿಂದ ನಿರ್ಣಯಿಸಿಕೊಂಡದ್ದಕ್ಕೂ ಮತ್ತು ದೇವರು ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಇಟ್ಟಿರುವ ಮೌಲ್ಯಕ್ಕೂ ಎಷ್ಟು ವ್ಯತ್ಯಾಸವಿದೆ! ನಮ್ಮ ಮೌಲ್ಯವನ್ನು ಹಣದಿಂದ ಅಳೆಯಲಾಗುವುದಿಲ್ಲ; ನಮ್ಮ ಪರಮತಂದೆ ನಮಗಾಗಿ ಏನು ಮಾಡಿದರು ಎಂಬುದನ್ನು ನಮ್ಮ ಮೌಲ್ಯವೇ ತೋರಿಸುತ್ತದೆ.
ನಮ್ಮನ್ನು ರಕ್ಷಿಸಲು ದೇವರು ಏನನ್ನು ಕ್ರಯಧನವಾಗಿ ಕೊಟ್ಟರು? ತಂದೆಯಾದ ದೇವರು ತನ್ನ ಒಬ್ಬನೇ ಮಗನನ್ನು ಶಿಲುಬೆಯಲ್ಲಿ ಜೀವಂತ ಯಜ್ಞವಾಗಿ ಒಪ್ಪಿಸಿಕೊಟ್ಟು, ನಮ್ಮನ್ನು ಪಾಪಗಳು ಮತ್ತು ಶಾಪಗಳಿಂದ ವಿಮೋಚಿಸಲು ತಂದೆಯಾದ ದೇವರು ಕ್ರಯಧನವನ್ನು ಸಲ್ಲಿಸಿದರು. "ನಿಮ್ಮ ಪೂರ್ವಿಕರಿಂದ ಪಾರಂಪರ್ಯವಾಗಿ ನೀವು ಅನುಸರಿಸುತ್ತಾ ಬಂದ ವ್ಯರ್ಥವಾದ ನಡವಳಿಕೆಯಿಂದ ನಾಶವಾಗುವ ವಸ್ತುಗಳಾದ ಬೆಳ್ಳಿ ಮತ್ತು ಬಂಗಾರದ ವಸ್ತುಗಳಿಂದ ನೀವು ವಿಮೋಚನೆಗೊಂಡಿಲ್ಲ, ನಿಷ್ಕಳಂಕ ಮತ್ತು ದೋಷರಹಿತ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ವಿಮೋಚನೆಗೊಂಡಿದ್ದೀರಿ ಎಂಬುದನ್ನು ಅರಿತಿದ್ದೀರಲ್ಲಾ."
ಪ್ರಿಯರೇ! ದೇವರಿಗೆ ನಮ್ಮ ಮೇಲಿರುವ ಅಪರಿಮಿತ ಪ್ರೀತಿಯಿಂದಾಗಿ, ಆತನು ತನ್ನ ಒಬ್ಬನೇ ಮಗನನ್ನು ಶಿಲುಬೆಯ ಮರಣಕ್ಕೆ ಒಪ್ಪಿಸಿಕೊಟ್ಟು, ಮಗನ ರಕ್ತವನ್ನೇ ನಮಗೆ ಕ್ರಯಧನವಾಗಿ ಸಲ್ಲಿಸಿ ನಮ್ಮನ್ನು ವಿಮೋಚಿಸಲು ಮರಣವನ್ನು ಜಯಿಸಿ ಜೀವಂತವಾಗಿ ಎದ್ದರು. ಅಷ್ಟರ ಮಟ್ಟಿಗೆ ನೀವು ಅವರಲ್ಲಿ ಬೆಲೆಯುಳ್ಳವರು. ಸೀಸರ್ ತನ್ನ ಮೌಲ್ಯವನ್ನು ಹಣದಿಂದ ತೋರಿಸಿದನು. ಆದರೆ ನಮ್ಮ ಮೌಲ್ಯವು ಭೂಮಿ ಆಕಾಶವನ್ನು ನಿರ್ಮಿಸಿದ ಯೇಸು ಕ್ರಿಸ್ತನಲ್ಲಿದೆ. ದೇವರು ನಮ್ಮನ್ನು ವಿಮೋಚಿಸಲು ಸಲ್ಲಿಸಿದ ಕ್ರಯಧನವೇ ನಮ್ಮ ಬೆಲೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ನಿಮ್ಮನ್ನು ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ. ನಿಮ್ಮ ಮೌಲ್ಯವನ್ನು ಅರಿತುಕೊಳ್ಳಿ. ನೀವು ಬಹುಬೆಲೆಯುಳ್ಳವರು. ಹಲ್ಲೇಲೂಯಾ!
- A. ಬ್ಯೂಲಾ
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆಯುವವರು ದೇವರ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482