By Village Missionary Movement
Sunday, 25-Aug-2024ಧೈನಂದಿನ ಧ್ಯಾನ(Kannada) – 25.08.2024 (Kids Special)
ವೆಸ್ಲಿಯ ಪ್ರಾರ್ಥನೆ
"ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು" - 1 ಯೋಹಾನ 1:9
ಏನು ಪುಟಾಣಿಗಳೇ! ಭಾನುವಾರ ಎಂದರೇನೆ ಸಂತೋಷ. ಪ್ರತಿ ವಾರ ಕಥೆಯನ್ನು ಕೇಳೋಕೆ ನಿಮಗೆ ಇಷ್ಟತಾನೇ! ಇಂದು ಒಬ್ಬ ಕಳ್ಳ ಮಾನಸಾಂತರ ಹೊಂದಿದ ಒಂದು ನಿಜವಾದ ಕಥೆಯನ್ನು ಕೇಳೋಣ್ವಾ? ಜಾನ್ ವೆಸ್ಲಿ ಅವರು ಆಗಾಗ್ಗೆ ವಿದೇಶದಲ್ಲಿ ಸೇವೆಗಾಗಿ ಪ್ರಯಾಣಿಸುತ್ತಾರೆ. ಒಂದು ದಿನ ಅವರು ಸೇವೆ ಮುಗಿಸಿ ಮನೆಗೆ ಮರಳುತ್ತಿದ್ದರು. ರಾತ್ರಿ ವಾಹನ ಸಂಚಾರ ಇಲ್ಲದ ವೇಳೆ ಕಳ್ಳನೊಬ್ಬ ಚಾಕು ತೋರಿಸಿ ಬೆದರಿಸಿ ನಿನ್ನ ಬಳಿಯಿರುವ ಹಣ ಕೊಡು ಎಂದು ದಾರಿಯಲ್ಲಿ ಅಡ್ಡವಾಗಿ ನಿಂತನು. ಜಾನ್ ವೆಸ್ಲಿ ಕೂಡಲೇ ತನ್ನಲ್ಲಿದ್ದ ಸ್ವಲ್ಪ ಹಣವನ್ನೂ ಕೊಟ್ಟುಬಿಟ್ಟರು. ಆಗ ಜಾನ್ ವೆಸ್ಲಿ, "ಒಂದು ದಿನ ನೀನು ಈ ಕಳ್ಳತನದ ನಿಮಿತ್ತವಾಗಿ ಪಶ್ಚಾತ್ತಾಪ ಪಡುತ್ತೀಯ; ಆಗ, ಯೇಸುವಿನ ಬಳಿಗೆ ಬಾ, ಅವರು ನಿನ್ನ ಪಾಪಗಳನ್ನು ಕ್ಷಮಿಸಿ ನಿನಗೆ ಹೊಸ ಜೀವನವನ್ನು ಕೊಡುತ್ತಾರೆ" ಎಂದರು. ಕಳ್ಳನೋ ಇಷ್ಟು ಸಿಕ್ಕಿರೋದೆ ಲಾಭ ಎಂದುಕೊಂಡು ಏನೂ ಉತ್ತರಿಸದೆ ಹೊರಟು ಹೋದನು.
ಜಾನ್ ವೆಸ್ಲಿ ಕಳ್ಳನಿಗಾಗಿ ಪ್ರಾರ್ಥಿಸುತ್ತಿದ್ದರು. ಆ ದಂಧೆಯನ್ನು ನಿರಂತರವಾಗಿ ಮಾಡುತ್ತಿದ್ದ ಕಳ್ಳನು ಒಂದು ರಾತ್ರಿ ಮಲಗಿದ್ದಾಗ ಅನೇಕ ಜನರ ಕೂಗು ಮತ್ತು ಅವರ ಶಾಪಗಳಿಂದ ಬೆಚ್ಚಿಬಿದ್ದನು. ಆಗ ಅವನಿಗೆ ನಿದ್ದೆ ಬರಲಿಲ್ಲ. ಇಂತಹ ಕಳ್ಳತನದ ದಂಧೆ ಮಾಡಿ ಹಲವರಿಗೆ ಕಣ್ಣೀರು ಹಾಕಿಸಿರುವ ನನಗೆ ಬದುಕುವ ಅರ್ಹತೆಯೇ ಇಲ್ಲ ಎಂದುಕೊಂಡನು. ಆಗ ಅವನ ಹೃದಯದಲ್ಲಿ ಜಾನ್ ವೆಸ್ಲಿಯ ಮಾತುಗಳು ಮೊಳಗಿದವು. “ಯೇಸುವಿನ ಬಳಿಗೆ ಬಾ, ಅವರು ನಿನ್ನ ಪಾಪಗಳನ್ನು ಕ್ಷಮಿಸುತ್ತಾರೆ” ಎಂಬ ಮಾತುಗಳು ಪ್ರತಿಧ್ವನಿಸಿತು. ತಕ್ಷಣ ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿ ಎಂದು ಕೂಗಿದನು. ಮನನೊಂದು ಯೇಸುವಿಗೆ ತನ್ನ ಪಾಪಗಳನ್ನು ಒಂದೊಂದಾಗಿ ಹೇಳತೊಡಗಿದನು. ಸ್ವಲ್ಪ ಹೊತ್ತಿನಲ್ಲೇ ಅವನ ಮನದಲ್ಲಿ ಸಂತಸ! ಅವನು ಆಲಯಕ್ಕೆ ಹೋಗಲು ಪ್ರಾರಂಭಿಸಿದನು. ಸ್ನೇಹಿತರ ನೆರವಿನಿಂದ ಚಿಕ್ಕ ಅಂಗಡಿ ನಡೆಸುತ್ತಿದ್ದನು. ಜಾನ್ ವೆಸ್ಲಿಯವರು ಮಾತನಾಡುವ ಕೂಟದಲ್ಲಿ ಭಾಗವಹಿಸಿ ಅವರನ್ನು ಭೇಟಿಯಾದನು. ದೇವರು ಅವನನ್ನು ಸ್ಪರ್ಶಿಸಿದ ವಿಧವನ್ನು ಹೇಳಿ ಸಂತೋಷಗೊಂಡನು. ನನ್ನ ಪ್ರಾರ್ಥನೆಯು ವ್ಯರ್ಥವಾಗಲಿಲ್ಲ ಎಂದು ಜಾನ್ ವೆಸ್ಲಿ ದೇವರನ್ನು ಕೊಂಡಾಡಿದರು.
ನೋಡುದ್ರಾ ಪುಟಾಣಿಗಳೇ? ಇದೇ ಮಾನಸಾಂತರ. ಕಳ್ಳನ ಮಾನಸಾಂತರಕ್ಕೆ ಜಾನ್ ವೆಸ್ಲಿಯ ಪ್ರಾರ್ಥನೆಯು ಕಾರಣವಾದಂತೆಯೇ, ನಿಮ್ಮ ಪ್ರಾರ್ಥನೆಯು ಅನೇಕರನ್ನು ಕ್ರಿಸ್ತನ ಬಳಿಗೆ ತರುತ್ತದೆ. ಹಾಗಾದರೆ ಪ್ರಾರ್ಥನೆಯನ್ನು ಮರೆಯಬಹುದಾ? ಖಂಡಿತವಾಗಿಯೂ ಮರೆಯಬಾರದು. ಓಕೇ.
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482