By Village Missionary Movement
Saturday, 24-Aug-2024ಧೈನಂದಿನ ಧ್ಯಾನ(Kannada) – 24.08.2024
ಮೋಕ್ಷ ಪ್ರಯಾಣ
"…ನಿನ್ನ ಚಂದದ ಉಡುಪನ್ನು ಹಾಕಿಕೋ..." - ಯೆಶಾಯ 52:1
ಏನು! ನಾನು ಚಂದದ ಬಟ್ಟೆಗಳನ್ನು ಏಕೆ ಧರಿಸಬೇಕು ಎಂದು ನೀವು ಯೋಚಿಸಬಹುದು. ಹೇಳುತ್ತೇನೆ ಎಚ್ಚರಿಕೆಯಿಂದ ಆಲಿಸಿ. ಮೋಕ್ಷ ಪ್ರಯಾಣ ಎಂಬ ಜೀವನ ಪ್ರಯಾಣದಲ್ಲಿ ಮದಲಿಂಗನನ್ನು ಭೇಟಿಯಾಗಲು ಸಿದ್ಧವಾಗುತ್ತಿರುವ ನಾವೆಲ್ಲರೂ ಯೇಸುವಿನ ಮದಲಗಿತ್ತಿಯರೇ! ನಮ್ಮ ದೈನಂದಿನ ಜೀವನದಲ್ಲಿ ನಮ್ಮ ದೇಹವನ್ನು ಅಲಂಕರಿಸುತ್ತೇವೆ. ಆದರೆ ನಮ್ಮ ಮದಲಿಂಗನು ಒಳಗಿನ ಜೀವನ ಹೇಗಿದೆ ಎಂದು ನೋಡುತ್ತಾರೆ. ಅದಕ್ಕೆ ನಾವು ಏನು ಮಾಡಬೇಕು ಎಂದು ನೋಡೋಣ.
ಹೊಸ ಮನುಷ್ಯನನ್ನು ಧರಿಸಿಕೊಳ್ಳಿರಿ:
ಹಾಗೆಯೇ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು. ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ. (ಎಫೆಸ 4: 22-24) ನಮ್ಮನ್ನು ನಾವೇ ಸ್ವಲ್ಪ ಪರೀಕ್ಷಿಸಿ ನೋಡಿಕೊಳ್ಳೋಣ, ನಾನು ಹೊಸ ಮನುಷ್ಯನೋ ಅಥವಾ ಹಳೆಯ ಮನುಷ್ಯನೋ ಎಂದು ನೋಡೋಣ. ಈ ವಾಕ್ಯದೊಂದಿಗೆ ನಿಮ್ಮನ್ನು ಸರಿಮಾಡಿಕೊಳ್ಳಿರಿ. ಇಂದಿನ ಸತ್ಯವೇದ ಭಾಗದಲ್ಲಿ ನಾವು ಮಾಂಸದ 17 ವಿಧದ ಶಾರೀರಿಕ ಕಾರ್ಯಗಳನ್ನು ಓದಿದೆವು. ಈ ಎಲ್ಲಾ ಪಾಪಗಳು ಯೇಸುಕ್ರಿಸ್ತನ ರಕ್ತದಿಂದ ತೊಳೆಯಲ್ಪಟ್ಟು, ಹೊಸ ಮನುಷ್ಯನ ಆತ್ಮದ ಫಲಗಳನ್ನು ಕೊಡೋಣ.
ವಸ್ತ್ರಗಳನ್ನು ಕಾಪಾಡಿಕೋ:
ಇಗೋ, ಕಳ್ಳನು ಬರುವಂತೆ ಬರುತ್ತೇನೆ; ತಾನು ನಿರ್ವಾಣನಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು. (ಪ್ರಕ.16:15) ಸಾಮಾನ್ಯವಾಗಿ ಬೆತ್ತಲೆ ಎಂಬುದು ಪಾಪವನ್ನು ಸೂಚಿಸುತ್ತದೆ. ಸೈತಾನನು ಕ್ಷುಲ್ಲಕ ಪಾಪದಿಂದ ಅಪರಾಧ ಭಾವನೆಯಿಂದ ನಮ್ಮನ್ನು ಬೆತ್ತಲೆ ಮಾಡಿಬಿಡದ ಹಾಗೆ ನಮ್ಮ ರಕ್ಷಣೆಯ ವಸ್ತ್ರಗಳನ್ನು ಕಾಪಾಡಿಕೊಳ್ಳಬೇಕು. ನಮ್ಮ ದೇಶದಲ್ಲೂ ಮಣಿಪುರ ರಾಜ್ಯದಲ್ಲಿ ದೇವರ ಮಕ್ಕಳು ಬೆತ್ತಲೆ ಮಾಡಲ್ಪಟ್ಟರು. ಆದರೆ ಅವರ ಉತ್ತರ ನಾವು ನಮ್ಮ ಭೌತಿಕ ವಸ್ತ್ರಗಳನ್ನು ಕಳೆದುಕೊಂಡರೂ ನಮ್ಮ ಆಧ್ಯಾತ್ಮಿಕ ಉಡುಪುಗಳನ್ನು ಕಳೆದುಕೊಳ್ಳಲಿಲ್ಲ, ಕಾಪಾಡಿಕೊಂಡೆವು.
ಪರಮ ನಿವಾಸವನ್ನು ಧರಿಸಿಕೊಳ್ಳಿ:
ಈ ಗುಡಾರವಾಗಿರುವ ಮಣ್ಣಿನ ನಮ್ಮ ಮನೆಯು (ಶರೀರವು) ತೆಗೆದುಹಾಕಲ್ಪ ಟ್ಟರೆ ಕೈಗಳಿಂದ ಮಾಡದಿರುವಂಥಾದ್ದೂ ಪರಲೋಕ ಗಳಲ್ಲಿ ನಿತ್ಯವಾಗಿರುವಂಥಾದ್ದೂ ಆಗಿರುವ ದೇವರ ಕಟ್ಟಡವು ನಮಗಿದೆಯೆಂದು ನಾವು ಬಲ್ಲೆವು. ಏಕೆಂದರೆ ಆ ಗುಡಾರದಲ್ಲಿ ನಾವು ತವಕಿಸಿ, ನಮ್ಮ ಪರಮ ವಾಸ ಸ್ಥಾನವನ್ನು ಧರಿಸಿಕೊಳ್ಳಲು ಬಹಳ ಹಾತೊರೆಯುತ್ತೇವೆ.
ಪ್ರಿಯರೇ! ನಮಗೆ ಯಾವುದರ ಮೇಲೆ ಆಸೆಯಿದೆ. ಭೂಮಿಯ ಮೇಲಿನ ಭ್ರಮೆಯ ಜನರಲ್ಲಾ? ಆಸ್ತಿ , ಅಂತಸ್ತು ಆಸೆಗಳಂತಹ ಅನೇಕ ಲೌಕಿಕ ಬಯಕೆಗಳು ಮೇಲುಗೈ ಸಾಧಿಸುತ್ತಿವೆಯೇ? ಅಥವಾ, ನಾವು ದೇವರಿಗೆ ಇಷ್ಟವಾದದ್ದನ್ನು ಮಾಡಿ ನಮ್ಮ ಮೋಕ್ಷ ಪ್ರಯಾಣದಲ್ಲಿ ಎಚ್ಚರಿಕೆಯಿಂದ ಹೋಗುತ್ತಿದ್ದೇವೆಯೇ?
- Sis. ಸೆಲ್ವಮೇರಿ ಡೇನಿಯಲ್
ಪ್ರಾರ್ಥನಾ ಅಂಶ:
ಎಲ್ಲಾ ಸೇವಾ ಕ್ಷೇತ್ರಗಳಲ್ಲಿ ತಡೆಯಿಲ್ಲದೆ ಸತತ ಸರಪಳಿ ಪ್ರಾರ್ಥನೆ ನಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482