Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.08.2024
Share:

By Village Missionary Movement

Friday, 23-Aug-2024

ಧೈನಂದಿನ ಧ್ಯಾನ(Kannada) – 23.08.2024

 

ನನ್ನಲ್ಲಿ ನೆಲೆಗೊಂಡಿರಿ

 

"ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು" - ಯೋಹಾನ 15:7

 

ಸತ್ಯವೇದವು ಸುಲಭವಾಗಿ ಸಿಗದ ಸಮಯದಲ್ಲಿ, ಮೇರಿ ಜೋನ್ಸ್ ಎಂಬ ಹದಿನಾಲ್ಕು ವರ್ಷದ ಹುಡುಗಿಗೆ ಆಲಯದ ಮೇಲೆ ಹಂಬಲವೂ ಮತ್ತು ಸತ್ಯವೇದದ ಮೇಲೆ ಬಾಯಾರಿಕೆಯೂ ಇತ್ತು. ತನಗಾಗಿ ಒಂದು ಬೈಬಲ್ ತೆಗೆದುಕೊಳ್ಳಲು ಶಾಲೆಯಿಂದ ಮನೆಗೆ ಬಂದ ನಂತರ, ಕೋಳಿ ಮೊಟ್ಟೆಗಳನ್ನು ಮಾರಿ, ಡೋಬಿ ಕೆಲಸವನ್ನು ಮಾಡಿ ಆರು ವರ್ಷಗಳ ಕಾಲ ಹಣವನ್ನು ಸಂಗ್ರಹಿಸಿದಳು. ಹೊಸ ಬೈಬಲ್ ಖರೀದಿಸಲು ಹಣವನ್ನು ತೆಗೆದುಕೊಂಡು, ಅವಳು ಐವತ್ತು ಮೈಲುಗಳಷ್ಟು ಕಡಿದಾದ ಗುಡ್ಡಗಾಡು ಪ್ರದೇಶಕ್ಕೆ ನಡೆದು ಥಾಮಸ್ ಚಾರ್ಲ್ಸ್ ಎಂಬ ಬೋಧಕನಿಂದ "ವೆಲ್ಸ್ ಭಾಷೆಯ" ಬೈಬಲ್ ಅನ್ನು ಖರೀದಿಸಿದಳು. ನಂತರ ಅವಳು ಅದನ್ನು ಕಲಿತದ್ದು ಮಾತ್ರವಲ್ಲದೆ ತನ್ನ ಹಳ್ಳಿಗರಿಗೂ ಕಲಿಸಿದಳು ಮತ್ತು ಅನೇಕರನ್ನು ದೇವರ ಬಳಿಗೆ ಕರೆದೊಯ್ದಳು. ಮೇರಿ ಜೋನ್ಸ್ ಎಂಬ ಈ ಪುಟ್ಟ ಹುಡುಗಿ ಬೈಬಲ್ ಸೊಸೈಟಿಯ ರಚನೆಗೆ ಮತ್ತು ಅನೇಕ ಭಾಷೆಗಳಲ್ಲಿ ಬೈಬಲ್ ಮುದ್ರಣಕ್ಕೆ ಕಾರಣಳಾದಳು.

 

ಸತ್ಯವೇದದಲ್ಲಿಯೂ ಸಹ, ಬೆರೋಯಾ ಪಟ್ಟಣದ ಜನರು ವಾಕ್ಯಗಳನ್ನು ಮನೋಲ್ಲಾಸದಿಂದ ಸ್ವೀಕರಿಸಿ, ವೇದವಾಕ್ಯಗಳನ್ನು ಅಧ್ಯಯನ ಮಾಡಿದ ಕಾರಣದಿಂದಾಗಿ ಸದ್ಗುಣಿಗಳಾಗಿ ಕಾಣಲ್ಪಟ್ಟರು. ಆದ್ದರಿಂದ ಅವರಲ್ಲಿ ಅನೇಕರು, ಗೌರವಾನ್ವಿತ ಗ್ರೀಕರಲ್ಲಿ ಅನೇಕ ಪುರುಷರು ಮತ್ತು ಮಹಿಳೆಯರು ನಂಬಿದರು. ಹೌದು, ಇಂದು ನಾವು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ದೇವಮಾನವರ ಸಂದೇಶಗಳನ್ನು ಕೇಳಬಹುದು. ಆದರೆ ಅವೆಲ್ಲವೂ ಸತ್ಯವೇದದ ವಾಕ್ಯಗಳಿಗೆ ಹೊಂದಿಕೆಯಾಗಿದೆಯೇ ಎಂದು ನಾವು ಎಚ್ಚರಿಕೆಯಿಂದ ಪರಿಶೀಲಿಸಿದರೆ ಮಾತ್ರ ನಾವು ನೆಲೆಯಾದ ಕ್ರೈಸ್ತ ಜೀವನವನ್ನು ನಡೆಸಬಹುದು. ಇಲ್ಲದಿದ್ದರೆ ನಾವು ಗಾಳಿಯಲ್ಲಿ ಬೀಸುವ ಕಳೆಗಳಂತೆ ಆಗುತ್ತೇವೆ.

 

ಹೌದು, ಪ್ರಿಯರೇ, ಸತ್ಯವೇದವನ್ನು ಓದಲು ಮತ್ತು ಧ್ಯಾನಿಸಲು ನಾವು ಸಿದ್ಧರಿದ್ದರೆ ನಾವು ಸಹ ಫಲಪ್ರದ ಜೀವನವನ್ನು ನಡೆಸಬಹುದು. ದೇವರ ವಾಕ್ಯದಲ್ಲಿ ನೆಲೆಗೊಂಡವರಾದರೆ ದೇವರ ಶಿಷ್ಯರಾಗಿರುತ್ತೇವೆ ಎಂದು ಯೋಹಾನ 8:31 ರಲ್ಲಿ ಓದುತ್ತೇವೆ. ಕೊನೆಯವರೆಗೂ ನೆಲೆಗೊಂಡಿರುವವನೇ ರಕ್ಷಿಸಲ್ಪಡುತ್ತಾನೆ ಎಂದು ಸತ್ಯವೇದವು ಹೇಳುತ್ತಿದೆ. ದೇವರ ವಾಕ್ಯಗಳಿಗೆ ಕಿವಿಗೊಟ್ಟು ಅದರ ಪ್ರಕಾರ ನಡೆಯುವವರೇ ಅಂತ್ಯದವರೆಗೂ ಜೀವಿಸಲು ಬದುಕಲು ಸಾಧ್ಯ. ಇಂದು ನಾವು ಸೆಲ್ ಫೋನ್‌ಗಳಲ್ಲಿ ಎಷ್ಟು ಸಮಯವನ್ನು ಕಳೆಯುತ್ತಿದ್ದೇವೆ. ದೇವರವಾಕ್ಯವನ್ನು ಧ್ಯಾನಿಸಲು ಎಷ್ಟು ಸಮಯವನ್ನು ಕಳೆಯುತ್ತಿದ್ದೇವೆ ಎಂದು ಲೆಕ್ಕ ಹಾಕಿದರೆ, ನಾವು ಕ್ರಿಸ್ತನಲ್ಲಿ ನೆಲೆಸಿದ್ದೇವೆಯೇ ಅಥವಾ ಇಲ್ಲವೇ? ಎಂಬುದು ಅರ್ಥವಾಗುತ್ತದೆ. ಮೇರಿ ಜೋನ್ಸ್‌ನಂತೆ, ಬೆರೋಯಾದ ಪಟ್ಟಣವಾಸಿಗಳಂತೆ ನಾವು ದೇವರವಾಕ್ಯಕ್ಕಾಗಿ ದಾಹದಿಂದ ಇರೋಣ. ಅನೇಕರನ್ನು ನಂಬಿಕೆಯೊಳಗೆ ಮುನ್ನಡೆಸೋಣ.

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಆಸ್ಪತ್ರೆ ಸೇವೆಗೆ ಸಮರ್ಪಣೆಯುಳ್ಳ ವೈದ್ಯರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al