Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.08.2024
Share:

By Village Missionary Movement

Thursday, 22-Aug-2024

ಧೈನಂದಿನ ಧ್ಯಾನ(Kannada) – 22.08.2024

 

ನಾನು ಎಂಥವನು (ಳು)

 

"ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ" - 1 ಕೊರಿಂಥ 11:31

 

ದೇವರು ಸತ್ಯವೇದದಲ್ಲಿ ಆಜ್ಞೆಗಳನ್ನು ಮತ್ತು ನಿಯಮಗಳನ್ನು ನೀಡಿ, ನೀನು ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂದು ಖಚಿತವಾಗಿ ಹೇಳಿಬಿಟ್ಟರು. ಈ ರೀತಿಯಾಗಿ ಕಲ್ಪಿಸಿಕೊಳ್ಳೋಣ. ದೇವರು ಹೀಗೆ ಹೇಳುತ್ತಿದ್ದಾರೆ, "ನೀವು ನನ್ನ ಮೇಲೆ ಪ್ರೀತಿ ಇಟ್ಟಿರುವುದಾದರೆ, ನಾನು ಹೇಳುವುದಕ್ಕೆ ವಿಧೇಯನಾಗು: ಅದು ನಿನಗೆ ಆಶೀರ್ವಾದವಾಗಿರುತ್ತದೆ. ಇಲ್ಲದಿದ್ದರೆ ಏನು ಬೇಕಾದರೂ ಮಾಡು. ಆದರೆ ಯಾವುದೇ ಶಿಕ್ಷೆಯಿಲ್ಲ" ಎಂದು ಹೇಳಿಬಿಟ್ಟಂತೆ ಅಂದುಕೊಳ್ಳೋಣ. ಆಗ ನಮ್ಮ ಆಲೋಚನೆ, ದೃಷ್ಟಿ, ಮಾತು ಮತ್ತು ಕ್ರಿಯೆಗಳು ಹೇಗಿರುತ್ತವೆ? ಒಂದು ನಿಮಿಷ ನಮ್ಮ ಆತ್ಮಸಾಕ್ಷಿಯನ್ನು ತೆರೆದು ನಮ್ಮತ್ತ ನೋಡೋಣ. ನಾನು ಎಂಥವನಾಗಿರುತ್ತೇನೆ? ಶಿಕ್ಷೆಯಿಲ್ಲದಿರುವುದರಿಂದ ಪಾಪವೆಂದು ತಿಳಿದೂ ಅದನ್ನು ಧೈರ್ಯವಾಗಿ ಮಾಡುತ್ತೇನಾ? ಅಥವಾ ನನ್ನ ಯೇಸು ಕ್ರಿಸ್ತನು ಹೇಳಿಬಿಟ್ಟರು ಎಂದು ಅವರ ಮೇಲಿನ ಪ್ರೀತಿಯಿಂದ ನಾನು ಅದನ್ನು ಮಾಡದೇ ಇರುತ್ತೇನಾ?

 

ಪರಿಶುದ್ಧ ಗ್ರಂಥದಲ್ಲಿ ಐಗುಪ್ತ ದೇಶದಲ್ಲಿ ಫರೋಹನ ಪ್ರಧಾನಿಯೂ, ಮುಖ್ಯಸ್ಥರಿಗೆ ಅಧಿಪತಿಯೂ ಆಗಿದ್ದ ಪೋಟಿಫರನ ಮನೆಯಲ್ಲಿ ಯೋಸೇಫನಿದ್ದನು. ಅಲ್ಲಿ ಅವನಿಗೆ ಎಲ್ಲಾ ಅಧಿಕಾರವನ್ನು ನೀಡಲಾಯಿತು ಮತ್ತು ಎಲ್ಲವೂ ಅಧೀನವಾಗಿತ್ತು. ಪೋಟೀಫರನ ಹೆಂಡತಿಯನ್ನು ಹೊರತುಪಡಿಸಿ! ಕೆಲವು ದಿನಗಳ ನಂತರ, ಪೋಟೀಫರನ ಹೆಂಡತಿಯು ಇವನು ಯೌವನಸ್ಥನೂ ಸುಂದರನೂ ಆಗಿರುವುದನ್ನು ನೋಡಿ ಅವನ ಮೇಲೆ ಕಣ್ಣಿಟ್ಟಳು ಮತ್ತು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅಕ್ರಮ ಸಂಬಂಧವನ್ನು ಹೊಂದಲು ಅವನನ್ನು ಕರೆಯುತ್ತಾಳೆ. ಇವನು ದೂರ ದೂರ ಹೋಗುತ್ತಾನೆ. ಒಂದು ದಿನ ಯೋಸೇಫನ ಉಡುಪನ್ನು ಹಿಡಿದು ಕರೆಯುವಾಗ, ಯೋಸೇಫನು ಉಡುಪನ್ನು ಬಿಟ್ಟುಬಿಟ್ಟು ಓಡಿ ಹೋದನು.

 

ಇದರಂತೆ ಯಾವುದಾದರೊಂದು ಪಾಪದ ಪರಿಸ್ಥಿತಿ ನಮ್ಮನ್ನು ಆವರಿಸಿದರೆ ನಾವು ಹೇಗಿರುತ್ತೇವೆ? ಇಲ್ಲದಿದ್ದರೆ, ನಾವೇ ಪಾಪವನ್ನು ಹುಡುಕಿಕೊಂಡು ಹೋಗುತ್ತಿದ್ದೇವೆಯೇ? ನನ್ನ ಪ್ರೀತಿಯ ದೇವಜನರೇ! ನ್ಯಾಯಪ್ರಮಾಣ ಕೊಡಲ್ಪಡದ ಆ ಕಾಲದಲ್ಲೇ ಯೋಸೇಫನು ದೇವರಿಗೆ ಭಯಪಟ್ಟು ದುಷ್ಕೃತ್ಯದಿಂದ ದೂರ ಓಡಿಹೋದನು. ನ್ಯಾಯಪ್ರಮಾಣ ಮಾತ್ರವಲ್ಲ, ಯೇಸುಕ್ರಿಸ್ತನ ಆಜ್ಞೆಗಳು ಮತ್ತು ನಿಯಮಗಳು ಒಳಗೊಂಡಿರುವ ಸಂಪೂರ್ಣ ಸತ್ಯವೇದವನ್ನೇ ನಮಗೆ ನೀಡಲಾಗಿದೆ. ಇದರ ಪ್ರಕಾರ ನಾವು ಆತನಿಗೆ ಇಷ್ಟವಾಗಿ ಬದುಕಿದರೆ ನಮಗೆ ಪರಲೋಕ ಸಿಗುತ್ತದೆ. ಇಲ್ಲವಾದರೆ ನರಕ ಎಂದು ಬರೆಯಲಾಗಿದೆ. ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲ. ಇದೆಲ್ಲಾ ಗೊತ್ತಿದ್ದರೂ ನಾನು ಹೇಗಿದ್ದೇನೆ? ಯೋಚಿಸೋಣ!! ಸರಿಮಾಡಿಕೊಳ್ಳೋಣ!!

- A. ಸಿಮಿಯೋನ್ 

 

ಪ್ರಾರ್ಥನಾ ಅಂಶ:

ಸಿಸಿಸಿ ಯೋಜನೆಯಲ್ಲಿ ಪಾಲ್ಗೊಂಡಿರುವ ಚಿಕ್ಕ ಮಕ್ಕಳ ಶಿಕ್ಷಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al