Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.08.2024
Share:

By Village Missionary Movement

Wednesday, 21-Aug-2024

ಧೈನಂದಿನ ಧ್ಯಾನ(Kannada) – 21.08.2024

 

ಯೇಸುವಿಗೆ ಎಲ್ಲವೂ ಸಾಧ್ಯ

 

"…ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ…" - ಮತ್ತಾಯ 19:26

 

ಅಮೆರಿಕದಲ್ಲಿ "ನೆಪೋಲಿಯನ್ ಹಿಪ್" ಎಂಬ ಅತಿ ದೊಡ್ಡ ಉದ್ಯಮಿಗೆ ಎರಡೂ ಕಿವಿ ಕೇಳದ ಗಂಡು ಮಗು ಜನಿಸಿತು. ನನ್ನ ಮಗುವಿಗೆ ಕಿವಿ ಕೇಳಲು ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದರು. ಅದಕ್ಕೆ ವೈದ್ಯರು ಅವಕಾಶವೇ ಇಲ್ಲ ಎಂದು ಹೇಳಿಬಿಟ್ಟರು. ಮನುಷ್ಯರಿಗೆ ಅಸಾಧ್ಯವಾದುದನ್ನು ದೇವರು ಮಾಡಬಲ್ಲನೆಂದು ನನಗೆ ಗೊತ್ತು ಎಂದು ಹೇಳಿ, ಅವರು 9 ವರ್ಷಗಳ ಕಾಲ ಮಗುವಿಗಾಗಿ ಪ್ರಾರ್ಥಿಸುತ್ತಲೇ ಇದ್ದರು. ನೆಪೋಲಿಯನ್ ಹಿಪ್ ಅವರ ವಿನಮ್ರ ಕಣ್ಣೀರಿನ ಪ್ರಾರ್ಥನೆಗೆ ಉತ್ತರ ಸಿಕ್ಕಿತು. ಕಿವುಡ ಮಗ ನನಗೆ ಶಬ್ದಗಳು ಕೇಳುತ್ತಿದೆ ಎಂದು ಹೇಳಿದನು. ತನ್ನ ನಂಬಿಕೆಯ ಪ್ರಾರ್ಥನೆಗೆ ಉತ್ತರಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳಲು, ಆ ಮಗುವಿನ ಬಗ್ಗೆ ತಿಳಿದಿರುವ ವೈದ್ಯರನ್ನು ಮತ್ತು ಅವರ ಎಲ್ಲಾ ಬಂಧು ಮಿತ್ರರನ್ನು ಕೂಟಕ್ಕೆ ಆಹ್ವಾನಿಸಿದರು. ಆ ಕೃತಜ್ಞತಾ ಕೂಟದಲ್ಲಿ ಭಾಗವಹಿಸಿದ್ದ ವೈದ್ಯರು ಹೇಳಿದ ಸಾಕ್ಷಿ ಅನೇಕರು ದೇವರಲ್ಲಿ ನಂಬಿಕೆ ಇಡುವಂತೆ ಮಾಡಿತು.

 

ಸತ್ಯವೇದದಲ್ಲಿ ದೇವರ ಕ್ರಿಯೆಗಳು ಪ್ರಕೃತಿಗೂ ಮೀರಿದಂತಿವೆ. ಅಬ್ರಹಾಂ - ಸಾರಳಿಗೆ ಅವರ ವೃದ್ಧಾಪ್ಯದಲ್ಲಿ ಜನಿಸಿದ ಇಸಾಕನು, ಜಗತ್ತಿಗೆ ಸಾಕ್ಷಿಯಾಗಿದ್ದಾರೆ. ಜೆಕರ್ಯ - ಎಲಿಜೆಬೆತ್ ಗೆ ವೃದ್ಧಾಪ್ಯದಲ್ಲಿ ಜನಿಸಿದ ಸ್ನಾನಿಕನಾದ ಯೋಹಾನನು ಹೊಸ ಒಡಂಬಡಿಕೆಯಲ್ಲಿ ಸಾಕ್ಷಿಯಾಗಿದ್ದಾರೆ. ಹುಟ್ಟು ಕುರುಡನಿಗೆ ದೃಷ್ಟಿ ಬಂದ ಕಾರ್ಯವು ಇಂದಿಗೂ ಜಗತ್ತಿಗೆ ಯೇಸುವಿನ ಶಕ್ತಿಯನ್ನು ತೋರಿಸುತ್ತಿದೆ. ನಾಲ್ಕು ದಿನಗಳ ಕಾಲ ಸಮಾಧಿಯಲ್ಲಿದ್ದ ಲಾಜರನ ದೇಹವನ್ನು ಜೀವಂತವಾಗಿ ಎಬ್ಬಿಸಿದಂತಹ ಕ್ರಿಯೆಯು, ಯೆಹೂದ್ಯರಿಗೆ ನಂಬಿಕೆಯನ್ನು ಹುಟ್ಟಿಸಿತು. ಇಂದಿಗೂ ಯೇಸುವನ್ನು ನಂಬುವವರು ಅಪರೂಪದ ಮತ್ತು ಶ್ರೇಷ್ಠವಾದ ಕಾರ್ಯಗಳನ್ನು ಪಡೆದುಕೊಳ್ಳುತ್ತಲೇ ಇದ್ದಾರೆ.

 

ಪ್ರಿಯರೇ, ಇದು ನನ್ನ ಜೀವನದಲ್ಲಿ ನಡೆಯುವುದಿಲ್ಲವೇ ಎಂದು ಹಂಬಲಿಸುತ್ತಿದ್ದೀರಾ? ಇದು ಸಂಭವಿಸಲು ಅನುಕೂಲಕರ ಪರಿಸ್ಥಿತಿಗಳು ಕಡಿಮೆಯಾಗುತ್ತಲೇ ಇವೆಯಲ್ಲಾ. ನನಗೆ ವಯಸ್ಸಾಗಿ ಹೋಗುತ್ತಿದೆ ಎಂದು ಬಳಲಿ ಬದುಕುತ್ತಿದ್ದೀರಾ? ಭೀತಿಗೊಳಗಾಗಬೇಡಿ. ನಾವು ಆರಾಧಿಸುವ ದೇವರು ಏನು ಬೇಕಾದರೂ ಮಾಡಬಲ್ಲನು. ನಿಮ್ಮ ಜೀವನದಲ್ಲಿ ಅವರು ಮಾಡಲು ಉದ್ದೇಶಿಸಿರುವುದು ಖಂಡಿತವಾಗಿಯೂ ಸಂಭವಿಸುತ್ತದೆ. ನಂಬಿರಿ ಎಲ್ಲಾ ನಡೆಯುತ್ತವೆ.

- Mr. ಸಮುವೇಲ್ ಮೋರಿಸ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಮೂಲಕ ಹೊಸ ಕಿಡ್ಸ್ ಟಿವಿಯನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al