Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.08.2024
Share:

By Village Missionary Movement

Tuesday, 20-Aug-2024

ಧೈನಂದಿನ ಧ್ಯಾನ(Kannada) – 20.08.2024

 

ನಂಬಿಕೆ

 

"…ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು;…” - ಮಾರ್ಕ 5:34

 

ಕೆಲವು ವರ್ಷಗಳಿಂದ ಗ್ರಾಮದಲ್ಲಿ ಮಳೆಯೇ ಇರಲಿಲ್ಲ. ಆ ಹಳ್ಳಿಯಲ್ಲಿ ಕೆಲವು ಕ್ರೈಸ್ತರು ಇದ್ದರು. ಎಲ್ಲರೂ ಉಪವಾಸದಿಂದ ಮಳೆಗಾಗಿ ಪ್ರಾರ್ಥನೆ ಮಾಡಲು ಸಭೆಗೆ ಹೋದರು, ಒಬ್ಬ ಚಿಕ್ಕ ಹುಡುಗ ಮಾತ್ರ ಕೈಯಲ್ಲಿ ಛತ್ರಿಯನ್ನು ಹಿಡಿದುಕೊಂಡು ಹೋದನು. ಆಗ ಒಬ್ಬರು ಆ ಹುಡುಗನಿಗೆ ಕೊಡೆ ಯಾಕೆ ತರುತ್ತಿದ್ದೀಯ ಎಂದು ಕೇಳಿದರು, "ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿ ಇಂದು ಮಳೆಯನ್ನು ಕೊಡುತ್ತಾರೆ. ನಾನು ನೆನೆದುಕೊಂಡು ಮನೆಗೆ ಹೋಗಬೇಕಲ್ಲಾ, ಅದಕ್ಕಾಗಿಯೇ ನಾನು ಕೊಡೆ ತರುತ್ತಿದ್ದೇನೆ" ಎಂದು ಹೇಳಿದನು. ಅವನ ನಂಬಿಕೆ ಎಷ್ಟು ದೊಡ್ಡದು ನೋಡಿ! ಅಂತೆಯೇ, ದೇವರು ಚಿಕ್ಕ ಹುಡುಗನ ನಂಬಿಕೆಯನ್ನು ಗೌರವಿಸಿದ ಕರ್ತನು ಆ ದಿನ ದೊಡ್ಡ ಮಳೆಯನ್ನು ಆಜ್ಞಾಪಿಸಿದರು.    

ಕರ್ತನಾದ ಯೇಸು ಕ್ರಿಸ್ತನು ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ ಅನೇಕ ಅದ್ಭುತಗಳನ್ನು ಮತ್ತು ಅತಿಶಯಗಳನ್ನು ಮಾಡಿದರು. ಅವರು ಅನೇಕ ರೋಗಿಗಳನ್ನು ಗುಣಪಡಿಸಿದರು. ಕುರುಡರಿಗೆ ದೃಷ್ಟಿಯನ್ನೂ, ಕಿವುಡರಿಗೆ ಶ್ರವಣವನ್ನೂ, ಕುಂಟರು ನಡೆಯುವಂತೆಯೂ ಮಾಡಿದರು. ಇದರಿಂದಾಗಿ ಅನೇಕರ ನಂಬಿಕೆ ಯೇಸುವಿನ ಮೇಲಿತ್ತು. ಯೇಸು ಕೂಡ ಕೆಲವರ ನಂಬಿಕೆಯನ್ನು ನೋಡಿ ಹೊಗಳಿದರು. ಅಂತಹ ಒಂದು ಸ್ತ್ರೀಯ ನಂಬಿಕೆ ನಮಗೆ ಗೊತ್ತು. ಆಕೆ 12 ವರ್ಷದಿಂದ ರಕ್ತಕುಸುಮ ರೋಗದಲ್ಲಿದ್ದ ಸ್ತ್ರೀ. ಈ ಸ್ತ್ರೀಯು ಅನೇಕ ವೈದ್ಯರಿಂದ ಬಹಳವಾಗಿ ದುಃಖಿತಳಾಗಿದ್ದಳು ಮತ್ತು ತನಗಿದ್ದದ್ದನ್ನೆಲ್ಲಾ ಖರ್ಚುಮಾಡಿದ್ದಳು ಆದರೂ ಸ್ವಲ್ಪವೂ ಸ್ವಸ್ಥವಾಗದೆ, ಯೇಸುವಿನ ಬಗ್ಗೆ ತಿಳಿದು ಆತನ ವಸ್ತ್ರವನ್ನು ಮುಟ್ಟಿದರೆ ಸಾಕು ಸ್ವಸ್ಥಳಾಗುತ್ತೇನೆ ಅಂದುಕೊಂಡು, ಯೇಸುವಿನ ಉಡುಪನ್ನು ಮುಟ್ಟಿ ಗುಣಮುಖಳಾದಳು. ಇದಕ್ಕೆಲ್ಲ ಕಾರಣ ಆ ಸ್ತ್ರೀಯ ನಂಬಿಕೆಯೇ.

 

ಪ್ರಿಯರೇ! ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುವಂತೆಯೇ, ರಕ್ತಕುಸುಮ ರೋಗದಲ್ಲಿದ್ದ ಸ್ತ್ರೀಯ ನಂಬಿಕೆಯು ಸಹ ಯೇಸುವಿನ ಗುಣಪಡಿಸುವ ಶಕ್ತಿಯನ್ನು ಆಕರ್ಷಿಸಿತು. ಅವಳಿಗೂ ಪರಿಪೂರ್ಣ ಸ್ವಸ್ಥತೆ ಸಿಕ್ಕಿತು. ನಂಬಿಕೆಯಿಲ್ಲದ ಪ್ರಾರ್ಥನೆಯು "ಗುಂಡುಗಳಿಲ್ಲದ ಬಂದೂಕಿಗೆ ಸಮ". ನಂಬಿಕೆಯುಳ್ಳ ಪ್ರಾರ್ಥನೆಯು ಪಾಪಿಯನ್ನು ರಕ್ಷಿಸುತ್ತದೆ. 12 ವರ್ಷಗಳ ಕಾಲ ನರಳಾಡಿದ ಮಹಿಳೆಯಲ್ಲಿ ಇದ್ದ ನಂಬಿಕೆ ನಿಮ್ಮಲ್ಲಿದ್ದರೆ, ನಿಮಗೆ ಬಿಡುಗಡೆ ಮತ್ತು ಸ್ವಸ್ಥತೆ ಖಚಿತ. ನಂಬಿಕೆಯಿಲ್ಲದಿರುವುದು ದೇವರಿಗೆ ಅಪ್ರಿಯವಾಗಿದೆ. ಹಾಗಾಗಿ ನಮ್ಮ ನಂಬಿಕೆ ದೇವರ ಮೇಲೆ ಮಾತ್ರ ಇರಲಿ. ಪ್ರತಿದಿನವೂ ನಮ್ಮ ನಂಬಿಕೆಯನ್ನು ಹೆಚ್ಚಿಸುವಂತೆ ಆತನನ್ನು ಪ್ರಾರ್ಥಿಸೋಣ.

- Sis. ಸಲೋಮಿ 

 

ಪ್ರಾರ್ಥನಾ ಅಂಶ:

ಪ್ರಿಯಳೇ ಎಂಬ ಮಹಿಳೆಯರಿಗಾಗಿ ಪ್ರಸಾರವಾಗುವ ವಿಶೇಷ ಕಾರ್ಯಕ್ರಮದ ಮೂಲಕ ಅನೇಕ ಮಹಿಳೆಯರು ಕ್ರಿಸ್ತನಿಗಾಗಿ ದೆಬೋರಾಳ್ ಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al