By Village Missionary Movement
Sunday, 18-Aug-2024ಧೈನಂದಿನ ಧ್ಯಾನ(Kannada) – 18.08.2024 (Kids Special)
ಚಿಕ್ಕ ಹುಡುಗ - ಸಾಹುಕಾರಿ
"ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಅಂದನು" - ಮತ್ತಾಯ 21:22
ಹಲೋ ಪುಟಾಣಿಗಳೇ, ನಿಮಗೆ ಬೇಕಾದ ಎಲ್ಲದಕ್ಕೂ ನೀವು ಮೊದಲು ಯೇಸಪ್ಪಾ ಬಳಿ ಪ್ರಾರ್ಥಿಸುತ್ತೀರಾ? ಅಥವಾ ನಿಮ್ಮ ಪೋಷಕರಿಗೆ ತೊಂದರೆ ನೀಡಿ ತೆಗೆದುಕೊಳ್ಳುತ್ತೀರಾ? ಇನ್ಮುಂದೆ ಮಳೆಗಾಲ ಬೇರೆ ಬರುತ್ತಿದೆ. ಅದಕ್ಕೆ ಕೊಡೆ ಮತ್ತು ರೇನ್ ಕೋಟ್ ಬೇಕು. ಇದೆಲ್ಲದಕ್ಕಾಗಿ ನೀವು ಯೇಸಪ್ಪಾ ಬಳಿ ಪ್ರಾರ್ಥಿಸಬೇಕು. ಸರೀನಾ! ಹೋಗಿ ಅಕ್ಕಾ ನಾನು ಪ್ರಾರ್ಥಿಸಿದರೂ ಯೇಸಪ್ಪ ನನಗೆ ಏನೂ ಕೊಡ್ತಿಲ್ಲ ಅಂತಾ ಹೇಳ್ತೀರಾ. ಹಾಗಾದರೆ ಈ ಕಥೆಯನ್ನು ಕೇಳಿ. ಯೇಸಪ್ಪ ಕೊಡ್ತಾರೆ ಎಂಬ ಭರವಸೆ ನಿಮಗೆ ಬರುತ್ತದೆ. ನಾವು ಕಥೆಗೆ ಹೋಗೋಣ್ವಾ?
ಇದು ನ್ಯೂಯಾರ್ಕ್ ನಗರದಲ್ಲಿ ಹಲವು ವರ್ಷಗಳ ಹಿಂದೆ ನಡೆದ ನೈಜ ಕಥೆ. ನಡುಗುವ ಚಳಿ ಎಲ್ಲರನ್ನೂ ನಡುಗಿಸಿತು. ಆ ಚಳಿಯಲ್ಲಿಯೇ ನಿಮ್ಮಂತಹ ಹುಡುಗ ಒಬ್ಬ ಹರಿದ ಬಟ್ಟೆ, ಚಪ್ಪಲಿಯಿಲ್ಲದೆ ನಡುಗುತ್ತಿದ್ದ. ಆಗ ಆ ನಗರದಲ್ಲಿ ಒಂದು ಸಾಹುಕಾರಿ ಕುದುರೆಗಳನ್ನು ಕಟ್ಟಿದ್ದ ತನ್ನ ರಥದಲ್ಲಿ ಆ ದಾರಿಯಲ್ಲಿ ಬರುತ್ತಿದ್ದರು. ಅವರು ಬಾಲಕನ ಕರುಣಾಜನಕ ಸ್ಥಿತಿಯನ್ನು ಕಂಡು ತಕ್ಷಣವೇ ರಥವನ್ನು ನಿಲ್ಲಿಸಲು ಆಜ್ಞಾಪಿಸಿ ಕೆಳಗೆ ಇಳಿದು ನೇರವಾಗಿ ಬಾಲಕನ ಬಳಿಗೆ ಹೋದರು.
ಹುಡುಗನ ಭುಜದ ಮೇಲೆ ಕೈಯಿಟ್ಟು ತಮ್ಮಾ ಈ ಚಳಿಯಲ್ಲಿ ಈ ಕಿಟಕಿಯಿಂದ ಏನನ್ನು ನೋಡುತ್ತಿದ್ದೀಯ ಎಂದು ಪ್ರೀತಿಯಿಂದ ಕೇಳಿದರು. ತಕ್ಷಣವೇ, ಆ ಹುಡುಗನು ತನ್ನ ಪಾದಗಳನ್ನು ಚಳಿಯಿಂದ ರಕ್ಷಿಸಲು ಒಂದು ಜೊತೆ ಶೂಗಳನ್ನು ಯೇಸಪ್ಪನ ಬಳಿ ಕೇಳಿದ್ದೇನೆ. ಅವರು ಅದನ್ನು ನನಗೆ ಹೇಗೆ ನೀಡಲಿದ್ದಾರೆ ಎಂದು ನೋಡುತ್ತಿದ್ದೇನೆ ಎಂದು ಖಚಿತವಾಗಿ ಉತ್ತರಿಸಿದನು. ಆ ಸಾಹುಕಾರಿ ಅವನಲ್ಲಿನ ದೃಢವಾದ ನಂಬಿಕೆಯನ್ನು ಕಂಡು ಬಹಳ ಆಶ್ಚರ್ಯಪಟ್ಟು, ತನಗಿರುವ ನಂಬಿಕೆಯ ಮಟ್ಟವನ್ನು ಪರೀಕ್ಷಿಸಿ ನೋಡಿ ನಾಚಿಕೆಪಟ್ಟರು. ನಂತರ ಪ್ರೀತಿಯಿಂದ ಹುಡುಗನ ಕೈ ಹಿಡಿದು ಅಂಗಡಿಯೊಳಗೆ ಹೋದಳು. ಒಂದು ಸಾಹುಕಾರಿ ಇಷ್ಟೊಂದು ಹಳೆಯ ಹರಿದ ಬಟ್ಟೆಯ ಹುಡುಗನೊಬ್ಬನನ್ನು ಕರೆತರುತ್ತಿದ್ದಾರಲ್ಲಾ ಎಂದು ಅಂಗಡಿಯವರೆಲ್ಲಾ ಆಶ್ಚರ್ಯ ಪಡುತ್ತಿದ್ದರು. ಮೊದಲು ಅವರಿಂದ ಒಂದು ಅಗಲವಾದ ಪಾತ್ರೆಯಲ್ಲಿ ನೀರು ಮತ್ತು ಟವೆಲ್ ಖರೀದಿಸಿ, ಅವನನ್ನು ಕುರ್ಚಿಯ ಮೇಲೆ ಕೂರಿಸಿ, ಅವನ ಪಾದಗಳನ್ನು ಚೆನ್ನಾಗಿ ತೊಳೆದು ಒರೆಸಿ, ಹೊಸ ಬೂಟುಗಳನ್ನು ಹಾಕಿ, ನಂತರ ಐದು ಜೊತೆ ಶೂಗಳನ್ನು ಖರೀದಿಸಿ ಅವನಿಗೆ ಕೊಟ್ಟು ಹೊಸ ಬಟ್ಟೆ ಮತ್ತು ಚಳಿಗೆ ಬೇಕಾದ ಬಟ್ಟೆಗಳನ್ನು ತೆಗೆದುಕೊಟ್ಟು ಅವುಗಳನ್ನು ಅವನಿಗೆ ಧರಿಸಿ ಮುತ್ತಿಟ್ಟು ಹೊರಟುಹೋದರು. ಹುಡುಗನಿಗೋ ಬಹಳ ಸಂತೋಷ. ಯೇಸುವಿಗೆ ತುಂಬಾ ಕೃತಜ್ಞತೆ ಹೇಳಿದನು.
ಏನು ಪುಟಾಣಿಗಳೇ ನೋಡುದ್ರಾ, ನೀನು ಸಹ ಆ ಚಿಕ್ಕ ಹುಡುಗನಂತೆ ಯೇಸಪ್ಪ ಖಂಡಿತವಾಗಿಯೂ ನನ್ನ ಪ್ರಾರ್ಥನೆಗಳಿಗೆ ಉತ್ತರಿಸುತ್ತಾರೆ ಎಂದು ನಂಬಬೇಕು. ಅವರ ಮೇಲೆ ನಂಬಿಕೆ ಇಡಬೇಕು. ಹಾಗೆ ನಂಬಿಕೆಯಿಂದ ಇರುವಾಗ ನೀವು ಏನು ಕೇಳಿದರೂ ಪಡೆದುಕೊಳ್ಳುತ್ತೀರಿ. Ok ನಾ.
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482