Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.04.2021
Share:

By Village Missionary Movement

Saturday, 24-Apr-2021

ಧೈನಂದಿನ ಧ್ಯಾನ(Kannada) – 24.04.2021

ಒಂದೇ ಒಂದು ಪ್ರಶ್ನೆ

"...ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು..." - ಅಪೊಸ್ತಲ 8:31

ಬಿಹಾರ್ ನಲ್ಲಿ ಪೋಲೀಸರಿಂದ ಹುಡುಕಾಡಲ್ಪಡುತ್ತಿದ್ದ ತೀವ್ರವಾದಿಯೊಬ್ಬರು ಜಮ್ಸ್ ಮಿಷನರಿ ಸಂಸ್ಥೆಯ ನಾಯಕನಾದ ಅಗಸ್ಟಿನ್ ಜೆಬ ಕುಮಾರ್ ನನ್ನು ನೋಡುವುದಕ್ಕೆ ಆಯುಧಗಳೊಂದಿಗೆ ಬಂದು ನೀವು ನಡೆಸುತ್ತಿರುವ ಸ್ಕೂಲ್ ನಲ್ಲಿ ನಮ್ಮ ಮಗನಿಗೆ ಓದುವುದಕ್ಕೆ ಸ್ಥಳ ಕೊಡಬೇಕು ಎಂದು ಕೇಳಿದರು.ಅದು ವರ್ಷದ ಮಧ್ಯ ಕಾಲವಾಗಿದ್ದದರಿಂದ 3 ತಿಂಗಳ ನಂತರ ಬನ್ನಿ ಸೀಟ್ ಕೊಡುತ್ತೇನೆ ಎಂದು ಹೇಳಿದರು. ಕೂಡಲೇ ಆತನು ನಾನು ಯಾರು ಗೊತ್ತಾ? ನನ್ನನ್ನು ನೋಡಿದರೇನೆ ಎಲ್ಲರೂ ಭಯಪಡುತ್ತಾರೆ ಎಂದು ಬೆದರಿಸಿದನು. ಅದಕ್ಕೆ ಆ ಸ್ಕೂಲ್ ನಾಯಕನು ನೀನು ಯಾರಾದರೆ ನನಗೇನು ನಿನ್ನನ್ನು ನೀನೇ ದೊಡ್ಡದಾಗಿ ನೆನೆಸಿಕೊಳ್ಳುತ್ತಿದ್ದೀಯೆ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಸೇರಿ ಧೈರ್ಯವಾಗಿ ಮಾರ್ಕೆಟ್ ಗೆ ಹೋಗಬಲ್ಲೆವು. ನೀವು ಹಾಗೆ ಹೋಗಲು ಸಾಧ್ಯವಾ ಎಂದು ಕೇಳಿದರು. ಅದಕ್ಕೆ ಆತನು ಕೋಪದಿಂದ ಎದ್ದು ಹೊರಟು ಹೋದನು. ಮರುದಿನ ಆಯುಧಗಳನ್ನೆಲ್ಲಾ ತಂದು ಮಿಷನರಿ ಸಂಸ್ಥೆಯ ನಾಯಕನ ಮುಂದೆ ಇಟ್ಟು ಅಯ್ಯಾ ನೀವು ನಿನ್ನೆ ಕೇಳಿದ ಆ ಒಂದು ಮಾತು ನನ್ನ ನೆಮ್ಮದಿಯನ್ನು ಹಾಳು ಮಾಡಿತು. ನನ್ನ ಹೆಂಡತಿ, ಮಕ್ಕಳನ್ನು ಅನೇಕ ತಿಂಗಳುಗಳಿಂದ ನೋಡಲಾರದ ಪರಿಸ್ಥಿತಿಗಳಲ್ಲಿ ಅರಣ್ಯಗಳಲ್ಲಿ ಬಚ್ಚಿಟ್ಟುಕೊಂಡು ತಿರುಗುತ್ತಿದ್ದೇನೆ. ಈಗ ನಾನು ಏನು ಮಾಡಬೇಕು ಎಂದು ಕೇಳಿದನು. ಅದಕ್ಕೆ ಆತನು ಯೇಸಪ್ಪನ ಬಗ್ಗೆ  ಆತನಿಗೆ ಹೇಳಿದ ಕೂಡಲೇ ಆತನು ಯೇಸಪ್ಪನನ್ನು ಅಂಗೀಕರಿಸಿದರು. ಹಳೆಯ ಪಾಪಗಳನ್ನೆಲ್ಲಾ ಅಂದರೆ ಮುಂಚೆ ಮಾಡಿದ ಹತ್ಯೆಗಳಿಗಾಗೆಲ್ಲಾ ಪೋಲೀಸರಿಂದ ಶಿಕ್ಷೆ ವಿಧಿಸಲ್ಪಟ್ಟಿತು. ನಾನು ಕೆಟ್ಟವನಾಗಿದ್ದಾಗ ನನಗೆ ಏನೂ ಶಿಕ್ಷೆ ಇರಲಿಲ್ಲ ಆದರೆ ನಾನು ಮಾನಸಾಂತರ ಹೊಂದಿ ಒಳ್ಳೆಯವನಾಗಿ ಮಾರ್ಪಟ್ಟ ನಂತರ ಶಿಕ್ಷೆ ಏಕೆ ಎಂದು ಯೋಚಿಸಲು ಪ್ರಾರಂಭಿಸಿದನು. ಅದಕ್ಕೆ ನೀತಿವಂತನಿಗೆ  ಭೂಮಿಯ ಮೇಲೆ ಲೆಕ್ಕ ಸರಿಮಾಡಲ್ಪಡುತ್ತದೆ ಎಂದು ಆ ಮಿಷಿನರಿ  ಆದರಿಸಿದರು. 11 ವರ್ಷಗಳ ಜೈಲು ಶಿಕ್ಷೆಯ ನಂತರ ಹೊರಗೆ ಬಂದ ಆತನಿಗೆ ಒಂದು ಆಸೆ ಉಂಟಾಯಿತು. ಹಂತಕನಾದ ನನಗೆ ನೀವು ಯೇಸಪ್ಪನ ಬಗ್ಗೆ ಹೇಳಿದ ಹಾಗೆ ನಾನು ಕೂಡ  ಮತ್ತೊಬ್ಬರಿಗೆ ಯೇಸಪ್ಪನ ಬಗ್ಗೆ ಹೇಳಬೇಕು ಎಂಬುದೇ ಆಸೆ. ಬೈಬಲ್ ಕಾಲೇಜಿಗೆ ಹೋಗಿ ಓದಿ ಈಗ ಸೇವೆಯೂ ಮಾಡುತ್ತಿದ್ದಾರೆ.

ಐತಿಯೋಪಿಯ ಮಂತ್ರಿಯ ರಥದೊಂದಿಗೆ ಸೇರು ಎಂದು ಪರಿಶುದ್ಧಾತ್ಮ ದೇವರು ಫಿಲಿಪ್ಪನೊಂದಿಗೆ ಹೇಳಿದ ಕೂಡಲೇ ಫಿಲಿಪ್ಪನು ಆ ರಥವನ್ನು ಸೇರಿದ ಕೂಡಲೇ ಒಬ್ಬನು ನನಗೆ ಅರ್ಥ ತಿಳಿಸದೆ ಹೋದರೆ ನನಗೆ ಹೇಗೆ ಅರ್ಥವಾಗುತ್ತದೆ ಎಂಬ ಮಂತ್ರಿಯ ಪ್ರಶ್ನೆಗೆ ಯೇಸುಕ್ರಿಸ್ತನ ಬಗ್ಗೆ ಉತ್ತರ ಹೇಳಿ ದೀಕ್ಷಾಸ್ನಾನಕ್ಕೆ  ನಡೆಸಿದರು.ಒಬ್ಬ ಪಾಪಿ ಮಾನಸಾಂತರ ಹೊಂದುವುದರ  ನಿಮಿತ್ತವಾಗಿ ಪರಲೋಕದಲ್ಲಿ ಬಹಳ ಸಂತೋಷವುಂಟಾಗುತ್ತದೆ. ಈ ದಿನಗಳಲ್ಲಿ ನಾವು ಮಾಡಬೇಕಾದ ಕಾರ್ಯಗಳು ಅನೇಕವಾಗಿವೆ. ನಶಿಸಿ ಹೋಗುತ್ತಿರುವ ಆತ್ಮಗಳಿಗಾಗಿ ನಾವು ಪ್ರಯಾಸ ಪಡುತ್ತಾ ಇರಬೇಕು ಎಂಬುದೇ ನಮ್ಮ ಜವಾಬ್ದಾರಿ. ಒಂದೇ ಒಂದು ಪ್ರಶ್ನೆ ಒಂದು ತೀವ್ರವಾದಿಯನ್ನು ಮಾರ್ಪಡಿಸಿ ಬಿಟ್ಟಿತು.ದೇವರ ಕೈಗಳಲ್ಲಿ ನಾವಿದ್ದು ಪರಿಶುದ್ಧಾತ್ಮನಿಂದ ನಾವು ನಡೆಸಲ್ಪಡುವಾಗ ನಾವು ಮಾತನಾಡುವ ಸಾಮಾನ್ಯವಾದ   ಮಾತುಗಳು ಕೂಡ ಜನರನ್ನು ದೇವರ ಕಡೆಗೆ ನಡೆಸುತ್ತವೆ. ಆಗ ನಾವು ದೇವರ ರಾಜ್ಯದ ಕೆಲಸವನ್ನು ಮಾಡುವವರಾಗಿ ಕಾಣುತ್ತೇವೆ.
-    Bro. ಅನಿಷ್ ಸಮುವೇಲ್

ಪ್ರಾರ್ಥನಾ ಅಂಶ:-
ನಮ್ಮ ಕಿರಿಯರ ‌ಹಾಸ್ಟೆಲ್  ಮಕ್ಕಳ ಸಂರಕ್ಷಣೆಗಾಗಿ ಮತ್ತು ಅವರ ಭವಿಷ್ಯವು ಆಶೀರ್ವಾದಕರವಾಗಿರುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al