By Village Missionary Movement
Saturday, 10-Aug-2024ಧೈನಂದಿನ ಧ್ಯಾನ(Kannada) – 10.08.2024
ಸ್ವಲ್ಪ ಗಾಳಿ
"ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ;…" - ಕೊಲೊಸ್ಸೆ 4:6
ಉಕಿಯೊದಲ್ಲಿನ ನ್ಯಾಯಾಲಯವನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗಿದೆ. ನ್ಯಾಯಾಲಯದ ಉತ್ತರಕ್ಕೆ ಬೀಳುವ ಮಳೆಹನಿಗಳು ಕಟ್ಟಡದ ಮೇಲೆ ಮತ್ತು ದೈತ್ಯ ಕ್ಲಾರೆನ್ಸ್ ಕೊಲ್ಲಿಗೆ ಹಾದು ಹೋಗುತ್ತವೆ. ಕಟ್ಟಡದ ದಕ್ಷಿಣ ಭಾಗದಲ್ಲಿ ಬೀಳುವ ಮಳೆಹನಿಗಳು ಮಿಸಿಸಿಪ್ಪಿ ನದಿಯೊಂದಿಗೆ ಬೆರೆತು ಮೆಕ್ಸಿಕೋ ಕೊಲ್ಲಿಗೆ ಹರಿಯುತ್ತವೆ. ಉತ್ತರದಲ್ಲಿ ಮಳೆಯ ಹನಿಗಳು ಬೀಳಲಿದೆಯಾ? ಅಥವಾ ಅದು ದಕ್ಷಿಣಕ್ಕೆ ಹೋಗಿ ಬೀಳಲಿದೆಯಾ? ಎಂಬುದನ್ನು ಅದರ ಮೇಲೆ ಬೀಸುವ ಸ್ವಲ್ಪ ಗಾಳಿಯು ನಿರ್ಧರಿಸುತ್ತದೆ. ಮಳೆಯ ಹನಿಗಳು ಮಾತ್ರ ಕಟ್ಟಡದ ಮೇಲೆ ಬಿದ್ದವು. ಆದರೆ ಅದರ ಗಮ್ಯಸ್ಥಾನಗಳ ನಡುವಿನ ಅಂತರವು ಸುಮಾರು 2000 ಮೈಲುಗಳು.
ಹಾಗೆಯೇ, ನಾವು ಇತರರಿಗೆ ಮಾಡುವ ಕ್ರಿಯೆಗಳು ಮತ್ತು ನಾವು ಮಾತನಾಡುವ ಮಾತುಗಳು ಇತರರ ಹಾದಿಯನ್ನು ಬದಲಾಯಿಸುತ್ತವೆ. ನಾವು ಅವರಿಗೆ ತೋರಿಸುವ ಕರುಣೆ, ಪ್ರೀತಿ ಮತ್ತು ದೇವರ ವಾಕ್ಯವು ಅವರನ್ನು ನರಕದ ಹಾದಿಯಿಂದ ಪರಲೋಕದ ಹಾದಿಗೆ ತರುತ್ತದೆ. ಒಬ್ಬ ಸಮಾರ್ಯನು ದಾರಿಯಲ್ಲಿ ಅರೆಜೀವವಾಗಿದ್ದ ಒಬ್ಬನಿಗೆ ತೋರಿಸಿದ ಪ್ರೀತಿಯಿಂದಾಗಿ, ಕಾಳಜಿಯಿಂದಾಗಿ "ಒಳ್ಳೆಯ ಸಮಾರ್ಯನು" ಎಂಬ ಗುರುತಿನೊಂದಿಗೆ ಸತ್ಯವೇದದಲ್ಲಿ ಉಲ್ಲೇಖಿಸಲ್ಪಟ್ಟನು. ಅಂತೆಯೇ ತನ್ನನ್ನು ಗುಲಾಮನಂತೆ ಎಳೆದು ತಂದ ಸಿರಿಯ ಸೇನಾಧಿಪತಿ ನಾಮಾನನಿಗೆ ಆ ಪುಟ್ಟ ಬಾಲಕಿ ಪ್ರೀತಿ ಕಾಳಜಿಯಿಂದ ಹೇಳಿದ ಮಾತು ಸೇನಾಧಿಪತಿಗೆ ಮಾತ್ರವಲ್ಲ ಇಡೀ ಸಿರಿಯಾ ದೇಶಕ್ಕೆ ದೇವರನ್ನು ಅರಿಯಲು ದಾರಿ ಮಾಡಿಕೊಟ್ಟಿತು.
ನಾವು ಇತರರೊಂದಿಗೆ ಮಾತನಾಡುವ ಮಾತು, ಕ್ರಿಯೆ ಹೇಗಿದೆ ಎಂಬುದನ್ನು ನಾವು ಯೋಚಿಸೋಣ. ಸಮಾರ್ಯದವನು ಅನೇಕ ಕೆಲಸಗಳೊಂದಿಗೆ ಅವಸರದಲ್ಲಿ ಹೋಗುತ್ತಾ ಇದ್ದಿರಬಹುದು. ಆದರೆ ಅದೆಲ್ಲವನ್ನೂ ಬದಿಗೊತ್ತಿ ತನ್ನ ಸಮಯ, ಸಾಮಾನು, ಹಣ ಎಲ್ಲವನ್ನೂ ಅವನ ಸಹಾಯಕ್ಕೆ ವ್ಯಯಿಸಿದ. ನಮಗೆ ಕೊಡಲ್ಪಟ್ಟಿರುವುದನ್ನು ಅನೇಕ ಜನರಿಗೆ ಪ್ರಯೋಜನವಾಗುವಂತೆ ಹೇಗೆ ಬಳಸಬಹುದು ಎಂದು ನಾವು ಯೋಚಿಸಿ ಹಲವರಿಗೆ ಉಪಯೋಗವಾಗುವಂತೆ ಮಾರ್ಪಡಿಸುವಾಗ ಅದು ಅವರ ಜೀವನವನ್ನು ಬದಲಾಯಿಸುತ್ತದೆ.
ಇದನ್ನು ಓದುತ್ತಿರುವ ಪ್ರಿಯರೇ! ನೀವು ಹೊಂದಿರುವುದನ್ನು ಇತರರೊಂದಿಗೆ ಮತ್ತು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳಿ. ನನಗೆ ಯಾವುದೇ ಸೌಕರ್ಯಗಳಿಲ್ಲ; ನಾನು ಏನನ್ನು ಹಂಚಿಕೊಳ್ಳಬೇಕು ಎಂದು ನೀವು ಯೋಚಿಸುತ್ತಿದ್ದೀರಾ? ನಿಮ್ಮ ಹೃದಯವು ದೇವರ ರಕ್ತದಿಂದ ತೊಳೆಯಲ್ಪಟ್ಟಿದೆ. ನಿಮ್ಮ ತುಟಿಗಳು ಚೆನ್ನಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ! ಇಷ್ಟು ಸಾಕು. ಇತರರೊಂದಿಗೆ ವ್ಯರ್ಥವಾದ ಮಾತುಗಳನ್ನು ಮಾತನಾಡಬೇಡಿ ಆದರೆ ದೇವರ ವಾಕ್ಯವನ್ನು ಮಾತನಾಡಿ, ಕರ್ತನ ನಾಮವನ್ನು ಮಹಿಮೆಪಡಿಸುವ ಮಾತುಗಳನ್ನು ಮಾತ್ರ ಮಾತನಾಡಿ. ಅವರ ಹೃದಯಗಳು ತೆರೆಯಲ್ಪಡುತ್ತವೆ. ನೇರವಾಗಿ ದೇವರ ಕಡೆಗೆ ತಿರುಗುತ್ತವೆ. ಪ್ರತಿದಿನ ನೀವು ಓದುವ ದೇವರ ವಾಕ್ಯದೊಂದಿಗೆ ಮಾತನಾಡಿ. ನಾವು ಅನೇಕರನ್ನು ನೇರವಾಗಿ ದೇವರ ರಾಜ್ಯಕ್ಕೆ ಕರೆದೊಯ್ಯೋಣ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಂದು ಯೌವನಸ್ಥರು ಪವಿತ್ರಾತ್ಮದಿಂದ ತುಂಬಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482