Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.08.2024
Share:

By Village Missionary Movement

Friday, 09-Aug-2024

ಧೈನಂದಿನ ಧ್ಯಾನ(Kannada) – 09.08.2024

 

ಪ್ರಶ್ನಿಸದ ವಿಧೇಯತೆ

 

"…ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು" - ಆದಿಕಾಂಡ. 6:22

  

ಹಲವು ವರ್ಷಗಳ ಹಿಂದೆ ಶ್ರೀಮಂತರೊಬ್ಬರು ಉದ್ಯೋಗಕ್ಕಾಗಿ ಜಾಹೀರಾತು ನೀಡಿದ್ದರು. ಜಾಹೀರಾತನ್ನು ನೋಡಿ ಸಾಕಷ್ಟು ಯೌವನಸ್ಥರು ಬಂದಿದ್ದರು. ಎರಡು ದಿನ ಅವರು ಹೇಳಿದ ಕೆಲಸವನ್ನು ಮಾಡಿದರು. ಮರುದಿನ ಜನರು ಬರುವುದು ನಿಂತುಹೋಯಿತು. ಕೊನೆಗೆ ಒಬ್ಬ ಯುವಕ ಮಾತ್ರ ಕೆಲಸಕ್ಕೆ ಬಂದನು. ಆ ಶ್ರೀಮಂತ ಅಲ್ಲಿ ಬಿದ್ದಿರುವ ಜಲ್ಲಿಕಲ್ಲುಗಳನ್ನು ತೆಗೆದು ಸ್ವಲ್ಪ ದೂರದಲ್ಲಿ ಹಾಕಲು ಹೇಳಿದರು. ಮರುದಿನ ಆ ಜಲ್ಲಿ ಕಲ್ಲುಗಳನ್ನು ಪುನಃ ಇದ್ದ ಸ್ಥಳಕ್ಕೆ ಹಾಕಲು ಹೇಳಿದರು. ಹೀಗೆಯೇ ಇಡೀ ವಾರ ನಡೆಯಿತು. ಭಾನುವಾರ ನಿನಗೆ ರಜೆ ಎಂದರು. ಒಂದು ವಾರದ ಕೂಲಿಯನ್ನೂ ಕೈಗಿಟ್ಟರು.  

  

ಅವರು ಸೋಮವಾರ ಆ ಯುವಕನನ್ನು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ಆದರೆ ಆ ಯುವಕ ಸೋಮವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ಕೆಲಸಕ್ಕೆ ಬಂದು ಬಿಟ್ಟನು. ಏಕೆ? ಏನು? ಎಂದು ಯಾವ ಪ್ರಶ್ನೆಯನ್ನೂ ಕೇಳದೆ ಹಾಗೆಯೇ ತನ್ನ ಯಜಮಾನನ ಆದೇಶಕ್ಕೆ ವಿಧೇಯನಾದ ಆ ಯುವಕನಿಗೆ ತನ್ನ ಶಿಕ್ಷಣ ಮತ್ತು ಕೌಶಲ್ಯಕ್ಕೆ ತಕ್ಕ ಉನ್ನತ ಹುದ್ದೆಯನ್ನು ನೀಡಿದರು. ಹಲವಾರು ಲಕ್ಷ ಖಾತೆ ಪ್ರಕರಣಗಳನ್ನು ನೋಡಿಕೊಳ್ಳಲು, ಪ್ರಮುಖ ಜವಾಬ್ದಾರಿಗಳನ್ನು ಅವರಿಗೆ ವಹಿಸಿ ರಹಸ್ಯವನ್ನು ಕಾಪಾಡಲು, ಅವನನ್ನು ನೇಮಿಸಿದರು. ಅವನು ಬದುಕಿರುವವರೆಗೂ ಅವರ ಕುಟುಂಬದವರಿಗೆ ಅಂಗರಕ್ಷಕರಾಗಿದ್ದನು.   

  

ಭೂಮಿಯ ಮೇಲೆ ಪಾಪದ ಹೆಚ್ಚಳದಿಂದಾಗಿ, ದೇವರು ಜಗತ್ತನ್ನು ನಾಶಮಾಡಲು ಬಯಸಿ ನೋಹ ಎಂಬ ದೇವರ ಮನುಷ್ಯನೊಂದಿಗೆ ಮಾತನಾಡಿದರು. ಮಳೆ ಮುಂದುವರೆಯಲಿದೆ. ಆ ವಿನಾಶದಿಂದ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಒಂದು ನಾವೆಯನ್ನು ಮಾಡು. ಅದಕ್ಕೂ ಮುನ್ನ ಭೂಮಿಯ ಮೇಲೆ ಮಳೆ ಸುರಿದಿದೆಯೋ ಗೊತ್ತಿಲ್ಲ. ಆದರೂ ಅದು ಏನು? ಏಕೆ? ಏತಕ್ಕಾಗಿ? ಎಂದು ಯಾವುದೇ ಪ್ರಶ್ನೆಗಳನ್ನು ಕೇಳದೆ, ನೋಹನು ಒಂದು ಇಂಚು ಸೇರಿಸದೆ ಅಥವಾ ಕಡಿಮೆ ಮಾಡದೆ ಕರ್ತನ ಸೂಚನೆಗಳ ಪ್ರಕಾರ ನಾವೆಯನ್ನು ಮಾಡಿದನು. ಅವನ ಕುಟುಂಬವು ವಿನಾಶದಿಂದ ರಕ್ಷಿಸಲ್ಪಟ್ಟಿತು.

 

ನಂತರ, ಅಬ್ರಹಾಮನಿಗೆ ನೂರು ವಯಸ್ಸಿನಲ್ಲಿ ಹುಟ್ಟಿದ ಮಗುವನ್ನು ಮೋರಿಯಾ ಪರ್ವತಕ್ಕೆ ತೆಗೆದುಕೊಂಡು ಹೋಗಿ ಬಲಿಕೊಡುವಂತೆ ದೇವರು ಹೇಳಿದರು. ಹಾಗೆಯೇ ದೇವರ ಮಾತಿಗೆ ವಿಧೇಯನಾದ ಅಬ್ರಹಾಮನು ತನ್ನ ಹೆಂಡತಿಗೂ ಸಹ ಹೇಳದೆ, ಅವಳಿಗೆ ಹೇಳಿದರೆ ಅವಳು ಅತ್ತು ಅದನ್ನು ತಡೆ ಮಾಡಿಬಿಡುತ್ತಾಳೋ ಎಂದು ಭಾವಿಸಿ, ಸೇವಕರಲ್ಲಿ ಇಬ್ಬರನ್ನು ಕರೆದುಕೊಂಡು ಬೆಳಿಗ್ಗೆ ಬೇಗನೆ ಹೊರಟುಹೋದರು. ಅವರ ಪ್ರಶ್ನಾತೀತ ವಿಧೇಯತೆಯನ್ನು ನೋಡಿ, ದೇವರು ಅಬ್ರಹಾಮನನ್ನು ಇಡೀ ಜಗತ್ತಿಗೆ ಆಶೀರ್ವಾದಕರವಾಗಿ ಮಾರ್ಪಡಿಸಿದರು. ಹಾಗೆಯೇ, ನಾವು ಸಹ ಪ್ರಶ್ನೆಗಳನ್ನು ಕೇಳದೆ ದೇವರ ಮಾತಿಗೆ ವಿಧೇಯರಾಗುವಾಗ, ಕರ್ತನು ನಮ್ಮನ್ನು ಹೆಚ್ಚಿಸುತ್ತಾರೆ. ದೇವರು ಒಂದು ಸ್ಥಳಕ್ಕೆ ಹೋಗಬೇಕೆಂದು ಹೇಳಿದರೆ, ನಾವು ಪ್ರಶ್ನಿಸದೆ ಹೋದರೆ, ದೇವರು ನಮ್ಮ ಮೂಲಕ ಅದ್ಭುತಗಳನ್ನು ಮಾಡುತ್ತಾರೆ, ನಮ್ಮ ಮೂಲಕ ಮಾಡಬೇಕಾದ ಕೆಲಸಗಳನ್ನೂ ಮಾಡುತ್ತಾರೆ.

- C. ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಕೂಟಕ್ಕೆ ಅನೇಕ ಪ್ರಾಂತ್ಯಗಳಿಂದ ಬರುವ ಯೌವನಸ್ಥರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin