Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.08.2024
Share:

By Village Missionary Movement

Wednesday, 07-Aug-2024

ಧೈನಂದಿನ ಧ್ಯಾನ(Kannada) – 07.08.2024

 

ಸೋತುಹೋಗದೇ

 

"ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ…" - ಯೆಶಾಯ 40:29

 

ಅದೊಂದು ತಾತ್ಕಾಲಿಕವಾಗಿ ನಿರ್ಮಿಸಿದ ಸೇನಾ ಆಸ್ಪತ್ರೆಯಾಗಿತ್ತು. ಯುದ್ಧಭೂಮಿಯಲ್ಲಿ ಗಾಯಗೊಂಡ ಯೋಧರಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿ ಒಬ್ಬ ಬೋಧಕರು ಸಾಯುವ ಸ್ಥಿತಿಯಲ್ಲಿದ್ದ ಸೈನಿಕನ ಪಕ್ಕದಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು. ಕಣ್ಣು ತೆರೆದ ಯೋಧ ತನಗೆ ಒಂದು ಉಪಕಾರ ಮಾಡುವಂತೆ ಬೋಧಕರ ಬಳಿ ಕೇಳಿಕೊಂಡನು. ಬೋಧಕರು ಸಹ ಕಡ್ಡಾಯವಾಗಿ ಮಾಡುತ್ತೇನೆ ಎಂದು ಹೇಳಿದರು. ಅವನು ನಿಧಾನವಾಗಿ ತನ್ನ ಪ್ಯಾಂಟ್ ಜೇಬಿನಿಂದ ಒಂದು ಸಣ್ಣ ವಿಳಾಸ ಪುಸ್ತಕವನ್ನು ತೆಗೆದು ಇದು ನನ್ನ ಸಂಡೇ ಸ್ಕೂಲ್ ಟೀಚರ್ ವಿಳಾಸ. ನೀವು ಇವರಿಗೆ ಒಂದು ಪತ್ರ ಬರೆಯಬೇಕು. ಅದರಲ್ಲಿ ನೀವು ಭಾನುವಾರ ಶಾಲೆಯಲ್ಲಿ ನನಗೆ ಕಲಿಸಿದ ಸತ್ಯವೇದದ ವಾಕ್ಯಗಳ ಪ್ರಕಾರ ನಾನು ಒಳ್ಳೆಯ ಕ್ರೈಸ್ತನಾಗಿ ಬದುಕಿ ಈಗ ಸಾಯಲಿದ್ದೇನೆ. ನನ್ನನ್ನು ರಕ್ಷಕನ ಬಳಿಗೆ ನಡೆಸಿದ ನಿಮ್ಮ ಸೇವೆಗೆ ಧನ್ಯವಾದಗಳು ಎಂದು ಅವರಿಗೆ ಸಂದೇಶವನ್ನು ಕಳುಹಿಸಲು ಬಯಸುತ್ತೇನೆ ಎಂದು ಹೇಳಿದರು. ಬೋಧಕರು ತಕ್ಷಣ ಪತ್ರ ಬರೆದರು. ಭಾನುವಾರ ಶಾಲೆಯ ಶಿಕ್ಷಕರಿಂದ ಉತ್ತರವೂ ಬಂತು. 

 

ಅವರು ತಮ್ಮ ಪತ್ರದಲ್ಲಿ, "ಮಗನೇ, ನಾನು ನನ್ನ ಬೋಧನೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿ ಕಳೆದ ತಿಂಗಳು ನಾನು ಭಾನುವಾರ ಶಾಲೆಯ ಶಿಕ್ಷಕನ ಕೆಲಸವನ್ನು ತ್ಯಜಿಸಿದೆ. ಆದರೆ ನಾನು ಸೋತುಹೋಗಿದ್ದಾಗ ನಿನ್ನ ಪತ್ರವು ನನಗೆ ಪುನರುಜ್ಜೀವನವನ್ನು ನೀಡಿತು. ನನ್ನ ನಂಬಿಕೆಯ ಕೊರತೆಯನ್ನು ಕ್ಷಮಿಸುವಂತೆ ದೇವರನ್ನು ಕೇಳಿಕೊಂಡೆ. ಪುನಃ ಈ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ.

ನಿನ್ನ ಪತ್ರವು ನನ್ನ ನಿರುತ್ಸಾಹವನ್ನು ನೀಗಿಸಿ ಉತ್ಸಾಹವನ್ನು ಹುಟ್ಟಿಸಿ ಹುರಿದುಂಬಿಸಿದೆ ನಿನ್ನ ಪತ್ರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಬರೆದಿದ್ದರು.

 

ಸತ್ಯವೇದದಲ್ಲಿ, ಪ್ರವಾದಿಯಾದ ಎಲೀಯನು ಈಜೆಬೆಲಳಿಗೆ ಹೆದರಿ ಅರಣ್ಯದೊಳಗೆ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀಗಿಡದ ಕೆಳಗೆ ಕೂತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು - ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು" ಎಂದು ಹೇಳಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಆಗ ಯೆಹೋವನ ದೂತನು ಎಲೀಯನನ್ನು ನೋಡಿ ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ ಅಂದನು. ಸೋತುಹೋಗಿದ್ದ ಎಲೀಯ ದೇವರ ವಾಕ್ಯವನ್ನು ಪಡೆದ ಕೂಡಲೇ ದೇವ ದರ್ಶನದ ಕಡೆಗೆ ಹೋದನು.  

 

ಇದನ್ನು ಓದುತ್ತಿರುವ ಪ್ರಿಯರೇ! ಸೋತುಹೋಗುವಿಕೆ ಎಂಬುದು ನಮ್ಮೆಲ್ಲರಿಗೂ ಬರುವ ಒಂದು ಕಾರ್ಯವೇ. ಆದರೆ ಆ ಸೋತುಹೋಗುವಿಕೆಯಲ್ಲೇ ನಾವು ಮುಳುಗಿಹೋಗಲು ದೇವರು ಬಯಸುವುದಿಲ್ಲ. ಅವರು ನಮ್ಮನ್ನು ಪ್ರೋತ್ಸಾಹಿಸಲು ಮತ್ತು ನಮ್ಮ ಕೆಲಸವನ್ನು ಪುನರಾರಂಭಿಸಲು ಬಯಸುತ್ತಾರೆ. ಬಹುಶಃ ನೀವು ಆತ್ಮಗಳನ್ನು ಸಂಪಾದಿಸುವ ಸೇವೆಯನ್ನು ಮಾಡಿ ಸೋತುಹೋಗಿದ್ದೀರಾ? ಅನೇಕ ದಿನಗಳಿಂದ ಸೇವೆ ಮಾಡಿಯೂ ಯಾವುದೇ ಫಲಿತಾಂಶವಿಲ್ಲವಲ್ಲಾ ಎಂದು ಸೋತುಹೋಗಿದ್ದೀರಾ? ಚಿಂತಿಸಬೇಡಿ. ಇದರ ಫಲಿತಾಂಶವನ್ನು ನಾವು ಪರಲೋಕದಲ್ಲಿ ನೋಡಬಹುದು. ದೇವರ ವಾಕ್ಯದಲ್ಲಿ ವಿಶ್ವಾಸವಿಡಿ ಏಕೆಂದರೆ ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾರೆ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಈ ಶಿಬಿರಕ್ಕೆ ಯೌವನಸ್ಥರನ್ನು ಕರೆತರುವ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin