Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.08.2024 (Kids Special)
Share:

By Village Missionary Movement

Sunday, 04-Aug-2024

ಧೈನಂದಿನ ಧ್ಯಾನ(Kannada) – 04.08.2024 (Kids Special)

 

ರಾಜನನ್ನು ಹೊತ್ತ ಆನೆ

 

"…ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ" - ಯೋಹಾನ 14: 6

 

ಪ್ರೀತಿಯ ಮಕ್ಕಳೇ ಚೆನ್ನಾಗಿದ್ದೀರಾ ? ಚೆನ್ನಾಗಿ ಊಟ ಮಾಡುತ್ತಿದ್ದೀರಾ? ನಿಮ್ಮ ಅಮ್ಮ ಮಾಡುವ ಆಹಾರವನ್ನು ಇಷ್ಟವಾಗಿ ತಿನ್ನಬೇಕು. ಆಗಾಗ್ಗೆ ಅಂಗಡಿಯಲ್ಲಿ ತಿನ್ನುತ್ತಿದ್ದರೆ, ನೀವು ವೈದ್ಯರ ಬಳಿಗೆ ಹೋಗಿ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಬೇಡ ತಾನೇ. ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ಆರೋಗ್ಯವಾಗಿರಿ. Ok ಪುಟಾಣಿಗಳೇ ಕಥೆ ಕೇಳೋಣ್ವಾ?

 

ಒಬ್ಬ ರಾಜನಿದ್ದನು. ಆ ರಾಜನನ್ನು ಅರಮನೆಗೆ ಕರೆದೊಯ್ಯಲು ಒಂದು ಆನೆಯನ್ನು ಸುಂದರವಾಗಿ ಅಲಂಕರಿಸಿ ಸಿದ್ಧವಾಗಿಟ್ಟಿದ್ದರು. ಆಗ ಕಾರುಗಳೆಲ್ಲಾ ಇಲ್ಲಾ ಅಲ್ವಾ? ಆದ್ದರಿಂದ ರಾಜನನ್ನು ಆನೆಯ ಮೇಲೆ ಏರಿಸಲಾಯಿತು. ದೊಡ್ಡ ಸೈನ್ಯವು ಅವರ ಹಿಂದೆ ಹೋಗುತ್ತದೆ. ಆತನನ್ನು ನೋಡಲು ಜನ ಸಾಲುಗಟ್ಟಿ ನಿಂತಿರುತ್ತಾರೆ. ಹಾಗೆ ಹೋಗುತ್ತಿರುವಾಗ ಹಿಂದಿನಿಂದ ನಾಯಿಯೊಂದು "ಬೌ, ಬೌ ಬೌ" ಎಂದು ಬೊಗಳುತ್ತಾ ಬಂತು. ಆನೆಯನ್ನು ನೋಡುತ್ತಾ ತುಂಬಾ ಬೊಗಳಿತು. ಅಡಡಾ! ಈ ಆನೆ ಸೊಂಡಿಲೆತ್ತಿ ಒಂದು ಏಟು ಹಾಕಿದರೆ ಅದು ಅಷ್ಟೇ, Close ಆಗಿಬಿಡುತ್ತೆ. ಆದರೆ ಈ ಆನೆ ಸದ್ದಿಲ್ಲದೆ ಹೋಗುತ್ತಿದೆಯಲ್ಲಾ ಎಂದು ಎಲ್ಲರೂ ಭಾವಿಸಿದರು.

 

ಆನೆ ಏನೆಂದು ಭಾವಿಸಿತು ಗೊತ್ತಾ? ನಾನು ನಾಯಿಯನ್ನು ನೋಡಿ ಏನಾದರೂ ಮಾಡಿದರೆ, ನನ್ನ ಚಲನವಲನದಿಂದ ರಾಜನಿಗೆ ಭಯವಾಗಬಾರದು. ರಾಜನನ್ನು ಸುರಕ್ಷಿತವಾಗಿ ಅರಮನೆಗೆ ಕರೆದುಕೊಂಡು ಹೋಗಬೇಕು. ಅದೇ ನನ್ನ ಕೆಲಸ. ಅದನ್ನು ಸರಿಯಾಗಿ ಮಾಡಬೇಕು ಎಂದು ಯೋಚಿಸಿ ನಾಯಿ ಬೊಗಳುವುದನ್ನು ಕಂಡುಕೊಳ್ಳಲೇ ಇಲ್ಲ. ರಾಜನೂ ಸಂತೋಷದಿಂದ ಆನೆಯ ಮೇಲೆ ಸವಾರಿ ಮಾಡಿ ಸುರಕ್ಷಿತವಾಗಿ ಅರಮನೆಯನ್ನು ತಲುಪಿದನು.

 

ನೀವು ಕಥೆ ಕೇಳುದ್ರಾ? ಪುಟಾಣಿಗಳೇ! ಆನೆಗೆ ಇರುವ ಆ ಆಲೋಚನೆ ನಮಗೂ ಇರಬೇಕು. ನಾಯಿ ಬೊಗಳಿದರೆ ನನಗೆ ಏನು? ನಾನು ನನ್ನ ರಾಜನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಬಯಸಿತು. ಅದೇ ರೀತಿಯಲ್ಲಿ, ಯೇಸುರಾಜ ನಿಮ್ಮೊಳಗಿದ್ದಾರೆ. ಅವರು ಕಷ್ಟಪಡುವ ಹಾಗೆ ಏನನ್ನೂ ಮಾಡಬಾರದು. ಹೋಮ್ ವರ್ಕ್ ಮಾಡದೆ ಮಿಸ್ ಗೆ ಮೋಸ ಮಾಡುವುದು, ಪರೀಕ್ಷೆಯಲ್ಲಿ ನೋಡಿಕೊಂಡು ಬರೆಯುವುದು, ಅವಿಧೇಯರಾಗುವುದು ಹೀಗೆ ಇನ್ನೂ ಎಷ್ಟೋ ಹೇಳಬಹುದಲ್ಲವಾ? ಅಂತಹ ವಿಷಯಗಳು ನಮ್ಮನ್ನು ಪರಲೋಕಕ್ಕೆ ಹೋಗದಂತೆ ತಡೆಯುತ್ತವೆ. ಯೇಸುರಾಜನನ್ನು ಹಿಡಿದುಕೊಳ್ಳಿರಿ ಮತ್ತು ಪರಲೋಕಕ್ಕೆ ಹೋಗಿರಿ. ಯೇಸಪ್ಪ ಇಲ್ಲದೆ ಪರಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಪುಟಾಣಿಗಳೇ! ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯಾ? ಸರಿ ಮತ್ತೆ ಸಿಗೋಣ.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza 1win cratosroyalbet