By Village Missionary Movement
Friday, 23-Apr-2021ಧೈನಂದಿನ ಧ್ಯಾನ(Kannada) – 23.04.2021
ಕ್ಷಮಾಪಣೆಯ ಪ್ರಾರಂಭ
"ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ." - ಕೊಲೊಸ್ಸೆಯವರಿಗೆ 3:13
ಅಮೆರಿಕಾದ ಇಡಾಹೊ ಮಾಗಾನದಲ್ಲಿ ಗವರ್ನರ್ ಆಗಿದ್ದ ಫ್ರಾಂಕ್ ಸ್ಟುಡನ್ಬೆರ್ಕ್ ಎಂಬವರನ್ನು ಹೇರಿ ಆರ್ಚರ್ ಗುಂಡಿಟ್ಟು ಸಾಯಿಸಿ ಬಿಟ್ಟನು. ಅವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸೆರೆಯೊಳಗೆ ಬಂಧಿಸಿದರು. ಒಬ್ಬ ವೈದ್ಯರು ಚಿಕಾಗೋನಿಂದ ಒಂದು ಸತ್ಯವೇದವನ್ನು ಅವನಿಗೆ ಕಳುಹಿಸಿಕೊಟ್ಟರು. ಅದರಲ್ಲಿ ಅವನಿಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಸತ್ಯವೇದವನ್ನು ಅವನು ಮುಟ್ಟಲೂ ಇಲ್ಲ. ಆದರೂ ಆ ಕಪ್ಪು ಪುಸ್ತಕದ ಮೇಲೆ ಗಮನಹರಿಸುವಂತೆ ಒಳಮನಸ್ಸು ಪ್ರೇರೇಪಿಸುತ್ತಲೇ ಇತ್ತು. ದಿಢೀರೆಂದು ಒಂದು ದಿನ ಆ ಸತ್ಯವೇದವನ್ನು ಅಲ್ಲಿಂದ ತೆಗೆದುಹಾಕುವಂತೆ ಸೆರೆಯ ಕಾವಲುಗಾರನ ಬಳಿ ಹೇಳಿದನು. ಆದರೆ ಏನಾಯ್ತೋ ಗೊತ್ತಿಲ್ಲ ಪುನಃ ಅದನ್ನು ತೆಗೆದುಕೊಂಡು ಬರಲು ಹೇಳಿ ಅದನ್ನು ಓದಲು ಪ್ರಾರಂಭಿಸಿದನು. ಪರಿಶುದ್ಧಾತ್ಮನು ಕಾರ್ಯ ಮಾಡಿದರು.
ಒಂದು ದಿನ ಹೇರಿಯನ್ನು ನೋಡಲು ಒಬ್ಬ ಯೌವನಸ್ಥನು ಬಂದನು. ನನ್ನ ಅಮ್ಮ ಇದನ್ನು ಕೊಟ್ಟು ಕಳುಹಿಸಿದರು ಎಂದು ಒಂದು ಪೊಟ್ಟಣವನ್ನು ಕೊಟ್ಟನು. "ನೀವು ಮಾಡಿದ ತಪ್ಪನ್ನು ಕ್ಷಮಿಸಿ ಬಿಟ್ಟೆವು ಎಂದು ಹೇಳಲು ಹೇಳಿದರು" ಎಂದನು. ಆ ಪೊಟ್ಟಣದ ಒಳಗೆ "ಕ್ರಿಸ್ತನ ಬಳಿಗೆ ಹೋಗುವ ಮೆಟ್ಟಿಲುಗಳು" ಎಂಬ ಪುಸ್ತಕವಿತ್ತು. ಆ ಯೌವನಸ್ಥನು ಬೇರೆ ಯಾರೂ ಅಲ್ಲ ಹೇರಿಯಿಂದ ಕೊಲ್ಲಲ್ಪಟ್ಟ ಗವರ್ನರ್ ಮಗ. ಹೇರಿ ಆ ಪುಸ್ತಕವನ್ನು ಓದಿ ತನ್ನ ಜೀವನವನ್ನು ಯೇಸುವಿಗೆ ಸಮರ್ಪಿಸಿಕೊಂಡನು. ನಂತರ ಗವರ್ನರ್ ನ ಹೆಂಡತಿ ಹೇರಿಯನ್ನು ಭೇಟಿ ಮಾಡಿ ಕೆಲವು ಆತ್ಮೀಕ ಪುಸ್ತಕಗಳನ್ನು ಕೊಟ್ಟರು. ನಿಜವಾದ ಮಾನಸಾಂತರವನ್ನು ಹೊಂದಿ, ಸೆರೆಯಿಂದ ಹೊರಬಂದು ಸಮರ್ಪಣೆಯುಳ್ಳ ಕ್ರೈಸ್ತವನಾಗಿ, ನಿಜವಾದ ಸಾಕ್ಷಿಯಾಗಿ ಹೇರಿ ಜೀವಿಸಿದರು.
ಸತ್ಯವೇದದಲ್ಲಿ, ತನಗೆ ಕೆಟ್ಟದ್ದನ್ನು ಮಾಡಿದವರನ್ನೂ ಮನಸಾರೆ ಕ್ಷಮಿಸಿ ಅಂಗೀಕರಿಸಿದ ವ್ಯಕ್ತಿಗಳ ಬಗ್ಗೆ ಓದುತ್ತೇವೆ. ಯೋಸೇಫನು, ದಾವೀದನು, ಸ್ತೆಫನು... ಹೀಗೆ ಅನೇಕರುಂಟು! ಇವರು ತಮಗೆ ಕೆಟ್ಟದ್ದನ್ನು ಮಾಡಿದವರಿಗೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡದೆ ಕ್ಷಮಿಸಿ ಒಳ್ಳೆಯದನ್ನೇ ಮಾಡಿದರು. ಎಲ್ಲರಿಗಿಂತ ಹೆಚ್ಚಾಗಿ ಯೇಸುಕ್ರಿಸ್ತನು ತನ್ನನ್ನು ಶಿಲುಬೆಯಲ್ಲಿ ಜಜ್ಜಲ್ಪಟ್ಟು, ಮುಖದಲ್ಲಿ ಉಗಿದು, ಭರ್ಚಿಯಿಂದ ಪಕ್ಕೆಯಲ್ಲಿ ತಿವಿದು, ಚಾಟಿಯಿಂದ ಹೊಡೆದವರಿಗಾಗಿಯು ತಂದೆಯ ಬಳಿ ಬೇಡಿಕೊಂಡರು. "ತಂದೆಯೇ! ಇವರನ್ನು ಕ್ಷಮಿಸು ತಾವು ಮಾಡುತ್ತಿರುವುದು ಏನೆಂದು ತಿಳಿಯದೇ ಇದ್ದಾರೆ" ಎಂದು ಪ್ರಾರ್ಥಿಸಿದರು.
ಕರ್ತನಲ್ಲಿ ಪ್ರಿಯರೇ! ನಮಗೆ ಕೇಡು ಮಾಡಿದವರಿಗಾಗಿಯೂ, ದ್ರೋಹ ಮಾಡಿದವರಿಗಾಗಿಯೂ ಪ್ರಾರ್ಥಿಸುತ್ತಿದ್ದೇವಾ? ಪ್ರಾರ್ಥಿಸಿದರೆ ಅವರನ್ನು ಕ್ಷಮಿಸುವುದು ಕೂಡ ಸುಲಭವಾಗಿ ಮಾರ್ಪಡುತ್ತದೆ. ಕ್ಷಮಿಸಿದರೆ ಅವರ ಆತ್ಮದ ಮೇಲೆ ನಮಗೆ ಕನಿಕರ ಉಂಟಾಗುತ್ತದೆ. ಅವರು ರಕ್ಷಣೆ ಹೊಂದಬೇಕೆಂದು ಪ್ರಾರ್ಥನೆಯ ಮೂಲಕವಾಗಿಯೂ ಕ್ರಿಯಾರೂಪಕವಾಗಿಯೂ ಪ್ರಯತ್ನ ಮಾಡುತ್ತೀರ. ಬಲ ಪರಾಕ್ರಮಿಯಾದ ದೇವರು ಅವರನ್ನು ರಕ್ಷಿಸುತ್ತಾರೆ. ಹೌದು, ಕ್ಷಮಾಪಣೆಯ ಪ್ರಾರಂಭ ಪ್ರಾರ್ಥನೆಯಲ್ಲಿ ಪ್ರಾರಂಭವಾಗಲಿ.
- P. ಶಿವ
ಪ್ರಾರ್ಥನಾ ಅಂಶ:-
ಗ್ರಾಮಗಳಲ್ಲಿ ನಡೆಸಲ್ಪಡುತ್ತಿರುವ ಯೌವನಸ್ಥರು, ಚಿಕ್ಕ ಮಕ್ಕಳು ಯೇಸುವನ್ನು ಬಿಟ್ಟು ಹಿಂಜಾರಿ ಹೋಗದಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482