Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.08.2024
Share:

By Village Missionary Movement

Thursday, 01-Aug-2024

ಧೈನಂದಿನ ಧ್ಯಾನ(Kannada) – 01.08.2024

 

ಕಟ್ಟುಗಳನ್ನು ಬಿಚ್ಚೋಣ

 

"ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದುಬಿಟ್ಟು ಕಣ್ಣಿಗಳನ್ನು ಕಿತ್ತುಹಾಕುವೆನು." - ನಹೂಮ 1:13

  

ನಾನು ಒಂದು ಹಳ್ಳಿಯಲ್ಲಿ ಮಕ್ಕಳ ಸೇವೆ ಮಾಡುತ್ತಿದ್ದೆ. ಹುಡುಗರಿಗೆ ಹಾಡುಗಳು, ಕಥೆಗಳು ಮತ್ತು ವಾಕ್ಯಗಳನ್ನು ಹೇಳಿಕೊಡುತ್ತಿದ್ದಾಗ, ಒಬ್ಬ ಹುಡುಗ ತುಂಬಾ ತರ್ಲೆ ಮಾಡುತ್ತಾ ಇತರ ಹುಡುಗರು ಸಹ ಗಮನಿಸದ ಹಾಗೆ ತೊಂದರೆ ಕೊಡುತ್ತಿದ್ದ. ನನಗೆ ಅವನ ಮೇಲೆ ತುಂಬಾ ಕೋಪ ಬಂತು. ಎಲ್ಲವನ್ನೂ ಮುಗಿಸಿ ಮಕ್ಕಳಿಂದ ಕಂಠಪಾಠ ವಾಕ್ಯ ಕೇಳುತ್ತಿದ್ದೆ. ಆಗ ನಾನು ಅವನನ್ನೂ ಕೇಳಿದೆ. ಅವನು ಆಹ್ ಎಂದು ಹೇಳಿ ತೊದಲುತ್ತಿದ್ದ. ಇಷ್ಟು ಹೊತ್ತು ಗಮನ ಕೊಡದೆ ಆಟವಾಡುತ್ತಿದ್ದಲ್ಲಾ ಗಮನ ಹರಿಸಿದ್ದರೆ ಈಗ ಹೇಳಬಹುದಿತ್ತಲ್ಲಾ ಎಂದು ಹೊಡೆಯಲು ಕೈ ಬೀಸಿದೆ. ಅವನು ತಕ್ಷಣವೇ ವಾಕ್ಯವನ್ನು ಹೇಳಿಬಿಟ್ಟನು. ನಾನು ಪ್ರಾರ್ಥನೆ ಮಾಡಿ ಮಕ್ಕಳನ್ನು ಕಳಿಸಿ ಹೊರಡುವಾಗ ಅವನು ತನ್ನ ತಾಯಿಯೊಂದಿಗೆ ಬಂದನು. ನಾನು ಹೆದರುತ್ತಾ ಇಂದು ನನಗೆ ಸರಿಯಾಗಿ ಹೊಡೆಯುತ್ತಾರೆ ಅಷ್ಟೇ ನಾನು ಇವತ್ತು ಎಂದು ಭಾವಿಸಿದೆ. ಆದರೆ ಅವರು, "ನನ್ನ ಮಗ ಇಷ್ಟು ದಿನದಿಂದ ಮಾತನಾಡುತ್ತಿರಲಿಲ್ಲ, ಈಗ ಅವನು ಚೆನ್ನಾಗಿ ಮಾತನಾಡುತ್ತಿದ್ದಾನೆ, ನೀವು ಏನು ಮಾಡುದ್ರಿ ತಮ್ಮಾ?" ಎಂದರು. ನಾನು ಅವರಿಗೆ ಯೇಸುವಿನ ಬಗ್ಗೆ ಹೇಳಿ ಅವರೇ ಅದ್ಬುತ ಮಾಡಿದರು ಎಂದು ಹೇಳಿದೆನು.

  

ಇದರಂತೆಯೇ ಪಾಪ, ಶಾಪಗಳಿಂದ ಕಟ್ಟಲ್ಪಟ್ಟು ಕಾರ್ಯ ಮಾಡಲು ಸಾಧ್ಯವಾಗದ ಅದೆಷ್ಟೋ ಮಂದಿ ನಮ್ಮ ಸುತ್ತಮುತ್ತ ಇದ್ದಾರೆ. ನೀವು ಎದ್ದು ಹೋದರೆ, ಯೇಸು ನಿಮ್ಮ ಮೂಲಕ ಅವರ ಕಟ್ಟುಗಳನ್ನು ಮುರಿದುಹಾಕುತ್ತಾರೆ. ನಂಬಿಕೆಯೊಂದೇ ಸಾಕು. ಹೀಗೆಯೇ ಯೇಸುವಿನ ಶಿಷ್ಯರ ಬಳಿಗೆ ಒಬ್ಬ ಮನುಷ್ಯನು ಮೂರ್ಛೆ ರೋಗದಿಂದ ಅಸ್ವಸ್ಥನಾಗಿದ್ದ ತನ್ನ ಮಗನನ್ನು ಕರೆತಂದರು. ಅವರಿಂದ ಪ್ರಾರ್ಥಿಸಿ ಗುಣಪಡಿಸಲು ಸಾಧ್ಯವಾಗದೇ ಹೋದಾಗ ಅವರು ಅವನನ್ನು ಯೇಸುವಿನ ಬಳಿಗೆ ಕರೆತಂದರು. ಆಗ ಅವನು ಬಿಡುಗಡೆಯಾದನು. ನಮ್ಮಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಶಿಷ್ಯರು ಯೇಸುವನ್ನು ಕೇಳಿದಾಗ, ನಿಮಗೆ ನಂಬಿಕೆಯಿಲ್ಲ ಎಂದು ಹೇಳಿದರು. ಸಭೆಯು ಪೇತ್ರನಿಗಾಗಿ ಪ್ರಾರ್ಥಿಸಿದಾಗ ಪೇತ್ರನ ಕಟ್ಟುಗಳು ಬಿಚ್ಚಲ್ಪಟ್ಟಿತು.

 

ಈಗ ಇದನ್ನು ಓದುತ್ತಿರುವ ಪ್ರಿಯರೇ! ಹೀಗೆ ಬಂಧಿತರಾದವರನ್ನು ಬಿಡಿಸಲು ಹೊರಡಿ. ಇಲ್ಲದಿದ್ದರೆ, ಅದನ್ನು ಯೇಸುವಿನ ಬಳಿಗೆ ತನ್ನಿ. ಅದನ್ನು ಸಭೆಗೆ ತನ್ನಿ. ಇದೇ ತಿಂಗಳು 15 ನೇ ತಾರೀಖು ಯೌವನಸ್ಥರು ಕಟ್ಟುಗಳಿಂದ ಬಿಡಿಸಲ್ಪಟ್ಟು ಉಜ್ಜೀವನ ಹೊಂದುವಂತೆ, ಯೌವನಸ್ಥರ ಉಜ್ಜೀವನ ಶಿಬಿರ ನಡೆಸುತ್ತಿದ್ದೇವೆ. ತಿರುಚ್ಚಿಯ ಮೊರೈಸಿಟಿಯಲ್ಲಿ ಈ ಯೌವನಸ್ಥರ ಉಜ್ಜೀವನ ಶಿಬಿರವು ನಡೆಯಲಿದೆ. ನಿಮ್ಮ ಮನೆಯಲ್ಲಿ ಯೌವನಸ್ಥರನ್ನು ಮತ್ತು ಮನೆಯ ಸಮೀಪವಿರುವ ಯೌವನಸ್ಥರನ್ನು ಕರೆತನ್ನಿ. ಅವರ ಕಟ್ಟುಗಳು ಬಿಚ್ಚಲ್ಪಟ್ಟುಉಜ್ಜೀವನವನ್ನು ಪಡೆಯುತ್ತಾರೆ.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ತಿರುಚ್ಚಿಯಲ್ಲಿ ನಡೆಯಲಿರುವ ಯೌವನಸ್ಥರ ಶಿಬಿರದಲ್ಲಿ 1 ಲಕ್ಷ ಯುವಕರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet