Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.07.2024
Share:

By Village Missionary Movement

Wednesday, 31-Jul-2024

ಧೈನಂದಿನ ಧ್ಯಾನ(Kannada) – 31.07.2024

 

ಕಾಲ ಕಳೆಯಬೇಡ

 

"…ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ" - 2 ಕೊರಿಂಥ 6:2

  

D.L. ಮೂಡಿ ಬೋಧಕರು ಚಿಕಾಗೋದಲ್ಲಿ ಸಭೆ ನಡೆಸುತ್ತಿದ್ದಾಗ, ದೊಡ್ಡ ಉದ್ಯಮಿಯೊಬ್ಬರು ಸಭೆಗಳಲ್ಲಿ ಬಹಳವಾಗಿ ತೊಡಗಿಸಿಕೊಂಡಿದ್ದರು. ಆದರೆ ಅವರು ಯೇಸುವನ್ನು ಸ್ವೀಕರಿಸಲು ಹಿಂಜರಿದರು. ಪ್ರತಿದಿನ ಕಣ್ಣೀರಿನೊಂದಿಗೆ ಬೋಧಕರಾದ ಮೂಡಿಯವರು ಆಲೋಚನೆ ಹೇಳಿ ಒತ್ತಾಯಿಸುವಾಗ, "ಅಯ್ಯಾ, ನನಗೆ ಸ್ವಲ್ಪ ಸಮಯ ಕೊಡಿ, ವ್ಯಾಪಾರದಲ್ಲಿ ನನ್ನೊಂದಿಗೆ ಪಾಲುದಾರನಾಗಿರುವವರು ರಕ್ಷಣೆ ಹೊಂದದವರು, ಅವರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನಾನು ಕೂಡ ಒಬ್ಬ ವ್ಯಾಪಾರಿ ಆಗಿರುವುದರಿಂದ ನಾನು ಯೇಸುವನ್ನು ಸ್ವೀಕರಿಸಲು ಸಾಧ್ಯವಿಲ್ಲ" ಎಂದು ಹೇಳಿಬಿಡುತ್ತಿದ್ದರು. ಬೋಧಕರಾದ ಮೂಡಿಯವರು ಯೇಸುವಿನ ಬಗ್ಗೆ ಪದೇ ಪದೇ ಹೇಳುತ್ತಿದ್ದದರಿಂದ ಅವರು ಆಲಯಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಕೆಲವು ತಿಂಗಳ ನಂತರ ಅವರು ಅನಾರೋಗ್ಯಕ್ಕೆ ಒಳಗಾದರು. ವಾಸಿಯಾದರೆ ಯೇಸುವನ್ನು ಸ್ವೀಕರಿಸುವುದಾಗಿ ಹೇಳಿದರು. ಮೂಡಿಯವರು ಪ್ರಾರ್ಥಿಸಿದರು. ಅವರು ವಾಸಿಯಾದ ಕೂಡಲೇ ಯೇಸುವನ್ನು ನಿರಾಕರಿಸಿದರು. ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾದರು. ಆಗ ಕತ್ತಲೆಯು ಆವರಿಸಿ ಸತ್ತುಹೋದರು. ಸಾಯುವಾಗ ಅವರ ಕೊನೆಯ ಮಾತು ಇದೇ: "ಕೊಯ್ಲು ಹೋಯಿತು ಮತ್ತು ಬೇಸಿಗೆಯೂ ಮುಗಿಯಿತು" ಎಂಬುದೇ‌.

  

ಯೇಸುವಿನೊಂದಿಗೆ ಶಿಲುಬೆಗೇರಿಸಿದ ಇಬ್ಬರು ಕಳ್ಳರಲ್ಲಿ ಒಬ್ಬನು ಅವನಿಗೆ ನೀಡಲ್ಪಟ್ಟ ಸಮಯವನ್ನು ಸರಿಯಾಗಿ ಉಪಯೋಗಿಸಿ ಪರದೈಸಿಯ ಜೀವನವನ್ನು ಪಡೆದನು. ಮತ್ತೊಬ್ಬ ಕಳ್ಳ ನನ್ನನ್ನು ಶಿಲುಬೆಯಿಂದ ಬಿಡಿಸಿದರೆ ಮಾತ್ರವೇ ಅವರಿಗೆ ಶಕ್ತಿ ಇದೆ ಎಂದು ನಂಬುತ್ತೇನೆ ಎಂಬುದಾಗಿ ಹೇಳಿದನು. ಕೊನೆಗೆ ನಷ್ಟಪಟ್ಟಿದ್ದು ಅವನೇ. ನಾವು ಕೂಡ ಯೇಸುವನ್ನು ತಿಳಿದುಕೊಳ್ಳಲು ಇದೇ ಕೊನೆಯ ಕ್ಷಣವೆಂದು ಒಪ್ಪಿಕೊಂಡು ಅವರನ್ನು ಅಂಗೀಕರಿಸಬೇಕು. ಇನ್ನೂ ಸ್ವಲ್ಪ ಸಮಯ, ಇನ್ನೊಂದು ಅವಕಾಶ ಸಿಗುತ್ತದೆ ಎಂದು ಆಶಿಸುತ್ತಾ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಇದರಲ್ಲಿ ನಷ್ಟಪಡುವುದು ನಿಮ್ಮ ಜೀವನವೇ. ನೀವು ಪರದೈಸಿನ ಜೀವನವನ್ನು ಕಳೆದುಕೊಳ್ಳಬೇಡಿ. ಆದುದರಿಂದ ಇಂದು ಆತನನ್ನು ನಂಬಿ ಅವರನ್ನು ಸ್ವೀಕರಿಸಿದ ಕಳ್ಳನಂತೆ ಪರದೈಸಿನ ಜೀವನವನ್ನು ಪಡೆದುಕೊಳ್ಳಿರಿ. ನೀವು ಈ ಕ್ಷಣವನ್ನು ಕಳೆದುಕೊಂಡರೆ, ನಿಮಗೆ ಇನ್ನೊಂದು ಅವಕಾಶ ಸಿಗದೇ ಹೋಗಬಹುದು.

 

ಯೇಸುವೇ ನಿಮ್ಮನ್ನು ಪರಲೋಕದಲ್ಲಿ ಸೇರಿಸುತ್ತಾರೆ. ನಿಮಗೆ ಬರುವ ಕಷ್ಟ ಮತ್ತು ನಷ್ಟಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಸಮರ್ಥರಾಗಿದ್ದಾರೆ. ಈ ಪರದೈಸಿನ ಜೀವನವನ್ನು ಪಡೆಯಲು ಯೇಸುವನ್ನು ಪೂರ್ಣ ಹೃದಯದಿಂದ ನನ್ನ ಹೃದಯದೊಳಗೆ ಬನ್ನಿ. ನನ್ನ ಪಾಪವನ್ನು ತೊಳೆದುಬಿಡಿ ಎಂದು ಬೇಡಿಕೊಂಡರೆ ಸಾಕು. ಅಷ್ಟು ಮಾತ್ರವಲ್ಲದೆ ಸತ್ಯವೇದವನ್ನು ಓದಿ, ಅವರು ಏನು ಹೇಳುತ್ತಾರೆಂದು ತಿಳಿದುಕೊಳ್ಳುವ ಮತ್ತು ಅನುಸರಿಸುವ ಮೂಲಕ ನೀವು ಅವರೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿರಬಹುದು. ಹೀಗಿರುವಾಗ, ನಾವು ಪಡೆದ ರಕ್ಷಣೆಯನ್ನು ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಭೂಮಿಯ ಮೇಲಿರುವ ಕಾಲದವರೆಗೆ ಕಾಯ್ದುಕೊಳ್ಳಬಹುದು.  

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಸೇವಕರು ಉಳಿಯಲು ಕೋಣೆಗಳನ್ನು ಕಟ್ಟಿಕೊಡುವ ಶೂನೇಮ್ಯರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin