Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.07.2024
Share:

By Village Missionary Movement

Tuesday, 30-Jul-2024

ಧೈನಂದಿನ ಧ್ಯಾನ(Kannada) – 30.07.2024

 

ವರ್ಣಿಸಲಾಗದ ಆನಂದ

 

"…ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ…" - ನೆಹೆಮಿಯಾ 8:10

 

ರಾಜೇಶ್ ಎರಡು ವಾರಗಳ ಕಾಲ ಇಂಗ್ಲೆಂಡಿನಲ್ಲಿ ಇರಬೇಕಾಯಿತು. ಲಂಡನ್ ತಲುಪಿದ ಕೂಡಲೇ ಹಣ ಕೈಸೇರುತ್ತದೆ ಎಂಬ ವಿಶ್ವಾಸ ಅವರಲ್ಲಿತ್ತು. ಇನ್ನೆರಡು ದಿನದಲ್ಲಿ ಅಮೇರಿಕಾಕ್ಕೆ ಹೋಗಬೇಕು. ಉತ್ತಮ ನಂಬಿಕೆಯಿಂದ ಸರಕುಗಳನ್ನು ಖರೀದಿಸಿದರು. ಅವರ ಕೈಯಲ್ಲಿ ಒಂದು ಪೈಸೆಯೂ ಇಲ್ಲ. ಮತ್ತು ಒಬ್ಬ ವ್ಯಕ್ತಿಯೂ ಗೊತ್ತಿಲ್ಲ. ಆದರೆ ಅವರು ಕರ್ತನಲ್ಲಿ ಭರವಸೆಯಿಟ್ಟು ಕರ್ತನಲ್ಲಿ ಸಂತೋಷವಾಗಿದ್ದರು. ಕೊನೆ ಗಳಿಗೆಯಲ್ಲಿ ಹಣ ಬಂತು. ತಾನು ಹೋಗಲಿರುವ ದೋಣಿಯ ತಂಗುದಾಣ, ಆಹಾರ ಮತ್ತು ಎಲ್ಲಾ ಶುಲ್ಕವನ್ನು ಪಾವತಿಸಿ ಉಳಿದ ಹಣವನ್ನು ತೆಗೆದುಕೊಂಡು ಅಮೆರಿಕಕ್ಕೆ ಹೋದರು. ಅವರಿಗೆ ವರ್ಣಿಸಲಾಗದ ಸಂತೋಷ! ನಾವು ದೇವರನ್ನು ಚಿಕ್ಕ ಮಗುವಿನಂತೆ 100% ನಂಬಿದಾಗ, 100% ಸಂತೋಷವು ನಮ್ಮ ಹೃದಯವನ್ನು ತುಂಬುತ್ತದೆ.

  

ಸಂತೋಷ ಎಂಬ ಪದಕ್ಕೆ ಗ್ರೀಕ್ ಭಾಷೆಯಲ್ಲಿ "ಆಚರಣೆಯ ಸಂತೋಷ" ಎಂದರ್ಥ. ಕ್ರಿಸ್ತನ ಮಕ್ಕಳು ಪ್ರತಿದಿನ ಆಚರಿಸಲು ಸಂತೋಷಪಡುತ್ತಾರೆ. ಎಲ್ಲವನ್ನೂ ಸೃಷ್ಟಿಸಿದ ದೇವರು, ಸರ್ವಶಕ್ತನಾದ ದೇವರು ನಮ್ಮೊಂದಿಗಿದ್ದಾರೆ ಎಂದು ಆಚರಿಸುವುದು ಸಂತೋಷವಲ್ಲವೇ!  

  

 R.A. ಡೋರಿ ಎಂಬವರು ಹೀಗೆ ಹೇಳುತ್ತಾರೆ, “ನಾನು ಕ್ರಿಸ್ತನನ್ನು ನನ್ನ ವಿಮೋಚಕನಾಗಿ ಸ್ವೀಕರಿಸುವ ಮೊದಲು, ನಾನು ವಿಶ್ವದ ಅತ್ಯಂತ ದಣಿದ ಮತ್ತು ಆತಂಕದ ವ್ಯಕ್ತಿಯಂತೆ ಭಾವಿಸಿದೆ. ಆದರೆ ನಿಜವಾದ ಕ್ರೈಸ್ತನಾಗಿ ಮಾರ್ಪಟ್ಟ ಕೂಡಲೇ ಚಿಂತೆ ಎಂದರೆ ಏನು ಬೆಲೆ? ಎಂದು ಕೇಳುವ ಮಟ್ಟಿಗೆ ಯಾವಾಗಲೂ, ಅಂದರೆ ಅನುಪಸ್ಥಿತಿಯಲ್ಲಿಯೂ ಮತ್ತು ಅಸಮರ್ಥತೆಯಲ್ಲಿಯೂ ಸಂತೋಷವಾಗಿದ್ದೇನೆ" ಆದರೆ ಇಂದು ಕೆಲವರು ತಮ್ಮ ಬಳಿ ಹೆಚ್ಚು ಹಣ ಇದ್ದಾಗ ಸಂತೋಷಪಡುತ್ತಾರೆ. ಕೆಲವರು ಐಷಾರಾಮಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಆದರೆ ಶಾಶ್ವತವಾದ ಸಂತೋಷವು ದೇವರಲ್ಲಿದೆ. ಏನೇ ಏರಿಳಿತಗಳು ಬರಲಿ, ಅವರನ್ನು ಕಂಡರೆ ಅವೆಲ್ಲವೂ ಮಾಯವಾಗುತ್ತವೆ. ದೇವರು ನಮ್ಮೊಂದಿಗಿರುವಾಗ, ನಾವು ಎಲ್ಲವನ್ನೂ ಆತನ ಕೈಯಲ್ಲಿ ಬಿಟ್ಟಾಗ ನಾವು ಪ್ರತಿ ದಿನವನ್ನು ಮಿತಿಯಿಲ್ಲದ ಸಂತೋಷದಿಂದ ಆಚರಿಸಬಹುದು. ಕಷ್ಟದ ಸಮಯದಲ್ಲಿಯೂ ನೀವು ಸಂತೋಷವಾಗಿರಬಹುದು.

 

ನಾವು ಆತನನ್ನು ನಂಬಿ ದಿನದ 24 ಗಂಟೆಯೂ ಆತನಿಗಾಗಿ ಶ್ರದ್ಧೆಯಿಂದ ಬದುಕುವಾಗ ನಾವು ಸಂತೋಷವಾಗಿರಬಹುದು. ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ ಎಂದು ಪೌಲನು ಫಿಲಿಪ್ಪಿಯವರಿಗೆ ಬರೆಯುವಾಗ ಬಂಧಿಸಲ್ಪಟ್ಟಿದ್ದಾಗಲೂ ಮತ್ತು ಸೆರೆಮನೆಯಲ್ಲಿದ್ದಾಗಲೂ ಸಂತೋಷವಾಗಿ ಬರೆದರು. ನಾವು ದೇವರನ್ನು ನಂಬಿ ಕರ್ತನಲ್ಲಿ ಆತನ ಶಕ್ತಿಯನ್ನು ನೋಡುತ್ತಿರುವಾಗ, ಮಿತಿಯಿಲ್ಲದ ಸಂತೋಷವು ನಮ್ಮ ಹೃದಯವನ್ನು ತುಂಬುತ್ತದೆ. ದೇವರು ಯಾವಾಗಲೂ ನನ್ನೊಂದಿಗಿದ್ದಾರೆ ಮತ್ತು ಆತನು ಸರ್ವಶಕ್ತನಾದ ದೇವರು ಎಂಬ ಆಲೋಚನೆಯೊಂದಿಗೆ ನಾವು ಆತನ ಮೇಲೆ ಅವಲಂಬಿತರಾದಾಗ ನಮಗೆ ಈ ಸಂತೋಷವು ಸಿಗುತ್ತದೆ.

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ಪ್ರಾರ್ಥನೆ ಮತ್ತು ಕಾಣಿಕೆಗಳ ಮೂಲಕ ನಮ್ಮ ಸೇವೆಯನ್ನು ಬೆಂಬಲಿಸುವವರ ಕುಟುಂಬಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet