Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.07.2024
Share:

By Village Missionary Movement

Monday, 29-Jul-2024

ಧೈನಂದಿನ ಧ್ಯಾನ(Kannada) – 29.07.2024

 

ಕಾರ್ಯ ಬದಲಾವಣೆ

 

"…ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ" - ರೋಮಾ 8:28

  

ಅರಸನಾದ ಅಹಷ್ವೇರೋಷನ ರಾಜ್ಯದಲ್ಲಿ ವಿನಾಶದಿಂದ ತಪ್ಪಿಸಿಕೊಂಡ ಯೆಹೂದ್ಯರು, ಉರಿಯುವ ಬೆಂಕಿಯ ಆವಿಗೆಯಿಂದ ಯಾವುದೇ ಹಾನಿಯಿಲ್ಲದೇ ತಪ್ಪಿಸಿಕೊಂಡ ಶದ್ರಕ್‌, ಮೇಷಕ್‌, ಅಬೇದ್‌ನೆಗೋ, ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ದಾನಿಯೇಲ್ ಮತ್ತು ಯೆಶಾಯನ ಮೂಲಕ ಮರಣವನ್ನು ಮುಂಸೂಚಿಸಲ್ಪಟ್ಟು 15 ವರ್ಷಗಳು ಆಯುಷ್ಯನ್ನು ಪಡೆದುಕೊಂಡ ಹಿಜ್ಕೀಯ ರಾಜ ಇವರೆಲ್ಲರ ಕಾರ್ಯಗಳು ಎಲ್ಲಾ ಹಿತಕ್ಕಾಗಿಯೇ ಎಂಬಂತೆ ಬದಲಾಗಿ ಮುಕ್ತಾಯಗೊಂಡಿದ್ದನ್ನು ನೋಡುವಾಗ, ನಮ್ಮ ಕಾರ್ಯಗಳು ಸಹ ನಾವು ಬಯಸುವ ರೀತಿಯಲ್ಲಿ ಬದಲಾಗಿ ಮುಕ್ತಗೊಳ್ಳಬೇಕು ಅಂದುಕೊಳ್ಳುವುದು ಸಹಜವೇ. ಆದರೆ ಇದರ ಬಗ್ಗೆ ಸತ್ಯವೇದವು ನಮಗೆ ಏನು ಕಲಿಸುತ್ತಿದೆ ಎಂಬುದನ್ನು ನೋಡೋಣ. 

   

ಮೊದಲನೆಯದಾಗಿ, ನಾವು ಕೇಳುವ ಕಾರ್ಯಗಳು ದೇವರ ಚಿತ್ತಕ್ಕನುಸಾರವಾಗಿದ್ದರೆ, ಅವುಗಳನ್ನು ಪಡೆದುಕೊಳ್ಳುತ್ತೇವೆ. (1 ಯೋಹಾನ 5:14) ಯೆಹೂದ್ಯರು ನಾಶನದಿಂದ ರಕ್ಷಿಸಲ್ಪಡುವುದು ದೇವರ ಚಿತ್ತವಾಗಿತ್ತು. ಆದರೂ ಎಸ್ತೇರ್ ಅವಳ ದಾದಿಯರು ಮತ್ತು ಎಲ್ಲಾ ಯೆಹೂದ್ಯರು ಮೂರು ದಿನಗಳ ಕಾಲ ಉಪವಾಸವಿದ್ದು ಪ್ರಾರ್ಥಿಸುವುದು ಅಗತ್ಯವಾಗಿತ್ತು. ದಾನಿಯೇಲ್ ಮತ್ತು ಅವರ ಸ್ನೇಹಿತರು ದೇವರಲ್ಲಿ ಹೊಂದಿದ್ದ ಉತ್ಸಾಹ ಮತ್ತು ನಂಬಿಕೆಯು ಅವರ ಮೂಲಕ ದೇವರ ಹೆಸರು ಬಾಬಿಲೋನಿನಲ್ಲಿ ಮಹಿಮೆಪಡುವಂತೆ ಅವರ ಕಾರ್ಯಗಳು ಜಯವಾಗಿ ಮಾರ್ಪಟ್ಟವು. ಅರಸನಾದ ಹಿಜ್ಕೀಯನ ಕಣ್ಣೀರಿನಿಂದ ತುಂಬಿದ ಮನವಿಯು ಯೆಶಾಯನ ಪ್ರವಾದನೆಯನ್ನೇ ಬದಲಾಯಿಸಿ ಬಿಟ್ಟಿತು.

 

ಪ್ರಿಯರೇ! ದೇವರ ಚಿತ್ತವಿದ್ದರೆ, ನಾವು ಉಪವಾಸದೊಂದಿಗೆ ಮತ್ತು ಕಣ್ಣೀರಿನೊಂದಿಗೆ ಅರ್ಪಿಸುವ ನಮ್ಮ ಪ್ರಾರ್ಥನೆಯು ನಮ್ಮ ಕಾರ್ಯಗಳನ್ನು ವ್ಯತ್ಯಾಸವಾಗಿ ಮುಕ್ತಾಯಗೊಳಿಸುತ್ತದೆ. ನಾವು ದೇವರಿಗಾಗಿ ವೈರಾಗ್ಯವಾದ ಕ್ರೈಸ್ತರಾಗಿ ಜೀವಿಸುವಾಗ ನಮ್ಮ ವಿರುದ್ಧ ರೂಪುಗೊಂಡ ಆಯುಧಗಳು ವಿಫಲವಾಗುತ್ತವೆ ಮತ್ತು ನಮ್ಮನ್ನು ವಿರೋಧಿಸುವವರು ನಮ್ಮ ಬಳಿಗೆ ಬರುತ್ತಾರೆ. ಅದೇ ಸಮಯದಲ್ಲಿ, ನಮ್ಮ ಕಾರ್ಯಗಳು ನಮಗೆ ಬೇಕಾದ ರೀತಿಯಲ್ಲಿ ಹೊರಹೊಮ್ಮದಿದ್ದರೂ ಸಹ, ಯಾವುದೇ ಅಹಿತಕರ ಪರಿಸ್ಥಿತಿಯನ್ನು ಜಯಿಸಲು ದೇವರು ನಮಗೆ ಶಕ್ತಿಯನ್ನು ನೀಡುತ್ತಾರೆ. ಆತನನ್ನು ಪ್ರೀತಿಸುವವರಿಗೆ ಎಲ್ಲವೂ ಹಿತಕ್ಕಾಗಿಯೇ ನಡೆಯುತ್ತದೆ ಎಂಬ ಸತ್ಯದಲ್ಲಿ ನಮಗೆ ಅಚಲವಾದ ನಂಬಿಕೆ ಬೇಕು. ನಾವು ಆತನನ್ನು ಪ್ರೀತಿಸುವವರು ಎಂದು ಖಚಿತಪಡಿಸಿಕೊಳ್ಳುವುದು ಸಹ ಬಹಳ ಮುಖ್ಯ. ನಾವು ಇವುಗಳನ್ನು ಹೊಂದಿದ್ದರೆ ನಮ್ಮ ಕ್ರೈಸ್ತ ಜೀವನವು ಬಂಡೆಯ ಮೇಲೆ ಸ್ಥಾಪಿಸಲಾದ ಮನೆಯಂತೆ ಎಲ್ಲಾ ಸಂದರ್ಭಗಳಲ್ಲಿ ದೃಢವಾಗಿರುತ್ತದೆ. ಆಮೆನ್.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet