Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.07.2024
Share:

By Village Missionary Movement

Saturday, 27-Jul-2024

ಧೈನಂದಿನ ಧ್ಯಾನ(Kannada) – 27.07.2024

 

ಗಾಯಗಳನ್ನು ಗುಣಪಡಿಸುತ್ತಾರೆ

 

"...ನಿನ್ನ ಗಾಯ ಗಳನ್ನು ಸ್ವಸ್ಥ ಮಾಡುವೆನೆಂದು ಕರ್ತನು ಅನ್ನುತ್ತಾನೆ" - ಯೆರೆಮಿಯ 30:17

  

ಒಬ್ಬ ಬೌದ್ಧ ವ್ಯಕ್ತಿ ತುಂಬಾ ಅನಾರೋಗ್ಯದಿಂದ ಸಾಯುವ ಪರಿಸ್ಥಿತಿಯಲ್ಲಿದ್ದಾಗ ಒಂದು ಚಿಕ್ಕ ಹುಡುಗಿ ಪ್ರತಿದಿನ ಅವರನ್ನು ಭೇಟಿ ಮಾಡಿ ಯೇಸು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮ್ಮನ್ನು ಗುಣಪಡಿಸುತ್ತಾರೆ ಎಂದು ಹೇಳುತ್ತಾ ಇದ್ದಳು. ಬಹಳ ಕೋಪಗೊಂಡ ಅವರು, “ಕ್ರೈಸ್ತ ನಾಯಿ ಹೊರಗೆ ಹೋಗು” ಎಂದು ಪ್ರತಿದಿನವೂ ಬೈದು ಕಳುಹಿಸುತ್ತಿದ್ದರು. ಒಂದು ದಿನ ಸತ್ಯವೇದದೊಂದಿಗೆ ಬಂದು ನಿಂತಳು. ನೀನು ಚಿಕ್ಕ ಹುಡುಗಿಯಾದ್ದರಿಂದ ನಿನ್ನನ್ನು ಬಿಡುತ್ತಿದ್ದೇನೆ ಎಂದು ಹೇಳಿ ಸತ್ಯವೇದವನ್ನು ಕಿತ್ತುಕೊಂಡು ಕಳುಹಿಸಿದರು. ನಂತರ ಸ್ವಲ್ಪ ಸಮಯದ ನಂತರ ಅದನ್ನು ತೆಗೆದುಕೊಂಡು ಇದರಲ್ಲಿ ಏನಿದೆ ದಿನಾಲೂ ತರುತ್ತಿದ್ದಾಳಲ್ಲಾ ಎಂದು ಓದತೊಡಗಿದರು. ನಂತರ ಸ್ವಸ್ಥತೆ ಹೊಂದಿ ಎದ್ದುನಿಂತರು. ಅವರೇ ದಕ್ಷಿಣ ಕೊರಿಯಾ ದೇಶದ ಉಜ್ಜೀವನದಲ್ಲಿ ದೇವರು ಉಪಯೋಗಿಸಿದ ಪಾತ್ರ ಪಾಲ್ ಯಾಂಗಿಚ್ಚೋ.

  

ದೇವರ ವಾಕ್ಯವು ಹೃದಯದ ಗಾಯಗಳನ್ನು ಗುಣಪಡಿಸುತ್ತದೆ. ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ ಎಂದು ಕೀರ್ತನೆ 34:18 ರಲ್ಲಿ ಸತ್ಯವೇದವು ಹೇಳುತ್ತಿದೆ. ಮತ್ತು ಆತನು ಮನಸ್ಸಿನ ಗಾಯಗಳನ್ನು ಗುಣಪಡಿಸುವವರು, ಸ್ವಸ್ಥಮಾಡುವವರು ಮಾತ್ರವಲ್ಲದೆ ನಮ್ಮ ದೈಹಿಕ ದೌರ್ಬಲ್ಯಗಳನ್ನು ಸಹ ಗುಣಪಡಿಸುವ ದೇವರು. ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಪಾರ್ಶ್ವವಾಯು ರೋಗಿಯನ್ನು ನೋಡಿ ಪೇತ್ರನು, “ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾರೆಂದು ಹೇಳಿ ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ” ಎಂದರು. ಎಂಟು ವರ್ಷಗಳಿಂದ ಮಲಗಿದ್ದ ವ್ಯಕ್ತಿಯು ತಕ್ಷಣವೇ ಎದ್ದೇಳುತ್ತಾನೆ. ಅದೇ ರೀತಿಯಲ್ಲಿ, ದೊರ್ಕಳೆಂಬ ಶಿಷ್ಯಿ ಮರಣಹೊಂದಿದಾಗ, ಪೇತ್ರನು ಯೇಸುವಿನ ಹೆಸರಿನಲ್ಲಿ ಅವಳನ್ನು ಜೀವಂತವಾಗಿ ಎಬ್ಬಿಸಿದರು. ದೇವರು ತನ್ನ ವಾಕ್ಯವನ್ನು ಕಳುಹಿಸಿ ಗುಣಪಡಿಸುತ್ತಾರೆ. ದೇವರ ವಾಕ್ಯವನ್ನು ಹೆಚ್ಚಾಗಿ ಓದುವಾಗ ಅವುಗಳ ಮೇಲೆ ಹಕ್ಕುದಾರರಾಗುವಾಗ ಅವು ನಮ್ಮ ಜೀವನದಲ್ಲಿ ಪ್ರಾಯೋಗಿಕವಾಗುತ್ತದೆ.

 

ಪ್ರಿಯರೇ! ನಿಮ್ಮ ಮನಸ್ಸಿನ ಗಾಯದೊಂದಿಗೆ, ದೇಹದ ನೋವಿನೊಂದಿಗೆ ನೀವು ಬಳಲುತ್ತಿದ್ದೀರಾ? ದೇವರ ವಾಕ್ಯವು ನಿಮಗೆ ಸಾಂತ್ವನ ನೀಡುತ್ತದೆ, ದೇವರ ವಾಕ್ಯವಾಗಿರುವ ಸತ್ಯವೇದವನ್ನು ಹೆಚ್ಚು ಓದಿ ಮತ್ತು ಅವುಗಳಿಂದ ನಿಮ್ಮ ಹೃದಯವನ್ನು ತುಂಬಿಕೊಳ್ಳಿರಿ. ಬಹುಶಃ ನಿಮ್ಮ ಹೃದಯ ಇಂದು ಮುರಿದುಹೋಗಿರಬಹುದು. ನಮ್ಮನ್ನು ಅಂಗೈಯಲ್ಲಿ ಚಿತ್ರಿಸಿರುವ ದೇವರ ಬಳಿ, ಮುರಿದ ಹೃದಯವನ್ನು ಕೊಡಿರಿ, ಕ್ರಿಸ್ತನ ಗಾಯಗೊಂಡ ಕೈಗಳಲ್ಲಿ ಗಾಯಗೊಂಡ ಹೃದಯವನ್ನು ಕೊಡಿರಿ, ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ (ಕೀರ್ತನೆ 34:18) ನಿಮ್ಮ ಮುರಿದ ಹೃದಯವನ್ನು ಕ್ರಿಸ್ತನ ಗಾಯಗೊಂಡ ಕೈಗಳಲ್ಲಿ ಕೊಡಿರಿ. ಆಗ ವಾಸಿಯಾಗದ ಗಾಯಗಳು ವಾಸಿಯಾಗುತ್ತವೆ. ಕಹಿಯು ಮಾಯವಾಗುತ್ತದೆ ಮತ್ತು ಸಮಾಧಾನದಿಂದ ಹೃದಯವು ತುಂಬುತ್ತದೆ.

- Sis. ಜಾಯ್ ಗ್ರೇಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವ ಹೀಲಿಂಗ್ ಸೇವೆಗಳ ಮೂಲಕ ಅನೇಕರು ಅದ್ಭುತವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet