By Village Missionary Movement
Saturday, 20-Jul-2024ಧೈನಂದಿನ ಧ್ಯಾನ(Kannada) – 20.07.2024
ತಪ್ಪಿಸುವ ದೇವರು
"ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು;... ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು" - 1 ಕೊರಿಂ.10:13
ಕರ್ತನಾದ ದೇವರು ನಮ್ಮೊಂದಿಗಿರುವುದರೊಂದಿಗೆ, ನಮ್ಮಲ್ಲಿ ವಾಸಮಾಡುತ್ತಾರೆ ಮತ್ತು ನಮಗೆ ಮಾರ್ಗದರ್ಶನ ನೀಡುತ್ತಾರೆ. ಒಂದು ಕ್ಷಣವೂ ನಮ್ಮನ್ನು ಬಿಡದ ಹಾಗೆ ನಮ್ಮೊಂದಿಗಿದ್ದಾರೆ. ಆದರೆ, ದೇವರ ಮಕ್ಕಳಾದ ನಮ್ಮ ಜೀವನದಲ್ಲಿ ದಿಢೀರನೆ ಕೆಲವು ಶೋಧನೆಗಳು, ಅಪಘಾತಗಳು ಮತ್ತು ಅನಾರೋಗ್ಯಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ "ಪರೀಕ್ಷೆ, ಉತ್ತೀರ್ಣ" ಇವನ್ನೆಲ್ಲಾ ಇಟ್ಟು ಮುಂದಕ್ಕೆ ಕಳುಹಿಸುವ ಹಾಗೆ ಪರಲೋಕ ವಾಸಿಗಳಾದ ನಮ್ಮ ಜೀವನದಲ್ಲೂ ಕೆಲವು ಶೋಧನೆಗಳು, ಉತ್ತೀರ್ಣ (ಶಿಕ್ಷೆಗಳು) ಆಗಾಗ್ಗೆ ಸಂಭವಿಸುತ್ತದೆ. ಅದರ ಮೂಲಕ ನಾವು ದೇವರು ಬಯಸುವ ಆಧ್ಯಾತ್ಮಿಕ ಅರ್ಹತೆಯನ್ನು ಪಡೆದುಕೊಳ್ಳುತ್ತೇವೆ.
ಕಳೆದ ಮೇ 29 ರಂದು ನನ್ನ ಗಂಡ ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಳ್ಳಿಗಳಲ್ಲಿ ಸೇವೆಗೆ ಹೋಗಿದ್ದರು. ಸೇವೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮಧ್ಯಾಹ್ನದ ಕಡುಬಿಸಿಲಿನಲ್ಲಿ Dehydration, Low sugar, Low pressure ಹೀಗೆ ಎಲ್ಲಾ ಸೇರಿ ಪ್ರಜ್ಞೆ ತಪ್ಪಿದರು. ದ್ವಿಚಕ್ರ ವಾಹನದಲ್ಲಿ ಹೋಗಿದ್ದವರು ನಮ್ಮ ಮನೆಗೆ ಬರಲು ಗೊತ್ತಾಗದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬೇರೆಡೆ ಹೋಗಿ ಗಾಡಿ ಸಮೇತ ಒಂದು ಹಳ್ಳದಲ್ಲಿ ಬಿದ್ದುಬಿಟ್ಟರು. ಆ ಶಬ್ದ ಕೇಳಿದವರು ದೇವದೂತರಂತೆ ಬಂದು ಸಹಾಯ ಮಾಡಲು ದೇವರು ಕೃಪೆ ನೀಡಿದರು. ಒಬ್ಬ ಪ್ರೀತಿಯ ತಮ್ಮ ನನ್ನನ್ನು ಅಪಘಾತದ ಸ್ಥಳಕ್ಕೆ ಕರೆದೊಯ್ದರು. ಆಟೋ ಓಡಿಸುವ ಪ್ರೀತಿಯ ಸಹೋದರನ ಮೂಲಕ ಆಸ್ಪತ್ರೆಗೆ ಹೋಗಲು ದೇವರು ಕೃಪೆ ತೋರಿದರು. ದೇವರ ಮಹಾಕೃಪೆಯಿಂದ, ದೊಡ್ಡ ಹೊಡೆತ ಅಥವಾ ಮೂಳೆ ಮುರಿತವಿಲ್ಲದೆ ಕೆಲವು ಸಣ್ಣಪುಟ್ಟ ಗಾಯಗಳೊಂದಿಗೆ ದೇವರು ಪಾರು ಮಾಡಿದರು.
ಹೌದು, ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. (ಪ್ರಲಾಪಗಳು 3:22) ದೇವರು ನಂಬಿಗಸ್ಥನು; ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಮಗೆ ಬರಗೊಡಿಸದೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವರು ಎಂಬುದನ್ನು ಅನುಭವಿಸಲು ದೇವರು ಕೃಪೆ ತೋರಿದರು. ರೋಮಾ 5:4 ರ ಪ್ರಕಾರ, ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಪೌಲನ ಮಾತುಗಳನ್ನು ನಿಜವಾಗಿಸುವ ಮೂಲಕ ಅನೇಕ ಪಾಠಗಳನ್ನು ಕಲಿಸಿಕೊಟ್ಟರು.
ನನಗೆ ಪ್ರಿಯವಾದವರೇ! ಎಲ್ಲಾ ಸಂದರ್ಭಗಳಲ್ಲಿ ತಪ್ಪಿಸಲು ಶಕ್ತನಾದ ಯೇಸು ಕ್ರಿಸ್ತನು ನಿಮ್ಮಲ್ಲಿ ಪ್ರತಿಯೊಬ್ಬರನ್ನು, ವಿಶೇಷವಾಗಿ ಎಲ್ಲಾ ಸೇವಕರುಗಳನ್ನು ಕಾಪಾಡಿ ಮುನ್ನಡೆಸಲಿ! ಆಮೆನ್.
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ನಮ್ಮ ಪತ್ರಿಕೆಗಳಿಗೆ ಬರೆದುಕೊಡುವವರು ದೇವರ ಆತ್ಮದಿಂದ ತುಂಬಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482