Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.07.2024
Share:

By Village Missionary Movement

Thursday, 18-Jul-2024

ಧೈನಂದಿನ ಧ್ಯಾನ(Kannada) – 18.07.2024

 

ದೇವರಿಗೆ ಅಗತ್ಯವಾಗಿರುವ ಯೌವನಸ್ಥರು

 

"...ಯೌವನಸ್ಥರೇ, ನೀವು ಶಕ್ತರಾಗಿರುವದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವದರಿಂದಲೂ ನೀವು ಕೆಡುಕನನ್ನು ಜಯಿಸಿರುವದರಿಂದಲೂ ನಿಮಗೆ ಬರೆದಿದ್ದೇನೆ" - 1 ಯೋಹಾನ 2:14

  

ದೇವರಿಗೆ ಯೌವನಸ್ಥರು ಬೇಕು. ಸೈತಾನನೂ ಯೌವನಸ್ಥರನ್ನು ಹುಡುಕುತ್ತಾ ಅಲೆಯುತ್ತಿದ್ದಾನೆ. ಅವನು ಯೌವನಸ್ಥರಿಗೆ ಪಾಪದ ಆನಂದವನ್ನು ನೀಡಿ ಅವರ ಶಕ್ತಿಯನ್ನು ಕದ್ದು ಅವರನ್ನು ನಾಶಮಾಡುತ್ತಾನೆ. (ಪ್ರಕಟನೆ 12:12, ಯೋಹಾನ 10:10) ಇಂದಿಗೂ, ಸೈತಾನನು ಯುವಜನರನ್ನು ದೇವರು ಹೊಂದಿರುವ ನಿತ್ಯಜೀವವನ್ನು ಪಡೆಯದಂತೆ ಮತ್ತು ಈ ಲೌಕಿಕ ಜೀವನದಲ್ಲಿ ಅವರನ್ನು ನಾಶಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾನೆ. ಏಕೆಂದರೆ ಯೌವನಸ್ಥರು ಯಾರನ್ನೋ ಹೀರೋ ಎಂದು ಭಾವಿಸುವುದರಿಂದ, ನೀವು ಹೀರೋ ಎಂದರೆ, ಅವರು ತಮ್ಮನ್ನು "0" (ಜೀರೋ) ಎಂದು ಭಾವಿಸುತ್ತಾರೆ.  

  

ಒಮ್ಮೆ ಪ್ರಧಾನಿ ನೆಹರೂ ಇಂಗ್ಲೆಂಡಿಗೆ ಹೋಗಿದ್ದರು. ನಂತರ ತತ್ವಜ್ಞಾನಿ ಬರ್ಟ್ರಾಂಡ್ ರೌಸೆಲ್ ಅವರನ್ನು ಭೇಟಿಯಾದರು. ಆಗ ಆ ಬುದ್ದಿವಂತ ನೆಹರೂ ಕಡೆ ನೋಡಿ “0” ದೇಶದ ಪ್ರಧಾನ ಮಂತ್ರಿ ಬಾ” ಎಂದು ಕರೆದರು. ಇಂಗ್ಲೆಂಡಿನ ಅಭಿವೃದ್ಧಿಯ ಮುಂದೆ ಭಾರತವು "0" ಎಂದು ನೆಹರೂ ಭಾವಿಸಿದ್ದರು. ತತ್ವಜ್ಞಾನಿ ನೆಹರೂ ಅವರ ಬಾಡಿದ ಮುಖವನ್ನು ನೋಡಿ ಹೇಳಿದರು, "ಅಯ್ಯಾ ನೆಹರೂ, "0" ಎಂಬ ಗಣಿತವನ್ನು ಕಂಡುಹಿಡಿದು ಗಣಿತಶಾಸ್ತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ದೇಶದಿಂದ ಬಂದಿರುವುದರಿಂದ "0" ದೇಶದಿಂದ ಬಂದವರು ಎಂದು ನಾನು ಉಲ್ಲೇಖಿಸಿದೆ ಎಂದರು.

 

ಇಂದಿಗೂ ಯೌವನಸ್ಥರು ತಮಗೆ ದೇವರು ನೀಡಿರುವ ಉನ್ನತಿಯನ್ನು ಗ್ರಹಿಸಲು ಬಿಡದೆ ಸೈತಾನನು ಆದಾಮ ಮತ್ತು ಹವ್ವಳನ್ನು ವಂಚಿಸಿದ ಹಾಗೆಯೇ ಇವರನ್ನೂ ವಂಚಿಸುತ್ತಲೇ ಇದ್ದಾನೆ. ಪವಿತ್ರತೆಯು ಶಾಶ್ವತವಾಗಿದೆ ಮತ್ತು ನಾವು ಪಾಪದಿಂದ ಹೊರಬರಲು ಸಾಧ್ಯವಿಲ್ಲ ಎಂದು ಯೋಚಿಸುವಂತೆ ಮಾಡುತ್ತಾನೆ. ಅನಿತ್ಯವಾದ ಪಾಪ ಸುಖವೇ ಶಾಶ್ವತ ಎಂದು ಭಾವಿಸುವಂತೆ ಮಾಡುತ್ತಾನೆ. ಬದುಕುವುದಕ್ಕಾಗಿಯೇ ಯೌವ್ವನ! ಈಗೆಲ್ಲಾ ದೇವರನ್ನು ಹುಡುಕುವ ಅಗತ್ಯವಿಲ್ಲ. ಆಮೇಲೆ ನೋಡಿಕೊಳ್ಳೋಣ ಎಂಬ ಯೋಚನೆಯನ್ನು ಕೊಡುತ್ತಾನೆ.  

  

ಯೌವನಸ್ಥರೇ! ತಂತ್ರಗಳು ನಮಗೆ ಅಪರಿಚಿತವಲ್ಲವಲ್ಲಾ. ಆದುದರಿಂದ ನಾವಿರುವ ಸ್ಥಿತಿಯಲ್ಲೇ ಹಾಗೆಯೇ ಆತನಿಗೆ ಒಪ್ಪಿಸಿಕೊಟ್ಟರೆ, ಖಂಡಿತವಾಗಿಯೂ ನಾವು ಹೊಸ ಒಡಂಬಡಿಕೆ ಮತ್ತು ಹಳೆಯ ಒಡಂಬಡಿಕೆಯಲ್ಲಿರುವ ಭಕ್ತರಂತೆ ಉನ್ನತಿ ಹೊಂದುತ್ತೇವೆ. ನಮ್ಮಲ್ಲಿ ಯೌವನಸ್ಥರಾದ ಪ್ರತಿಯೊಬ್ಬರೂ ದೇವರಿಗೆ ಅಗತ್ಯ. ದೇವರು ನಿಮ್ಮನ್ನು ನೋಡುವ ರೀತಿಯಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳಲು ಕಲಿಯಿರಿ. ನೀವು ದೇವರಿಗಾಗಿ ಹೀರೋ ತರಹ ಕಾರ್ಯ ಮಾಡಲು ಸಾಧ್ಯ. ದೇವರು ನಿಮ್ಮನ್ನು ಆಶೀರ್ವದಿಸಲಿ!

- S. ಸಮುವೇಲ್ ಮೋರಿಸ್

 

ಪ್ರಾರ್ಥನಾ ಅಂಶ:

ಯೇಸುವಿನ ಸಂತತಿ ಕಾರ್ಯಕ್ರಮ ನೋಡುವ ಮಕ್ಕಳು ನಿಜವಾಗಿಯೂ ಯೇಸುವಿನ ಮಕ್ಕಳಾಗಿ ಮಾರ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al