Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 31.03.2021

ಧೈನಂದಿನ ಧ್ಯಾನ(Kannada) – 31.03.2021

ಯಾವುದು ಶ್ರೇಷ್ಠವಾದದ್ದು?

"...ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ;..." - ಅಪೊಸ್ತಲ 20:24

ದಕ್ಷಿಣ ಅಮೇರಿಕಾದಲ್ಲಿ ಯಾರು ಹೋಗಲಾರದಂತಹ ದಟ್ಟವಾದ ಕಾಡಿನ ಭಾಗದಲ್ಲಿ ಆಕ್ಕ ಇಂಡಿಯನ್ಸ್ ಎಂಬ ಜನಾಂಗದ ಜನರು ಜೀವಿಸುತ್ತಿದ್ದರು. ಇವರು ತಮ್ಮ ಜನಾಂಗವನ್ನು ಬಿಟ್ಟು ಬೇರೆ ಮನುಷ್ಯರನ್ನು ಕಂಡರೆ ವಿಷದ ಕೊಂಬುಗಳಿಂದ ಕೊಂದು ಹಾಕಿಬಿಡುತ್ತಿದ್ದರು. ಇಂತಹ ಜನರಿಗೆ ದೇವರನ್ನು ತಿಳಿಸಲು ತನ್ನನ್ನು ಸಮರ್ಪಿಸಿಕೊಂಡರು ಜೀಮ್ ಎಲಿಯಟ್ ಎಂಬ ಯೌವನಸ್ಥನು. ಅವರ ಭಾಷೆಯನ್ನು ಕಲಿತುಕೊಂಡರು. ಅವರೊಂದಿಗೆ ಬೆರೆಯಲು, ಆ ಜನರಿಗೆ ಸುವಾರ್ತೆಯನ್ನು ತಿಳಿಸಲು ಒಂದು ಮಾರ್ಗವನ್ನು ಹುಡುಕಿದರು. ತನ್ನ 4 ಜನ ಸ್ನೇಹಿತರೊಂದಿಗೆ ಸೇರಿ ಒಂದು ಚಿಕ್ಕ ವಿಮಾನದಲ್ಲಿ ಆ ಕಾಡಿನ ಮೇಲೆ ಹಾರಿ, ಕಾಣಿಕೆಯ ವಸ್ತುಗಳನ್ನು ಆ ಜನರಿಗೆ ಹಾಕಿದರು. ಆ ಜನರು ಅದನ್ನು ಸಂತೋಷವಾಗಿ ಅಂಗೀಕರಿಸಿದ್ದರಿಂದ, ತಮ್ಮ ಜೀವವನ್ನೂ ಲೆಕ್ಕಿಸದೆ ಯಾವುದಕ್ಕೂ ಹೆದರದೆ ಕಾಡಿನೊಳಗೆ ನೇರವಾಗಿ ಹೋಗಲು ತೀರ್ಮಾನಿಸಿ ಜೀಮ್ ಎಲಿಯಟ್, ಮತ್ತು ಅವರ ಸ್ನೇಹಿತರು ಹೋದರು. ಸ್ವಲ್ಪವೂ ಎದುರು ನೋಡದ ಆ ಸಮಯದಲ್ಲಿ ಜನರು ಅವರನ್ನು ವಿಷದ ಅಂಬುಗಳೊಂದಿಗೆ ಸಾಯಿಸಿಬಿಟ್ಟರು. ಆದರೂ ಈ ವೇದನೆಯ ಮಧ್ಯದಲ್ಲಿ ಈ ಸೇವೆಯನ್ನು ಅವರ ಹೆಂಡತಿಯರು ಮುಂದುವರಿಸಿದರು. ಇಂದು ಆಕ್ಕಾ ಜನಾಂಗದ ಮಧ್ಯದಲ್ಲಿ ಸೇವಕರು ರೂಪಿಸಲ್ಪಟ್ಟು ಸೇವೆಗೆ ಬರುತ್ತಿದ್ದಾರೆ.

ಯೇಸುವಿನ ಸೇವಕನಾದ ಪೌಲನು ಎಫೆಸ ಸಭೆಯ ಹಿರಿಯರನ್ನು ಮಿಲೇತ ಎಂಬ ಪಟ್ಟಣಕ್ಕೆ ಕರೆದು ಮಾತನಾಡುವಾಗ, ನನ್ನ ಪ್ರಾಣವನ್ನು ಶ್ರೇಷ್ಠವೆಂದು ಎನಿಸುವುದಿಲ್ಲ ಎಂದು ಹೇಳುತ್ತಾರೆ. ಪೌಲನು ತನ್ನ ಜೀವಕ್ಕಿಂತ ದೇವರ ಕರೆಯುವಿಕೆ ಯನ್ನು ದೊಡ್ಡದಾಗಿ ನೆನೆಸಿದರು. ಆದ್ದರಿಂದ ತಾನು ಸೆರೆಯಲ್ಲಿ ಬಂಧಿಸಲ್ಪಟ್ಟರು, ಜನರು ವಿರೋಧವಾಗಿ ಎದ್ದೇಳಿ ದರು, ಚಾಟಿಗಳಿಂದ ಹೊಡೆದರು, ಹಡಗಿನಲ್ಲಿ ಪ್ರಯಾಣ ಮಾಡುವಾಗ ಅನೇಕ ಕಷ್ಟಗಳು ಎದುರಾದರೂ ಏನನ್ನೂ ಲೆಕ್ಕಿಸದೆ ಸೇವೆಯನ್ನು ಮುಂದುವರಿಸಿದರು. ಸೋತು ಹೋಗಿ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳದೇ ಹಲವು ದೇಶಗಳಿಗೆ ಹೋಗುತ್ತಲೇ ಇದ್ದರು. ಮರಣವನ್ನು ಸಂತೋಷದಿಂದ ಅಂಗೀಕರಿಸುತ್ತೇನೆ,  ಏಕೆಂದರೆ ದೇವರ ಕರೆಯುವಿಕೆಯನ್ನು ನಾನು ಸಂಪೂರ್ಣವಾಗಿ ನೆರವೇರಿಸಿದ್ದೇನೆ ಎಂದು ಹೇಳುತ್ತಿದ್ದಾರೆ.

ಇದನ್ನು ಓದುತ್ತಿರುವ ಸ್ನೇಹಿತರೇ, ಯೇಸುಕ್ರಿಸ್ತನು ಪರಲೋಕಕ್ಕೆ ಹೋಗುವುದಕ್ಕಿಂತ ಮುಂಚೆ ಕೊಟ್ಟ ಕೊನೆಯ ಕರೆಯುವಿಕೆ ನೀವು ಹೋಗಿ ಸಕಲ ಜನಾಂಗಗಳಿಗೂ ಸುವಾರ್ತೆಯನ್ನು ಸಾರಿರಿ ಎಂಬುದೇ. ನೀವು ಅವರ ಈ ಕರೆಯುವಿಕೆಯನ್ನು ಎಷ್ಟರಮಟ್ಟಿಗೆ ನೆರವೇರಿಸುತ್ತಿದ್ದೀರ? ಜೀಮ್ ಎಲಿಯಟ್, ಮತ್ತು ಪೌಲನು ದೇವರ ಕರೆಯುವಿಕೆಯನ್ನು ದೊಡ್ಡದಾಗಿ ನೆನೆಸಿದ್ದರಿಂದ ಜೀವವನ್ನು ದೊಡ್ಡದಾಗಿ ನೆನೆಸದೆ ಸುವಾರ್ತೆಯನ್ನು ಸಾರಿದರು. ಇಂದು ನಮ್ಮ ಜೀವನದಲ್ಲಿ ಯಾವುದು ಶ್ರೇಷ್ಠವಾದದ್ದಾಗಿ ನೆನೆ ಸುತ್ತಿದ್ದೇವೆ? ಹಣವೇ, ಪದವಿಯೇ, ವಿದ್ಯಾರ್ಹತೆಯೇ, ಜೀವವೆ? ಅಥವಾ ದೇವರ ಪ್ರೀತಿಯೆ? ನಿಮ್ಮ ಹಣವನ್ನು ಮಿಷನರಿ ಸೇವೆಗೆಂದು ಖರ್ಚು ಮಾಡಬಹುದು. ಮಿಷನರಿ ಗಳಿಗಾಗಿ ಪ್ರಾರ್ಥಿಸಲು ನಿಮ್ಮ ಸಮಯವನ್ನು ಖರ್ಚು ಮಾಡಬಹುದು. ಅಷ್ಟೇ ಅಲ್ಲದೆ ನೀವೇ ಮಿಷನರಿಗಳಾಗಿ ಬರಬಹುದು. "ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವನು ಅದನ್ನು ಕಾಪಾಡಿಕೊಳ್ಳುವನು." ಆಮೆನ್.
-    Mrs. ಅನ್ಬು ಜ್ಯೋತಿ ಸ್ಟಾಲಿನ್

ಪ್ರಾರ್ಥನಾ ಅಂಶ:-
ನಮ್ಮ ಮಿಷನರಿ ಯೌವನಸ್ಥ ಮಕ್ಕಳಿಗೆ ದೇವರು ಒಳ್ಳೆಯ ಜೀವನದ ಜೊತೆಗಾರರನ್ನು ದಯಪಾಲಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)