ಧೈನಂದಿನ ಧ್ಯಾನ(Kannada) – 06.11.2024 (Gospel Special)
ಧೈನಂದಿನ ಧ್ಯಾನ(Kannada) – 06.11.2024 (Gospel Special)
ಯಾರನ್ನು ಬೇಕಾದರೂ ಉಪಯೋಗಿಸಲು ಸಾಧ್ಯ
"…ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ" – ಯೆಶಾಯ 44:25
ಡಿ.ಎಲ್.ಮೂಡಿ ಎಂಬ ಬೋಧಕರು ತಮ್ಮ ಪ್ರಸಂಗವನ್ನು ಮುಗಿಸಿ ವೇದಿಕೆಯಿಂದ ಕೆಳಗಿಳಿದರು. ಆಗ ಒಬ್ಬ ಇಂಗ್ಲಿಷ್ ಉಪನ್ಯಾಸಕರು ಅವರನ್ನು ಭೇಟಿಯಾಗಿ ನಿಮ್ಮ ಉಪದೇಶ ತುಂಬಾ ಚೆನ್ನಾಗಿದೆ. ಆದರೆ ನಿಮ್ಮ ಇಂಗ್ಲಿಷ್ ಗ್ರಾಮರ್ ತುಂಬಾ ಕೆಟ್ಟದಾಗಿದೆ ಎಂದರಂತೆ. ತಕ್ಷಣ ಡಿ.ಎಲ್ ಮೂಡಿಯವರು ನಗುತ್ತಾ ನಾನು ನನ್ನ ಮೋಸವಾದ ಇಂಗ್ಲಿಷ್ ನಿಂದ ಎಷ್ಟೋ ಜನರನ್ನು ದೇವರ ಕಡೆಗೆ ನಡೆಸಿದ್ದೇನೆ. ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲ ನೀವು ಎಷ್ಟು ಜನರನ್ನು ದೇವರ ಬಳಿಗೆ ಕರೆತಂದಿದ್ದೀರಿ ಎಂದು ಕೇಳಿದರು. ತಕ್ಷಣ ಅವರು ತಲೆಸಿಬೊಗ್ಗಿಸಿಕೊಂಡು ಹೊರಟು ಹೋದರು. ಡಿ.ಎಲ್.ಮೂಡಿಯವರು ನಿಧನರಾದ ಕೂಡಲೇ ಅವರಿಂದ ಎಷ್ಟು ಜನ ಆಶೀರ್ವಾದ ಹೊಂದಿರುತ್ತಾರೆ ಎಂಬದಾಗಿ ಪತ್ರ ಕಳುಹಿಸಲು ಜಾಹೀರಾತು ನೀಡಿದ್ದರು. ಸುಮಾರು ಐದು ಲಕ್ಷ ಜನ ತಾವು ಡಿ. ಎಲ್. ಮೂಡಿ ಬೋಧಕರ ಸಂದೇಶದ ಮೂಲಕ ಆಶೀರ್ವದಿಸಲ್ಪಟ್ಟದ್ದಾಗಿಯೂ, ರಕ್ಷಿಸಲ್ಪಟ್ಟದ್ದಾಗಿಯೂ ಪತ್ರ ಬರೆದಿದ್ದರು.
ಸತ್ಯವೇದದಲ್ಲಿ, ಇಸ್ರಾಯೇಲ್ ಜನರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಲು ದೇವರು ಮೋಶೆಯನ್ನು ಕರೆದಾಗ, ನಾನು ಮಂದನಾಲಿಗೆಯವನು, ವಾಕ್ಚಾತುರ್ಯವಿಲ್ಲದವನು ಎಂದು ಕಾರಣಗಳನ್ನು ಹೇಳಿದರೂ, ಬಾಯನ್ನು ಉಂಟುಮಾಡಿದವನು ನಾನಲ್ಲವೇ ಎಂದು ದೇವರು ಅವನನ್ನು ಪ್ರೋತ್ಸಾಹಿಸಿ ಉಪಯೋಗಿಸಿದರು. ಅಂತೆಯೇ ಯೆರೆಮಿಯನು ಸಹ ಹೇಳುತ್ತಾರೆ, ನನಗೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ. ನಾನು ಚಿಕ್ಕವನು ಎನ್ನುತ್ತಾರೆ. ಅದಕ್ಕೆ ದೇವರು ನೀಡುವ ಉತ್ತರ ಏನು ಗೊತ್ತಾ? ನಾನು ಚಿಕ್ಕವನೆಂದು ಹೇಳಬೇಡ. ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗು ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡು. ಅವರಿಗೆ ಭಯಪಡಬೇಡ ಎಂದು ಹೇಳಿ ಕರ್ತನು ಕೈಚಾಚಿ ತನ್ನ ಬಾಯಿಯನ್ನು ಮುಟ್ಟಿ ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ ಎಂದರು.
ಇದನ್ನು ಓದುತ್ತಿರುವ ಪ್ರೀತಿಯ ಸಹೋದರಿಯೇ ಮತ್ತು ಸಹೋದರನೇ! ನೀವೂ ಕೂಡ ನಿಮ್ಮ ಕುಟುಂಬದ ಬಡತನ ಮತ್ತು ಕೊರತೆಗಳ ಬಗ್ಗೆ ಯೋಚಿಸುತ್ತಿರಬಹುದು, ನನ್ನ ಸಂಸಾರವನ್ನು ನೋಡಿಕೊಳ್ಳಬೇಕೆಂಬ ಜವಾಬ್ದಾರಿ, ನನಗೆ ಶಿಕ್ಷಣದ ಕೊರತೆ, ಕೌಶಲ್ಯವಿಲ್ಲ, ಮಾತನಾಡಲು ಬರುವುದಿಲ್ಲ, ನಾನೇನು ಮಾಡಲಿ ಎಂದು ಯೋಚಿಸುತ್ತಿರಬಹುದು. ಮೋಶೆ ಮತ್ತು ಯೆರೆಮೀಯನನ್ನು ಉಪಯೋಗಿಸಿದ ದೇವರು ನಿನ್ನನ್ನೂ ಉಪಯೋಗಿಸಲು ಸಿದ್ಧವಾಗಿದ್ದಾರೆ. ನೀವು ಆತನನ್ನು ನಂಬಿ ಆತನ ಕೈಗೆ ನಿಮ್ಮನ್ನು ಒಪ್ಪಿಸಿಕೊಟ್ಟಾಗ ಮೋಶೆಯಂತಹ ಲಕ್ಷಾಂತರ ಜನರಿಗೆ ಆತನು ನಿಮ್ಮನ್ನು ಆಶೀರ್ವಾದವಾಗಿ ಉಪಯೋಗಿಸಲು ಸಾಧ್ಯ. ಅವರು ಆಶೀರ್ವದಿಸಲು ಮತ್ತು ಉಪಯೋಗಿಸಲು ಜನರನ್ನು ಹುಡುಕುತ್ತಿದ್ದಾರೆ. ನೀವು ಆಶೀರ್ವಾದ ಹೊಂದಲು ಮತ್ತು ದೇವರಿಗಾಗಿ ಉಪಯೋಗವಾಗಲು ಸಿದ್ಧರಿದ್ದೀರಾ?
- Bro. ಅಳಗರಸ್ವಾಮಿ
ಪ್ರಾರ್ಥನಾ ಅಂಶ:
ಒಂದು ಹಳ್ಳಿಗೆ ಸುವಾರ್ತೆ ಸಾರಲು ಸಾವಿರ ರೂಪಾಯಿಗಳನ್ನು ನೀಡುವ ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482