Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 04.11.2024 (Gospel Special)

ಧೈನಂದಿನ ಧ್ಯಾನ(Kannada) – 04.11.2024 (Gospel Special)

 

ಗುರಿಯ ಕಡೆಗೆ 

 

"…ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ" - ಫಿಲಿಪ್ಪಿ 3:14

 

ಪ್ರಪಂಚದ ಜನರು ಸಾಧನೆಗಳನ್ನು ರಚಿಸಲು ಜೀವನದಲ್ಲಿ ಸಾಕಷ್ಟು ಹೋರಾಟದ ಮೂಲಕ ಹೋಗುತ್ತಾರೆ. ಅದಕ್ಕಾಗಿ ಅವರು ಯಾವುದೇ ರೀತಿಯ ನೋವು ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ. ದಾಖಲೆ ಸೃಷ್ಟಿಸುವುದೇ ಅವರ ಗುರಿ! ಕೆಲವರು ಯಶಸ್ವಿಯಾಗುತ್ತಾರೆ. ಹಲವರು ವಿಫಲರಾಗಿದ್ದಾರೆ. ಆಧ್ಯಾತ್ಮಿಕ ಜೀವನದಲ್ಲಿ ಯಶಸ್ಸಿಯಾಗಲು ಅಪೊಸ್ತಲನಾದ ಪೌಲನು ನಮಗೆ ಉದಾಹರಣೆಯಾಗಿದ್ದಾರೆ. ಅವರು ಸುವಾರ್ತೆಯನ್ನು ಬೋಧಿಸಿ, ಅದರ ಪ್ರತಿಫಲವನ್ನು ಪರಲೋಕದಲ್ಲಿ ಪಡೆಯುವುದನ್ನೇ ಲಕ್ಷ್ಯವಾಗಿ ಇಟ್ಟುಕೊಂಡು ಕಾರ್ಯಮಾಡಿದರು. ಅದಕ್ಕಾಗಿ ಅವರು ಕಳಕೊಂಡದ್ದನ್ನು ಮತ್ತು ಸಂಕಟಗಳನ್ನು ಅತ್ಯಲ್ಪವೆಂದು ಪರಿಗಣಿಸಿದರು. "ತೆಂಬೋದ್ಶೆರಿ" ಈ 14 ವರ್ಷದ ಹುಡುಗ, 2000 ರಲ್ಲಿ ಹಿಮಾಲಯದ ಮೌಂಟ್ ಎವರೆಸ್ಟ್ ಅನ್ನು ತಲುಪಲು ಪ್ರಯತ್ನಿಸುತ್ತಿದ್ದಾಗ, ಹಿಮ ಪರ್ವತದ ಮೇಲೆ ಜಾರಿಬಿದ್ದು ಎರಡೂ ಕೈಗಳ ಒಟ್ಟು ಐದು ಬೆರಳುಗಳನ್ನು ಕಳೆದುಕೊಂಡನು. ಆದಾಗ್ಯೂ, ತನ್ನ ಕನಸನ್ನು ನನಸಾಗಿಸುವವರೆಗೂ, ಅವರು ಅನೇಕ ಬಾರಿ ಪ್ರಯತ್ನಿಸಿದರು ಮತ್ತು ಟಿಬೆಟಿಯನ್ ಗಡಿಯ ಮೂಲಕ ಮೌಂಟ್ ಎವರೆಸ್ಟ್ ಅನ್ನು ಏರಿದರು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ "ಶಿಖರವನ್ನು ತಲುಪಿದ ಹುಡುಗ" ಎಂಬ ಹೆಸರನ್ನು ಪಡೆದರು. ನಾವು ಸಹ ಸಾಧನೆಗಾರರು ಎಂಬ ಪ್ರಶಸ್ತಿಯನ್ನು ನಿತ್ಯತ್ವದಲ್ಲಿ ಪಡೆಯಲು, ಈ ಲೌಕಿಕ ಜೀವನದಲ್ಲಿ ಕೆಲವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಸಂಭವಿಸಬಹುದು.

     

ಪ್ರಕಟನೆಯ ಗ್ರಂಥದಲ್ಲಿ ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ "ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನ ಮಧ್ಯದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು ಎಂದು ಹೇಳುತ್ತಾರೆ." (2:7) ಬಚ್ಚಿಟ್ಟಿರುವ ಮನ್ನವನ್ನು ತಿನ್ನುವದಕ್ಕೆ ನಾನು ಕೊಡು ವೆನು ಎನ್ನುತ್ತಾರೆ. (2:17) ಉದಯನಕ್ಷತ್ರವನ್ನು ಕೊಡುವೆನು ಎನ್ನುತ್ತಾರೆ. (2:28) ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ಯೇಸುವೊಂದಿಗೆ ನಡೆಯುವ ಭಾಗ್ಯವು ಸಿಗುತ್ತದೆ ಎನ್ನುತ್ತಾರೆ. (3:4) ನಿನ್ನ ಕಿರೀಟವನ್ನು ಯಾರೂ ಅಪಹರಿಸದಂತೆ ನಿನಗಿರುವದನ್ನು ಬಿಗಿಯಾಗಿ ಹಿಡಿದುಕೊಂಡಿರು ಎನ್ನುತ್ತಾರೆ. (3:11) ನಾವು ಸತತ ಪ್ರಯತ್ನದಿಂದ ಕಾರ್ಯಮಾಡುತ್ತಿದ್ದರೆ ಮಾತ್ರವೇ ದೇವರು ನಮಗಾಗಿ ಇಟ್ಟಿರುವುದನ್ನು ಪಡೆದುಕೊಳ್ಳಲು ಸಾಧ್ಯ.

 

ನಮ್ಮ ಗುರಿ ಏನು? ಅದು ಇಹಲೋಕಕ್ಕೆ ಸಂಬಂಧಿಸಿದ್ದಲ್ಲ, ಪರಲೋಕಕ್ಕೆ ಸಂಬಂಧಿಸಿದ್ದು. ಪರಲೋಕದಲ್ಲಿ ಆತ್ಮಗಳನ್ನು ಅವರ ಬಳಿ ಸೇರಿಸುವುದು! ಈ ಸುವಾರ್ತಾ ಸೇವೆಗಾಗಿ ನಾವು ಪಾಡುಗಳನ್ನು, ನಿಂದೆಗಳನ್ನು ಅನುಭವಿಸಲು ಸಿದ್ಧರಾಗಿರೋಣ. ಜಯಿಸುವವನಿಗೆ ದೇವರು ಇಟ್ಟಿರುವ ಭಾಗ್ಯವನ್ನು ಪಡೆದುಕೊಳ್ಳೋಣ. ಅದಕ್ಕೆ ನೇರವಾಗಿ ಅನೇಕರನ್ನು ಮುನ್ನಡೆಸೋಣ. ಮರಿಯಳು ತನ್ನಿಂದ ತೆಗೆಯಲ್ಪಡದ ಆ ಒಳ್ಳೇಭಾಗವನ್ನೇ ಆರಿಸಿಕೊಂಡಂತೆ ನಾವು ಸಹ, ಅವರ ಪಾದದ ಬಳಿ ಕುಳಿತು ಪ್ರತಿದಿನ ಆತನ ಆತ್ಮದ ಫಲವನ್ನು ಸ್ವೀಕರಿಸಿ, ಅವರು ನಮಗೆ ನೇಮಿಸಿರುವ ಸುವಾರ್ತೆ ಸೇವೆಯ ಓಟದಲ್ಲಿ ತಾಳ್ಮೆಯಿಂದ ಓಡಿ ಗೆಲ್ಲಲು ಪ್ರಯತ್ನಿಸೋಣ. ನಮ್ಮ ಕ್ರಿಯೆಗೆ ತಕ್ಕ ಫಲವನ್ನು ಕರ್ತನಿಂದ ಪಡೆಯೋಣ.

- Bro. ಸೆಲ್ವರಾಜ್

 

ಪ್ರಾರ್ಥನಾ ಅಂಶ:

25,000 ಗ್ರಾಮಗಳನ್ನು ಭೇಟಿ ನೀಡುವ ಯೋಜನೆಯಲ್ಲಿ ಈ ತಿಂಗಳು ಭೇಟಿ ನೀಡುವ ಗ್ರಾಮಗಳಿಗಾಗಿ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)