ಧೈನಂದಿನ ಧ್ಯಾನ(Kannada) – 05.11.2024 (Gospel Special)
ಧೈನಂದಿನ ಧ್ಯಾನ(Kannada) – 05.11.2024 (Gospel Special)
ಹೇಗೆ ನಂಬುತ್ತಾರೆ?
"...ಆತನ ವಿಷಯ ವಾಗಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?" - ರೋಮಾ 10:14
ಒಬ್ಬ ಕ್ರೈಸ್ತನು ವಕೀಲರ ಕೋಣೆಗೆ ಪ್ರವೇಶಿಸಿದನು. ತಾನು ಒಳಗೆ ಹೋದ ಉದ್ದೇಶವನ್ನು ಮುಗಿಸಿಬಿಟ್ಟು ಹೊರಗೆ ಹೋಗುವ ಮೊದಲು ಅವನ ಮನಸ್ಸಿನಲ್ಲಿ ಬಹಳ ದಿನಗಳಿಂದ ಇದ್ದ ಪ್ರಶ್ನೆಯನ್ನು ಅವರ ಬಳಿ ಕೇಳಿದನು. ಯಾವ ಪ್ರಶ್ನೆ ಅದು? ಅಯ್ಯಾ, ನೀವು ಯಾಕೆ ಕ್ರೈಸ್ತರಾಗಿಲ್ಲ? ಈ ಪ್ರಶ್ನೆಯನ್ನು ಸ್ವಲ್ಪವೂ ನಿರೀಕ್ಷಿಸದ ವಕೀಲರು ಗಾಬರಿಯಿಂದ ನಿಂತರು. ಸ್ವಲ್ಪ ಸುಧಾರಿಸಿಕೊಂಡು, ತನ್ನ ತಲೆಯನ್ನು ಬೊಗ್ಗಿಸಿದವರಾಗಿ, ಕುಡುಕರು ಪರಲೋಕ ರಾಜ್ಯಕ್ಕೆ ಅರ್ಹತೆ ಇಲ್ಲದವರು ಎಂದು ಬೈಬಲ್ ನಲ್ಲಿ ಇದೆಯಲ್ಲವೇ? ಅದೇ ನನ್ನ ಬಲಹೀನತೆ. ಹಾಗಾಗಿ ನಾನು ಕ್ರೈಸ್ತನಾಗಲಿಲ್ಲ ಎಂದು ಉತ್ತರಿಸಿದರು. ವಕೀಲರ ಬಳಿ ಬಂದವರು ಪುನಃ ಅದೇ ಪ್ರಶ್ನೆಯನ್ನೇ ಕೇಳಿದರು. ಅವರು ಹೇಳಿದರು, "ಈ ಪ್ರಶ್ನೆಯನ್ನು ಯಾರೂ ಇದುವರೆಗೂ ನನ್ನನ್ನು ಕೇಳಲಿಲ್ಲ, ನಾನು ಹೇಗೆ ಒಂದು ಕ್ರೈಸ್ತನಾಗಲು ಸಾಧ್ಯ? ನನಗೆ ಹೇಳಿಕೊಡಿ" ಎಂದರು.
ಆಗ ಪ್ರಶ್ನೆ ಕೇಳಿದವರು ವಕೀಲನಿಗೆ ಸತ್ಯವೇದದ ಸತ್ಯವು ಅರ್ಥವಾಗವಂತೆ ವಿವರಿಸಿದರು. ಈ ಚಿಕ್ಕ ಪ್ರಾರ್ಥನೆಯನ್ನು ಮಾಡಿ "ಕರ್ತನೇ, ನನ್ನ ಬಲಹೀನತೆಯನ್ನು ನಾನು ತಿಳಿದಿದ್ದೇನೆ. ಅದನ್ನು ನನ್ನಿಂದ ತೆಗೆದುಹಾಕಿ" ಎಂದರು. ಅದ್ಭುತವಾಗಿ ದೇವರು ಕುಡಿತದಿಂದ ಮುಕ್ತಿ ಕೊಟ್ಟರು.
ಪ್ರೀತಿಯ ದೇವರ ಮಕ್ಕಳೇ! ನಮ್ಮ ದೇವರು ಎಲ್ಲಾ ರೀತಿಯ ಪಾಪಗಳನ್ನು ಕ್ಷಮಿಸುತ್ತಾರೆ. ದೇವರು ಕ್ಷಮಿಸದೇ ಇರುವ ಪಾಪ ಯಾವುದೂ ಇಲ್ಲ. ಇಂದು ಅನೇಕ ಜನರು ನನ್ನ ಪಾಪ ದೊಡ್ಡದು. ಅದಕ್ಕೆ ಕ್ಷಮಾಪಣೆಯೇ ಇಲ್ಲ ಎಂದು ಭಾವಿಸುತ್ತಾರೆ. ಇನ್ನು ಕೆಲವರು ಈ ಪಾಪವನ್ನು ನನ್ನಿಂದ ಬಿಡಲೂ ಸಾಧ್ಯವಿಲ್ಲ, ಮರೆಯಲೂ ಸಾಧ್ಯವಿಲ್ಲ ಎಂಬ ಪಾಪಪ್ರಜ್ಞೆಯಿಂದ ಬದುಕುತ್ತಿದ್ದಾರೆ. ಆದರೆ ಪ್ರವಾದಿಯಾದ ಯೆಶಾಯನು ತನ್ನ ಪುಸ್ತಕದಲ್ಲಿ ". . . . ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು" (1:18) ಎಂದು ಬರೆದಿದ್ದಾರೆ. ನೀವು ಮನಃಪೂರ್ವಕವಾಗಿ ಕಿವಿಗೊಟ್ಟರೆ, ಖಂಡಿತವಾಗಿಯೂ ಪಾಪಕ್ಷಮಾಪಣೆ ದೊರೆಯುತ್ತದೆ. ನಿಮ್ಮ ಪಾಪಗಳನ್ನು ಕ್ಷಮಿಸುವ ಒಬ್ಬ ಯೇಸುಕ್ರಿಸ್ತನು ಇದ್ದಾರೆ ಎಂದು ನಾವು ಅವರಿಗೆ ತಿಳಿಸಬೇಕು. ನೀವು ಅವರಿಗೆ ಹೇಳದಿದ್ದರೆ ಅವರಿಗೆ ಹೇಗೆ ತಿಳಿಯುತ್ತದೆ?
ಇಂದಿಗೂ ಪಾಪದಲ್ಲಿ ಸಿಲುಕಿ ಅದರಿಂದ ಮುಕ್ತಿ ಪಡೆಯಲಾಗದ ಅದೆಷ್ಟೋ ಮಂದಿ ಇದ್ದಾರೆ. ಅವರಿಗೆ ಯೇಸುಕ್ರಿಸ್ತನು ಬಿಡಿಸಲು ಶಕ್ತನು ಎಂದು ಒತ್ತಿ ಹೇಳಲು ಜನರು ಬೇಕು. ಬೋಧಕರಿಲ್ಲದಿದ್ದರೆ ಅವರು ಹೇಗೆ ಕೇಳುತ್ತಾರೆ? ನಾವೇಕೆ ಸುವಾರ್ತಾಬೋಧಕರಾಗಬಾರದು? ನಾವು ನಮ್ಮ ಕರ್ತವ್ಯವನ್ನು ಮಾಡೋಣ, ದೇವರು ಅವರ ಕರ್ತವ್ಯವನ್ನು ಮಾಡುತ್ತಾರೆ. ಆಮೆನ್! ಹಲ್ಲೇಲೂಯಾ!
- ಇಮ್ಮಾನುವೇಲ್
ಪ್ರಾರ್ಥನಾ ಅಂಶ:
25000 ಹಳ್ಳಿಗಳಲ್ಲಿ ಸುವಾರ್ತೆ ಸಾರುವ ಯೋಜನೆಯಲ್ಲಿ ಹಸ್ತಪ್ರತಿಗಳು ಮತ್ತು ಸುವಾರ್ತೆ ಪುಸ್ತಕಗಳನ್ನು ಸ್ವೀಕರಿಸಿದ ಜನರ ಹೃದಯಗಳಲ್ಲಿ ದೇವರು ಕಾರ್ಯ ಮಾಡಲಿ ಎಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482