ಧೈನಂದಿನ ಧ್ಯಾನ(Kannada) – 29.03.2021
ಧೈನಂದಿನ ಧ್ಯಾನ(Kannada) – 29.03.2021
ತಾಯಂದಿರು ಅಗತ್ಯ
"...ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು" - 1ಕೊರಿಂಥ 4:15
ಕಬ್ಬಿಣದ ಗೋಡೆ ಎಂದು ಕರೆಯಲ್ಪಡುತ್ತಿರುವ ಕಮ್ಯುನಿಸ್ಟ್ ದೇಶಗಳಲ್ಲಿ ಒಂದಾದ ರುಮೇನಿಯಾ ದೇಶದಲ್ಲಿ ವಾಕ್ಯವನ್ನು ಸಾರಿದ್ದರಿಂದ ಅನೇಕ ಕಷ್ಟಗಳನ್ನು, ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ದೇವರಿಂದ ಬಲವಾಗಿ ಉಪಯೋಗಿಸಲ್ಪಟ್ಟ ಯೆಹೂದ್ಯ ಮನುಷ್ಯರೇ ರಿಚರ್ಡ್ ಉಂಬಿರಾನ್ಡ್. ಈತನ ರಕ್ಷಣೆಗೆ ಕಾರಣವಾಗಿದ್ದ ವ್ಯಕ್ತಿ ಒಬ್ಬ ಸಾಧಾರಣ ಬಡಗಿ (ಕಾರ್ಪೆಂಟರ್) . ಇವರು, ನಾನು ಒಬ್ಬ ಯೆಹೂದ್ಯನನ್ನು ಕ್ರಿಸ್ತನಲ್ಲಿ ನಡೆಸುತ್ತೇನೆ ಎಂದು ಆಸೆ ಇಟ್ಟುಕೊಂಡಿದ್ದರು. ಹೌದು, ಹಾಗೆಯೇ ಮಾಡಿ ಕೂಡ ಮುಗಿಸಿದರು. ರಿಚರ್ಡ್ ನನ್ನು ಅಂಗೀಕರಿಸಿ ತಾಯಿಯಂತೆ ಪ್ರೀತಿ ತೋರಿಸಿದರು. ಹೌದು, ಇದೇ ಅವರು ದೇವರಲ್ಲಿ ಬರಲು ಕಾರಣವಾಗಿತ್ತು. ಕ್ರಿಸ್ತನ ಪ್ರೀತಿಯನ್ನು ಈ ಸಾಧಾರಣ ಬಡಗಿಯ ಬಳಿಯಲ್ಲಿ ಕಂಡರು. ಈ ಪ್ರೀತಿಯೇ ನಾಸ್ತಿಕನಾದ ರಿಚರ್ಡ್ ಉಂಬಿರಾನ್ಡ್ ದೇವರ ಪ್ರೀತಿಯನ್ನು ಮತ್ತೊಬ್ಬರಿಗೆ ಹೇಳಲು ಬಲವಾದ ಅಸ್ಥಿರವಾರವಾಗಿತ್ತು.
ಹೌದು, ಪ್ರಿಯರೇ, ಮೋಶೆಯ ತಾಯಿ ಕೂಡ ಐಗುಪ್ತದೇಶದಲ್ಲಿ ಇಬ್ರಿಯರ ಗಂಡು ಮಕ್ಕಳೆಲ್ಲರೂ ಕೊಲ್ಲಲ್ಪಡಬೇಕೆಂಬ ಕಾನೂನು ಇದ್ದರೂ ತನ್ನ ಮಗುವನ್ನು ಬಚ್ಚಿಟ್ಟು ಮೂರು ತಿಂಗಳು ಕಾಪಾಡಿದಳು. ಅವಳು ತನ್ನನ್ನು ತನ್ನ ಕುಟುಂಬವನ್ನು ನಿರ್ಲಕ್ಷ್ಯವಾಗಿ ನೆನಸಲಿಲ್ಲ. ಮೂರು ತಿಂಗಳವರೆಗೂ ಅವನನ್ನು ಬಚ್ಚಿಟ್ಟಿದ್ಜಳು. ನಂತರ ಅವನು ಒಬ್ಬರ ಬಳಿ ಹೋಗಿ ಸೇರುವವರೆಗೂ ಅದನ್ನು ಗಮನಿಸಲು ತನ್ನ ಮಗಳನ್ನು ಕಳುಹಿಸಿದಳು. ಆ ಮಗುವನ್ನೇ ಮುಂದಿನ ದಿನಗಳಲ್ಲಿ ಇಸ್ರಾಯೇಲ್ಯರ ರಕ್ಷಕನಾಗಿ ಕರ್ತನು ಎಬ್ಬಿಸಿದರು. ಲಕ್ಷಾಂತರ ಜನರನ್ನು ನಡೆಸುವ ಬಲವಂತ ನಾದನು.
ನಾವು ಮೇಲ್ಕಂಡ ಸಂಭವಗಳಲ್ಲಿ ನೋಡಿದ ಇಬ್ಬರ ಹಿಂದೆಯೂ ಇದ್ದದ್ದು ಯಾವುದೋ ಒಂದು ತಾಯಿಯಂತ ಪ್ರೀತಿಯ ಕಾರ್ಯಗಳೇ. ಈ ದಿನವೂ ಕೂಡಾ ಇಂತಹ ತಾಯಂದಿರು ಅಗತ್ಯ. ಕ್ರಿಸ್ತನನ್ನು ಅರಿತಿರುವ ನಾವು ಕ್ರಿಸ್ತನನ್ನು ಅರಿಯದೆ ಇರುವವರಿಗೆ ತಾಯಂದಿರಾಗಿ ಬದಲಾಗೋಣ. ಸತ್ಯದೊಳಗೆ ಅವರನ್ನು ನಡೆಸೋಣ. ಕ್ರಿಸ್ತನು ಅವರಲ್ಲಿ ರೂಪಿಸಲ್ಪಡುವವರೆಗೂ ಪ್ರಸ ವೇದನೆಯನ್ನು ಪಡುವುದಕ್ಕೆ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳೋಣ. ಅಪೊಸ್ತಲನಾದ ಪೌಲನು ಇಂತಹ ಎಷ್ಟೋ ಜನರನ್ನು ಹೆತ್ತರು. ನಾವು ಒಂದು ಆತ್ಮೀಯ ತಾಯಿಯಾಗಿದ್ದು ಆತ್ಮೀಯ ಮಕ್ಕಳನ್ನು ಹೆರಬೇಕು. ಅವರು ಲೋಕವನ್ನು ತಲೆಕೆಳಗಾಗಿ ಮಾಡುತ್ತಾರೆ. ಅನೇಕರನ್ನು ನೀತಿ ಮಾರ್ಗದಲ್ಲಿ ನಡೆಸುವವರಾಗಿ ಮಾರ್ಪಡುತ್ತಾರೆ.
- Bro. ಅನೀಸ್ ರಾಜ
ಪ್ರಾರ್ಥನಾ ಅಂಶ:-
ಕತ್ತೆಗಳ ಗ್ರಂಥ ಎಂದು ಸೇವಕರಿಗಾಗಿ ಮುದ್ರಿಸಲ್ಪಡುತ್ತಿರುವ ಮಾಸಪತ್ರಿಕೆಯನ್ನು ಸಿದ್ದ ಮಾಡುತ್ತಿರುವ ಸೇವಕರನ್ನು ಕರ್ತನು ತನ್ನ ಬಲದಿಂದ ಉಪಯೋಗಿಸುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482