ಧೈನಂದಿನ ಧ್ಯಾನ(Kannada) – 28.03.2021
ಧೈನಂದಿನ ಧ್ಯಾನ(Kannada) – 28.03.2021
ನುಣುಪಾದ ಕಲ್ಲು ಮಾತನಾಡುತ್ತಿದೆ
"ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ" - 1 ಕೊರಿಂಥ 1:28
ಹಲೋ! ಪುಟಾಣಿಗಳೇ! ಸಂತೋಷವಾಗಿದ್ದೀರ? ಎಲ್ಲರೂ ಎಲ್ಲಿ ನೋಡುತ್ತಿದ್ದೀರ, ಕೆಳಗೆ ನೋಡಿರಿ ನಾನೇ ನುಣುಪಾದ ಕಲ್ಲು ಮಾತಾಡುತ್ತಿದ್ದೇನೆ. ಏನಪ್ಪಾ ಇದು ಈ ನುಣುಪಾದ ಕಲ್ಲು ನಮ್ಮ ಬಳಿ ಏನು ಮಾತಾಡುತ್ತದೆ ಎಂದು ನೆನೆಸುತ್ತಿದ್ದೀರ? ಸ್ವಲ್ಪ ಸಮಯ ನಾನು ಮಾತಾಡೋದನ್ನ ಕೇಳ್ತೀರಾ. ನಾನು ನದಿಗಳ ಬಳಿ ಇರುತ್ತೇನೆ. ನದಿಯ ನೀರಿನಲ್ಲಿ ಬಿದ್ದು ಹೊರಳಾಡಿ, ಹೊರಳಾಡಿ ಸುಂದರವಾಗಿ ನಯವಾಗಿ ಬದಲಾದೆನು ನಾನು ನದಿಯಬಳಿ ಬಿದ್ದಿರುತ್ತೇನೆ. ಅನೇಕರು ನನ್ನ ಮೇಲೆ ತುಳಿಯುತ್ತಾ ನಡೆದು ಹೋಗುತ್ತಾರೆ. ಹಲವರು ಕೈಗಳಲ್ಲಿ ನನ್ನನ್ನು ತೆಗೆದುಕೊಂಡು ಆಸೆಯಿಂದ ನೋಡಿ, ನದಿಯಲ್ಲಿ ಎತ್ತಿ ಬಿಸಾಟು ಬಿಡುತ್ತಾರೆ. ಇನ್ನು ಕೆಲವರು ನನ್ನನ್ನು ತೆಗೆದುಕೊಂಡುಹೋಗಿ ಅವರು ಬಯಸುವ ಹಕ್ಕಿಗಳು ಮತ್ತು ಹಣ್ಣುಗಳನ್ನು ಹೊಡೆಯಲು ಚೀಲದಲ್ಲಿ ಇಟ್ಟುಕೊಂಡು ಉಪಯೋಗಿಸುತ್ತಾರೆ. ಇಸ್ರಾಯೇಲ್ ಕುರುಬರು ಕೂಡಾ ತಮ್ಮ ಕೈ ಚೀಲಗಳಲ್ಲಿ ಯಾವಾಗಲೂ ನಮ್ಮನ್ನು, ಇಟ್ಟುಕೊಳ್ಳುತ್ತಿದ್ದರು. ಕುರಿಗಳನ್ನು ಮುಟ್ಟಲು ಬರುವ ಮೃಗಗಳನ್ನು ಓಡಿಸಲು ನಮ್ಮನ್ನು ಉಪಯೋಗಿಸುತ್ತಾರೆ. ಪುಟಾಣಿಗಳೇ ನುಣುಪಾದ ಕಲ್ಲು ಮಾತನಾಡುತ್ತಿರುವುದು ನಿಮಗೆ ಉತ್ಸಾಹವಾಗಿದೆಯಾ? ಸತತವಾಗಿ ಕೇಳಿರಿ. ನೀನು ಯಾಕೆ ಸುಮ್ಮನಿದ್ದೀಯ ಮಾತಾಡು ನುಣುಪಾದ ಕಲ್ಲೇ.. ಹಾಗೆ ಒಂದು ದಿನ ದಾವೀದನೆಂಬ ಕುರುಬನು ಬಂದು ನನ್ನೊಂದಿಗೆ ಸೇರಿ 4 ಕಲ್ಲುಗಳನ್ನು ತೆಗೆದುಕೊಂಡು ತನ್ನ ಚೀಲದಲ್ಲಿ ಹಾಕಿಕೊಂಡನು. ನಾವು ಯಾವುದಕ್ಕೆ ಉಪಯೋಗವಾಗಲಿದ್ದೇವೆ. ನದಿಯಬಳಿ ಬಿದ್ದಿರುತ್ತೇವೆ, ಈಗ ಒಂದು ಚಿಕ್ಕ ಚೀಲದೊಳಗೆ ಬಂದು ಬಿಟ್ಟೋ! ಎಂದು ಮಾತಾಡುತ್ತಿದ್ದೋ. ದಿಢೀರೆಂದು ಒಂದು ಶಬ್ದ ಕೇಳಿಸಿತು. ಭೂಮಿ ಕದಲಿದ ಹಾಗೆ ಇತ್ತು ಅವನ ನಡೆ. ದೊಡ್ಡ ರಾಕ್ಷಸ! ದಾವೀದನನ್ನು ನೋಡಿ ಬಾ ನಿನ್ನ ಮಾಂಸವನ್ನು ಪಕ್ಷಿಗಳಿಗೆ, ಮೃಗಗಳಿಗೆ ಕೊಡುತ್ತೇನೆ ಎಂದು ಗರ್ಜಿಸಿದನು. ಆಗಲೇ ಇದು ಯುದ್ಧ ಕಲಹ ಎಂಬುದು ತಿಳಿದುಕೊಂಡೆನು. ಈ ದಾವೀದನು ಚಿಕ್ಕ ಹುಡುಗನಾಗಿದ್ದಾನೆ! ಏನು ಮಾಡಲಿದ್ದಾನೆ ಎಂದು ನೋಡುತ್ತಿದ್ದೆವು. ನಾನು ಖಡ್ಗದೊಂದಿಗೂ, ಭರ್ಜಿಯೊಂದಿಗೂ ಅಲ್ಲ, ಇಸ್ರಾಯೇಲ್ಯರ ದೇವರಾದ ಸೈನ್ಯಗಳ ಕರ್ತನಾದ ಯೆಹೋವನ ನಾಮದಲ್ಲಿ ಬರುತ್ತೇನೆ ಎಂದು ಹೇಳಿ ತನ್ನ ಕೈ ಚೀಲದಲ್ಲಿ ಕೈಬಿಟ್ಟಾಗ ನನ್ನ friends ನಾಲ್ಕು ಜನರು ಜಾರಿ ಬಿದ್ದರು. ನಾನು ಮಾತ್ರ ಅವರ ಕೈಯೊಳಗೆ ಸಿಕ್ಕಿಕೊಂಡೆನು. ಹಾಕಿದ ನೋಡಿ ಏಟು "ಹಣೆಗೆ ಏಟು"ಅವನ ತಲೆಯಲ್ಲಿ ಹೋಗಿ ಸಿಕ್ಕಾಕಿಕೊಂಡೆನು, ಅವನು ಹಾಗೆಯೇ ಮುಂದಕ್ಕೆ ದಬ್ಬಾಕಿಕೊಂಡು ಬಿದ್ದನು. ದಾವೀದನು ಇಸ್ರಾಯೇಲ್ಯರ ಪರವಾಗಿ ಹೋದದ್ದರಿಂದ ಇಸ್ರಾಯೇಲ್ ಜನರು ಬಹಳ ಸಂತೋಷದಿಂದ ಇದ್ದರು. ನನಗೆ ಹೆಮ್ಮೆಯಾಗಿಯು, ಸಂತೋಷವಾಗಿಯು ಇತ್ತು. ಯಾವ ಆಯುಧವೂ ಇಲ್ಲದೆ ಸಾಧಾರಣ ನುಣುಪಾದ ಕಲ್ಲಾಗಿದ್ದ ನನ್ನ ಮೂಲಕ ದೇವರು ದೊಡ್ಡ ಜಯವನ್ನು ಕೊಟ್ಟರು. ಇದು ಕಥೆಯಲ್ಲ, ನಿಜವಾಗಿ ನಡೆದ ಘಟನೆ. ಸತ್ಯವೇದದಲ್ಲಿ 1 ಸಮುವೇಲ.17 ನೇ ಅಧ್ಯಾಯದಲ್ಲಿ ಬರೆಯಲ್ಪಟ್ಟಿದೆ.
ಪುಟಾಣಿಗಳೇ, ನಿಮ್ಮನ್ನು ನಿಮಗೆ ಬೇರೆ ಮಕ್ಕಳಂತೆ ಯಾವ ಜ್ಞಾನವೂ ಇಲ್ಲ, ನಿನಗೆ ಏನು ಗೊತ್ತಿಲ್ಲ ಎಂದು ಹೇಳಬಹುದು. ಆದರೆ ನೀನು ಸರ್ವಶಕ್ತನಾದ ದೇವರ ಕೈಗಳಲ್ಲಿ ನಿನ್ನನ್ನು ಕೊಟ್ಟರೆ ದಾವೀದನು ನುಣುಪಾದ ಕಲ್ಲಾಗಿದ್ದ ನನ್ನನ್ನು ಉಪಯೋಗಿಸಿದ ಹಾಗೆ, ದೇವರು ನಿನ್ನ ಹೆತ್ತವರು, ಸಂಬಂಧಿಕರು ಮತ್ತು ಅನೇಕರಿಗೆ ಸಂತೋಷವನ್ನುಂಟು ಮಾಡುವ ಮಗುವಾಗಿ ನಿನ್ನನ್ನು ಉಪಯೋಗಿಸುತ್ತಾರೆ. ಏನು ಪುಟಾಣಿಗಳೇ ಮಾಡುತ್ತೀರ ತಾನೇ! Very good
- Mrs. ಅನ್ಬು ಜ್ಯೋತಿ ಸ್ಟಾಲಿನ್.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482