ಧೈನಂದಿನ ಧ್ಯಾನ(Kannada) – 02.03.2021
ಧೈನಂದಿನ ಧ್ಯಾನ(Kannada) – 02.03.2021
ದೇವರು ಅವಶ್ಯಕತೆ
"ಯೇಸು... ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು” - ಅಪೊಸ್ತಲ 6:5
ಕಳೆದ 2020 ನೇ ವರ್ಷದಲ್ಲಿ ಕೊರೋನ ಏರ್ಪಡಿಸಿದ ನೀತಿ ಇಕ್ಕಟ್ಟು ಹೇಳಲು ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಬಹು ದೊಡ್ಡ ಹಣದ ಅವಶ್ಯಕತೆಯು ಏರ್ಪಟ್ಟಿತು. ಒಂದೊಂದು ತರಗತಿಯವರು ತಮ್ಮಿಂದ ಸಾಧ್ಯವಾದ ಧನ ಸಹಾಯವನ್ನು ಸರ್ಕಾರಕ್ಕೆ ನೀಡಿದರು. ದೇಶದ ಈ ಅವಶ್ಯಕತೆಯನ್ನು ಮಧ್ಯಪ್ರದೇಶಕ್ಕೆ ಸೇರಿದ ಇಬ್ಬರು ಚಿಕ್ಕ ಮಕ್ಕಳು ಗ್ರಹಿಸಿದರು. ಬಹಳ ಹಿಂದುಳಿದ, ಸರಿಯಾದ ಸೌಲಭ್ಯಗಳಿಲ್ಲದ ಗ್ರಾಮಕ್ಕೆ ಸೇರಿದ ಇಬ್ಬರು ತಮ್ಮ ಹುಂಡಿಯಲ್ಲಿ ಸೇರಿಸಿಟ್ಟಿದ್ದ ಹಣವನ್ನು ಎಣಿಸಿಯೂ ನೋಡದೆ ರಾಜ್ಯದ ಪೊಲೀಸ್ ಅಧಿಕಾರಿಗಳ ಬಳಿ ಕೊಟ್ಟರು. ಈ ಹಣವನ್ನು ಭದ್ರವಾಗಿ ಕೇಂದ್ರ ಸರ್ಕಾರಕ್ಕೆ ಆ ಅಧಿಕಾರಿ ಒಪ್ಪಿಸಿದರು. ರಾಜ್ಯ ನಿರ್ವಹಣೆ, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಹೀಗೆ ಎಲ್ಲರೂ ಕೂಡ ಆ ಚಿಕ್ಕಮಕ್ಕಳನ್ನು ಹೊಗಳಿದರು.
ಕರ್ತನಾದ ಯೇಸು ಕ್ರಿಸ್ತನು ಸರ್ವಶಕ್ತನಾದ ದೇವರು, ಆದರೆ ಜನರು ತಿನ್ನುವುದಕ್ಕೆ ರೊಟ್ಟಿಯನ್ನು ಎಲ್ಲಿಂದ ಕೊಂಡುತರೋಣ ಎಂದು ಕೇಳುತ್ತಿದ್ದಾರೆ. ಯೋಹಾನ 6 ನೇ ಅಧ್ಯಾಯದಲ್ಲಿ ಈ ಕಾರ್ಯವನ್ನು ನಾವು ಓದುತ್ತೇವೆ. ಇದುವೇ ದೇವರ ಅಂತರಂಗ, ದೇವರ ಅವಶ್ಯಕತೆ. ಇದನ್ನು ಗಮನಿಸಿದ ಹೆಸರು ಹೇಳಲ್ಪಡದ ಚಿಕ್ಕ ಹುಡುಗನೊಬ್ಬ ತನ್ನ ಕೈಯಲ್ಲಿದ್ದ ಜವೆಗೋಧಿಯ ರೊಟ್ಟಿಗಳನ್ನು, 2 ಮೀನುಗಳನ್ನು ಸ್ವಲ್ಪವೂ ಯೋಚಿಸದೆ ಎತ್ತಿ ಕೊಟ್ಟುಬಿಟ್ಟನು. ಯೇಸುಕ್ರಿಸ್ತನು ಆ ರೊಟ್ಟಿಗಳನ್ನು, ಮೀನುಗಳನ್ನು ಹೆಚ್ಚುಕಡಿಮೆ ಐದು ಸಾವಿರ ಜನರಿಗೆ ಕೊಟ್ಟರು. ಇನ್ನೂ ಮಿಕ್ಕ ತುಂಡುಗಳನ್ನು ಸೇರಿಸಿಡಿರಿ ಎಂದು ಹೇಳಿದರು. ಒಂದೂ ಕೂಡ ಹಾಳಾಗಬಾರದೆಂದು ಮಿಕ್ಕ ತುಂಡುಗಳನ್ನು 12 ಬುಟ್ಟಿಗಳಲ್ಲಿ ತುಂಬಿದರು.
ಇದನ್ನು ಓದುತ್ತಿರುವ ಸ್ನೇಹಿತರೇ! ಈ ದಿನಗಳಲ್ಲಿ ದೇವರಿಗೆ ಅವಶ್ಯಕತೆ ಏನೂ ಇಲ್ಲ ಎಂದು ನೆನೆಸಿಬಿಡಬೇಡಿರಿ. ಕರ್ತನಾದ ಯೇಸು ಬಲಗೈಗೂ ಎಡಗೈಗೂ ವ್ಯತ್ಯಾಸ ಗೊತ್ತಿಲ್ಲದ ಜನ ರಕ್ಷಣೆಗಾಗಿ ಪರಿತಪಿಸುತ್ತಿದ್ದಾರೆ. ಏಕೆಂದರೆ ನಾನು ಉಂಟುಮಾಡಿದ ನನ್ನ ಜನರು ನನ್ನನ್ನು ತಿಳಿಯದೆ ಎಲ್ಲೋ ಅಲೆದಾಡುತ್ತಿದ್ದಾರೆಯೇ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಈ ಲೋಕದ ಜನರು ಬಿಡುಗಡೆ ಹೊಂದಬೇಕು, ಪರಲೋಕ ರಾಜ್ಯಕ್ಕೆ ಅರ್ಹತೆಯುಳ್ಳವರಾಗಿ ಜೀವಿಸಬೇಕು. ಇವುಗಳೇ ದೇವರ ಅವಶ್ಯಕತೆಗಳು! ಇದನ್ನು ಪೂರೈಸುವುದಕ್ಕೆ ನಾವು ಚಿಕ್ಕ ಮಕ್ಕಳಂತೆ ನಮ್ಮ ಬಳಿ ಇರುವ ಜ್ಞಾನ, ವಿದ್ಯೆ, ವಿವೇಕ, ಹಣ ಇಷ್ಟೇ ಯಾಕೆ ನಮ್ಮನ್ನೇ ಕೊಡೋಣವಾ? ದೇವರು ನಮ್ಮಿಂದಲೇ ಈ ದೇಶವನ್ನು, ಲೋಕವನ್ನು ಆಶೀರ್ವದಿಸಲು ಬಯಸುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಂಡವರಾಗಿ ಬೂಟಾಟಿಕೆ ಸುಳ್ಳು ಇಲ್ಲದ ಮಗುವಿನ ಹಾಗೆ ನಮ್ಮನ್ನೇ ಸಮರ್ಪಿಸಿಕೊಳ್ಳೋಣ. ದೇವರ ಅವಶ್ಯಕತೆಯನ್ನು ಯೋಚಿಸೋಣ.
- M. ಶಕ್ತಿ ಶಂಕರ್ ರಾಜನ್
ಪ್ರಾರ್ಥನಾ ಅಂಶ:-
ಇಂದು ಗೆತ್ಸೆಮನೆ ಕ್ಯಾಂಪಸ್ ನಲ್ಲಿ ನಡೆಯುವಂತಹ ಉಪವಾಸ ಬಿಡುಗಡೆ ಕೂಟದಲ್ಲಿ ಭಾಗವಹಿಸುವ ವ್ಯಕ್ತಿಗಳು ಬಿಡುಗಡೆ ಹೊಂದುವಂತೆ. ಬಿಡಿಸುವವರಾಗಿ ಮಾರ್ಪಡುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482