Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 28.01.2021

ಧೈನಂದಿನ ಧ್ಯಾನ(Kannada) – 28.01.2021

ನೀವಿಲ್ಲದಿದ್ದರೆ

"ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ" - 1 ಪೂರ್ವಕಾಲ 29:12

ಬೆಂಕಿ ಹೊತ್ತಿಸಿದ ಒಂದು ಸೌದೆಯು ಪ್ರಾರಂಭದಲ್ಲಿ ಚೆನ್ನಾಗಿ ಉರಿಯುತ್ತದೆ. ಸಮಯ ಕಳೆಯುತ್ತಾ ಕಳೆಯುತ್ತಾ ಬೆಂಕಿಯು ಆರಿಹೋಗುವ ಸಮಯದಲ್ಲಿ ಒಬ್ಬರು ಬಂದು ಊದುವಾಗ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತದೆ. ಇನ್ನು ಕೆಲವು ಸಮಯದಲ್ಲಿ ಬೆಂಕಿ ಆರಿಹೋಗಿ ಬೆಂಕಿ ಕೆಂಡವಾಗಿ ಹಾಗೆ ಬೂದಿಯಾಗಿ ಮಾರ್ಪಡುತ್ತದೆ. ಇದರಂತೆಯೇ ಒಬ್ಬರ ಆತ್ಮೀಕ ಜೀವನವು ಬೆಂಕಿಯ ಹಾಗೆ ಪ್ರಾರಂಭವಾಗುತ್ತದೆ. ಕಾಲ ಕಳೆದಂತೆ ಪ್ರಾರ್ಥನೆ ಇಲ್ಲದಿರುವುದು, ದೇವರ ಮಾತುಗಳನ್ನು ನಿರ್ಲಕ್ಷ ಮಾಡುವುದು, ಅವಿಧೇಯತೆ, ತಿಳಿದು ತಪ್ಪು ಮಾಡುವುದು ಇವೆಲ್ಲಾ ಸೇರಿ ಆತ್ಮೀಯ ಜೀವನವು ಆರಿ ಹೋಗುವ ಸ್ಥಿತಿಗೆ ಕೊಂಡುಹೋಗುತ್ತದೆ. ಇದುವೇ ಹಿಂಜಾರಿಕೆ. ಹೀಗೆ ಹಿಂಜಾರಿಹೋದ ಒಬ್ಬರಿಂದ ದೇವರು ಯೋಜನೆಯು ತಡೆಯಾದರೆ ಅವರಿಗೆ ಉತ್ತರ ಕಿರಿಯರನ್ನು ಉಪಯೋಗಿಸಲು ದೇವರು ಎಬ್ಬಿಸಿದ್ದನ್ನು ಸತ್ಯವೇದದಲ್ಲಿ ನೋಡುತ್ತೇವೆ.

ಏಲಿಯ  ಯಾಜಕ ಸೇವೆಯು ಬೆಂಕಿ ಆರಿಹೋದಂತಿತ್ತು. ಅವರ ಇಬ್ಬರು ಮಕ್ಕಳ ದುರ್ಮಾರ್ಗವನ್ನು ಅವರು ಖಂಡಿಸಲಿಲ್ಲ. ಅನ್ನಳ ಕಣ್ಣೀರನ್ನು ತಪ್ಪಾಗಿ ಕಂಡಂತಹ ಪರಿಸ್ಥಿತಿ ದೇವರು ಮಾತಾಡುವ ಮಾತುಗಳನ್ನು ಕೇಳುವ ಹೃದಯ ಇಲ್ಲದಿರುವುದರಿಂದಲೋ ಏನೋ ದೇವರು ಚಿಕ್ಕವನಾದ ಸಮುವೇಲನ ಬಳಿ ತನ್ನ ಭಾರವನ್ನು ಹಂಚಿಕೊಂಡರು. ಇಸ್ರಾಯೇಲ್ಯರ ಮೊದಲ ಅರಸನಾಗಿ ನೇಮಿಸಲ್ಪಟ್ಟ ಸೌಲನು ದೇವರ ಮಾತಿಗೆ ವಿಧೇಯನಾಗದೆ ಹೋದದ್ದರಿಂದ ಆ ಸ್ಥಳಕ್ಕೆ ಯೌವ್ವನಸ್ಥನಾದ ದಾವೀದನನ್ನು ಕರೆತರುತ್ತಾರೆ. ದೇವರು ದಾವೀದನನ್ನು ಉಪಯೋಗಿಸಲು ಪ್ರಾರಂಭಿಸಿದ ಕೂಡಲೇ ಸೌಲನ ಜೀವನವು ಕಹಿಯಾಯಿತು.

ದೇವರ ಸೇವೆಯನ್ನು ಮಾಡುತ್ತಿರುವ ಪ್ರಿಯರೇ! ನಿಮ್ಮ ಸ್ಥಾನವನ್ನು ನೀವು ನಿರ್ಲಕ್ಷ್ಯ ಮಾಡುವಾಗ, ಅದೇ ಸ್ಥಳದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಇನ್ನೂ ಹೇಳಬೇಕಾದರೆ ಬಹಳ ಚಿಕ್ಕ ವಯಸ್ಸುಳ್ಳವರನ್ನು ಕೂಡ ಎಬ್ಬಿಸಲು ಬಲವುಳ್ಳವರು. ಹೌದು, ದೇವರ ಭಾರವನ್ನು ಹೊತ್ತುಕೊಳ್ಳದವನು ದುಃಖವನ್ನೇ ಹೊತ್ತುಕೊಳ್ಳುತ್ತಾನೆ. ಆತ್ಮ ಗಳಿಗಾಗಿ ಭಾರವಿಲ್ಲದೆ ನಾವು ಜೀವಿಸುತ್ತಿರುವುದಾದರೆ, ಕೊನೆಗೆ ನಮಗಾಗಿಯೇ ಭಾರ ಪಡಬೇಕಾಗಿ ಬಿಡುತ್ತದೆ. ನಮಗೆ ದೇವರು ಕೊಟ್ಟಿರುವ ಜವಾಬ್ದಾರಿಯಲ್ಲಿ, ಸೇವೆಯಲ್ಲಿ ನಿರ್ಲಕ್ಷ್ಯ ತೋರಿಸುವುದಾದರೆ, ಗುರಿಯನ್ನು ತಲುಪಲು ಮತ್ತೊಬ್ಬರನ್ನು ಉಪಯೋಗಿಸುತ್ತಾರೆ. ದೇವರ ಕರೆಯುವಿಕೆಯನ್ನು ಮರೆಯುವಾಗ, ನಮ್ಮ ಬದುಕನ್ನು ಹುಡುಕಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಹೊಂದಿಕೊಂಡ ಅಭಿಷೇಕವನ್ನು, ಸೇವೆಯನ್ನು ಕಳೆದುಕೊಳ್ಳದೆ ಕಾಪಾಡಿಕೊಳ್ಳೋಣ. ಆಮೆನ್!
-    Bro.ಅರುಳ್ ಹೇಬೆಲ್

ಪ್ರಾರ್ಥನಾ ಅಂಶ:-
ಬೈಬಲ್ ಕಾಲೇಜ್ ವಿದ್ಯಾರ್ಥಿಗಳು ವಾಸಿಸಲು ಕಟ್ಟುತ್ತಿರುವಂತಹ ಹಾಸ್ಟೆಲ್ ಕಟ್ಟಡ ಕೆಲಸಗಳು ಕ್ರಮವಾಗಿ ನಡೆಯುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)