ಧೈನಂದಿನ ಧ್ಯಾನ(Kannada) – 24.01.2021
ಧೈನಂದಿನ ಧ್ಯಾನ(Kannada) – 24.01.2021
ಕಾಪಾಡುವ ದೇವರು
"...ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” - ಮತ್ತಾಯ 5:16
"ಏಯ್, ಏನಮ್ಮ ಮಾಡ್ತಿದೀಯಾ? ಬೇಗ ಹೊರಡು. ಇಂದು ಕೊಯ್ಲು ಮಾಡಲು ಹೊಲಕ್ಕೆ ಹೋಗಬೇಕು, 10 ಜನರನ್ನು ಕೆಲಸಕ್ಕೆ ಸಿದ್ಧಮಾಡಿದ್ದೇನೆ. ನಾನು ಮುಂಚೆ ಹೋಗುತ್ತೇನೆ. ನೀನು ಅಡಿಗೆ ಮಾಡಿ ಬೇಗ ತೆಗೆದುಕೊಂಡು ಬಂದುಬಿಡು"ಎಂದು ಹೇಳಿದರು ರಾಜಯ್ಯ. ಇವರು ಕುಟುಂಬವಾಗಿ ದೇವರನ್ನು ಹುಡುಕುವ ವಿಷಯದಲ್ಲಿ ಮೊದಲ ಸ್ಥಾನವನ್ನು ಕೊಟ್ಟು ದೇವರಲ್ಲಿ ಭಯಭಕ್ತಿಯಿಂದ ಜೀವಿಸುತ್ತಿದ್ದರು. ದೇವರು ಅವರಿಗಿದ್ದ ಎಲ್ಲವನ್ನು ಆಶೀರ್ವದಿಸಿದರು. ಅವರು ವ್ಯವಸಾಯ ಮಾಡುತ್ತಿದ್ದ ಹೊಲದಲ್ಲಿ ಬೆಳೆಗಳು ಆಶೀರ್ವದಿಸಲ್ಪಟ್ಟಿದ್ದವು.
ಆ ವರ್ಷ ಭತ್ತವನ್ನು ಕೊಯ್ದು ಭತ್ತವನ್ನು ಹೊಡೆದು ಬೇರ್ಪಡಿಸುವ ಸ್ಥಳಕ್ಕೆ ತಂದಾಗ, ದಿಡೀರ್ ಮಳೆ! ಆದ್ದರಿಂದ ಅವರು ಭತ್ತದ ಕಟ್ಟುಗಳನ್ನೆಲ್ಲಾ ರಾಶಿಯಾಗಿ ಹಾಕಿ ಮಳೆಯಲ್ಲಿ ನೆನೆಯದ ಹಾಗೆ ಅದರ ಮೇಲೆ ಹೊದಿಸಿದರು. ಪಕ್ಕದ ಹೊಲದವರು ಕೂಡ ಬೆಳೆಯನ್ನು ಕೊಯ್ದು ಹಾಗೆಯೇ ಹೊದಿಸಿ ಹೋದರು. ಮರುದಿನ ಬೆಳೆಯನ್ನು ಹೊಡೆದು ಭತ್ತವನ್ನು ಬೇರ್ಪಡಿಸಲು ಬಂದು ನೋಡಿದವರಿಗೆ ಅಚ್ಚರಿ ಮೂಡಿಸುವ ಕಾರ್ಯ! ಪಕ್ಕದಲ್ಲಿರುವ ಅಡವಿಯ ಬಾತುಗಳು (wild ducks) ಹಾರಿಬಂದು ಆ ಬೆಳೆಯನ್ನು ಚೆಲ್ಲಾಪಿಲ್ಲಿ ಮಾಡಿ ಬಿಟ್ಟಿದ್ದವು. ಅವು ಮಿಡತೆಗಳ ಹಾಗೆ ಗುಂಪುಗುಂಪಾಗಿ ಪ್ರಯಾಣ ಮಾಡುತ್ತವೆ. ರಾತ್ರಿ ವೇಳೆಗಳಲ್ಲಿ ಧಾನ್ಯಗಳನ್ನು ಗುರಿಯಿಟ್ಟು ತಿನ್ನುತ್ತವೆ.ಆ ಬಾತುಗಳೇ ಇದನ್ನು ತಿಂದಿವೆ ಎಂದು ಅದರ ಹೆಜ್ಜೆಗುರುತುಗಳನ್ನು ನೋಡಿ ತಿಳಿದುಕೊಂಡರು. ಅಯ್ಯೋ, ಕಠಿಣವಾಗಿ ದುಡಿದು ಸಂಪಾದಿಸಿದ ಎಲ್ಲ ಗೋಧಿಯ ಕಾಳುಗಳು ವ್ಯರ್ಥವಾಗಿ ಬಿಟ್ಟಿತೇ ಎಂದು ಪಕ್ಕದ ಹೊಲದವರು ದುಃಖಪಟ್ಟರು. ಆಗಲೇ ರಾಜಯ್ಯ ಅವರು ಹೊಲದ ಕಡೆ ಬಂದು ನೋಡಿದರು. ಒಂದು ಗೋಧಿಯ ಕಾಳು ಕೂಡ ಚದರಿ ಹೋಗದೇ ಇರುವುದನ್ನು ಕಂಡು, ಅವರಿಂದ ನಂಬಲು ಸಾಧ್ಯವಾಗಲೇ ಇಲ್ಲ. ಇವರ ನೆಲದಲ್ಲಿ ಒಂದು ಬಾತು ಕೂಡ ಕಾಲಿಟ್ಟಿರಲಿಲ್ಲ. "ದೇವರೇ, ನನ್ನನ್ನು ಮಾತ್ರವಲ್ಲ ನನಗಿರುವ ಎಲ್ಲವನ್ನು ಬೇಲಿ ಹಾಕಿ ಕಾಯ್ದುಕೊಂಡಿರೇ!" ಎಂದು ಕೃತಜ್ಞತೆ ಹೇಳಿದರು. ಪಕ್ಕದ ಹೊಲದಲ್ಲಿ ನಿಂತಿದ್ದವರು ಈ ಸಂಭವವನ್ನು ನೋಡಿ ಆಶ್ಚರ್ಯಪಟ್ಟು ದೇವರ ಮೇಲೆ ನಂಬಿಕೆ ಇಟ್ಟರು ರಾಜಯ್ಯ ಕುಟುಂಬದವರ ಪರಿಮಳ ಜೀವನವು ಅನೇಕರನ್ನು ಕ್ರಿಸ್ತನ ಬಳಿಗೆ ಕರೆತಂದಿತು.
ಏನು ಪುಟಾಣಿಗಳೇ! ಯೇಸಪ್ಪಾ ತನ್ನನ್ನು ಹುಡುಕುವವರನ್ನು ಅದ್ಭುತವಾಗಿ ಕಾಪಾಡುತ್ತಾರೆ ಅಲ್ವಾ? ಅದು ಮಾತ್ರವಾ ಅವರ ಮೂಲಕ ಅನೇಕರು ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುತ್ತಾರೆ. ನೀನು ಕೂಡ ಯೇಸುವಿನ ಪರಿಮಳವನ್ನು ಬೀರುವ ಒಳ್ಳೆಯ ಸಾಕ್ಷಿಯಾಗಿ ಜೀವಿಸಿ ತೋರಿಸುತ್ತೀಯಾ?
- Mrs.ಜೀವಾ ವಿಜಯ್
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482