Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 21.02.2025

ಧೈನಂದಿನ ಧ್ಯಾನ(Kannada) – 21.02.2025

 

ಜೇಡ

 

"ಭೂವಿುಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು,... ಜೇಡರ ಹುಳು ತನ್ನ ಕೈಗಳಿಂದ ಹಿಡಿದುಕೊಳ್ಳುತ್ತದೆ; ಅದು ಅರಮನೆ ಗಳಲ್ಲಿ ಇರುತ್ತದೆ" - ಜ್ಞಾನೋಕ್ತಿ 30:24,28

 

ಜೇಡರ ಹುಳು ಜ್ಞಾನವುಳ್ಳ ಒಂದು ಎಂದು ಅರಸನಾದ ಸೊಲೊಮೋನನಿಂದ ತೋರಿಸಲ್ಪಟ್ಟಿದೆ. ಅದು ಆಹಾರವನ್ನು ಹುಡುಕಿಕೊಂಡು ಹೊರಗೆ ಹೋಗಬೇಕಾಗಿಲ್ಲದಂತೆ ತನ್ನ ಆವಾಸಸ್ಥಾನವನ್ನು ಜಾಲವನ್ನಾಗಿ ಪರಿವರ್ತಿಸುತ್ತದೆ ಮತ್ತು ಅದು ಇರುವ ಸ್ಥಳದಿಂದಲೇ ತನ್ನ ಆಹಾರವನ್ನು ಪಡೆಯುತ್ತದೆ. ಅಂದರೆ, ಅದು ತನಗೆ ಬೇಕಾದ ಆಹಾರವನ್ನು ಒಂದು ಜಾಲದಲ್ಲಿ ಸಿಲುಕಿಸಿ ತಿನ್ನುತ್ತದೆ.

 

ಇಂದು, ಸಾಮಾಜಿಕ ಮಾಧ್ಯಮಗಳು ಸಹ ಹಾಗೆಯೇ ನಾವು ಇರುವ ಸ್ಥಳದಿಂದಲೇ, ನಮ್ಮ ಸಮಯ, ನಮ್ಮ ಕುಟುಂಬ ಸಂಬಂಧಗಳನ್ನು ನಾಶಮಾಡುತ್ತಿವೆ ಮತ್ತು ಅನಗತ್ಯ ವಿಷಯಗಳನ್ನು ನೋಡುವಲ್ಲಿ ನಮ್ಮನ್ನು ಸಿಲುಕಿಸುತ್ತಿವೆ. ಟೆಲಿಶಾಪಿಂಗ್ ಮೂಲಕ ಅನಗತ್ಯ ವಸ್ತುಗಳನ್ನು ಖರೀದಿಸಿ ಸಾಲಕ್ಕೆ ಸಿಲುಕಿದ ಜನರಿದ್ದಾರೆ. ನಾವು ಅನಗತ್ಯ ವಸ್ತುಗಳನ್ನು ಖರೀದಿಸಿ ಜೋಡಿಸುತ್ತೇವೆ. ಸಾಮಾಜಿಕ "ವೆಬ್" ವೇದಿಕೆ ನಮ್ಮನ್ನು ಐಷಾರಾಮಿ ಪ್ರಿಯರನ್ನಾಗಿ ಮಾಡಿದೆ. ನಮ್ಮನ್ನು ಹಿಡಿಯಲು ಬೇಟೆಗಾರ ಬಲೆ ಬೀಸುವಂತೆ, ಅಂತರ್ಜಾಲದಲ್ಲಿ ನಮಗೆ ಹಾನಿ ಮಾಡಲು ಕಾಯುತ್ತಿರುವ ಜನಸಮೂಹವಿದೆ. "ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ಏಕೆಂದರೆ ನಿಮ್ಮ ವಿರೋಧಿಯಾದ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ" (1 ಪೇತ್ರ 5:8).  

 

ವ್ಯಸನಗಳು ಚಿಕ್ಕದಾಗಿ ಪ್ರಾರಂಭವಾಗಿ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುತ್ತವೆ. ಸ್ನೇಹಿತರ ಮೂಲಕ ಒಂದೇ ಒಂದು ಬಾರಿ ಮಾತ್ರ ನಮ್ಮೊಂದಿಗೆ ಕುಡಿಯುತ್ತೀಯಾ? ಧೂಮಪಾನ ಮಾಡುತ್ತೀಯಾ? ಎಂದು ಪ್ರಾರಂಭಿಸುವ ಮಕ್ಕಳು ಕೊನೆಗೆ ಎಲ್ಲಾ ರೀತಿಯ ಮಾದಕ ವಸ್ತುಗಳಿಗೆ ವ್ಯಸನಿಯಾಗಿ ತಮ್ಮ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುತ್ತಿದ್ದಾರಲ್ಲವೇ? ಅವರು ಮಾತ್ರವೇ ಅಲ್ಲ, ಅವರ ಕುಟುಂಬದವರು ಸಹ ತೊಂದರೆಗೆ ಸಿಲುಕುವ ಪರಿಸ್ಥಿತಿ ಏರ್ಪಡುತ್ತದೆ. ಅದರ ಜೊತೆಗೆ, ವ್ಯಸನದಿಂದ ಬಳಲುತ್ತಿರುವ ವ್ಯಕ್ತಿ ಹಾಗೂ ಅವನ ಸುತ್ತಲಿನ ಸಂಬಂಧಿಕರು ಮತ್ತು ಸ್ನೇಹಿತರು ಬಡತನ, ಅನಾರೋಗ್ಯ ಮತ್ತು ಬಂಧನಗಳಿಂದ ಪ್ರಭಾವಿತರಾಗುತ್ತಾರೆ. ಎಷ್ಟು ಅವಮಾನ? ಎಷ್ಟು ನೋವು?"

 

ಸಹೋದರನೇ, ದಯವಿಟ್ಟು ಸ್ವಲ್ಪ ಯೋಚಿಸಿ ನೋಡು. ಆನ್‌ಲೈನ್‌ನಲ್ಲಿ ಸಾಲ ನೀಡುವುದಾಗಿ ಹೇಳಿಕೊಂಡು ಹಣ ಮತ್ತು ಖ್ಯಾತಿಯನ್ನು ಕಳೆದುಕೊಂಡ ಜನರ ಬಗ್ಗೆ ನಾವು ಸುದ್ದಿಗಳಲ್ಲಿ ಕೇಳುತ್ತಲೇ ಇದ್ದೇವೆ. ಲಕ್ಷಾಂತರ ಜನರು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಸಿಕ್ಕಿಬಿದ್ದಿದ್ದಾರೆ. "ಹಾಗಾದರೆ, ಕರ್ತನಿಂದ ಆರಿಸಲ್ಪಟ್ಟ ನಾವು ಮೋಸಹೋಗದಂತೆ ಜಾಗರೂಕರಾಗಿರೋಣ." "ವೆಬ್" ನಲ್ಲಿ ಸಿಕ್ಕಿಬಿದ್ದ ಕೀಟಗಳಂತೆ ಸಾಯದೆ, ಬುದ್ಧಿವಂತಿಕೆಯಿಂದ ವೆಬ್‌ಸೈಟ್‌ಗಳನ್ನು ಬಳಸೋಣ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ಫಿಲಿಪ್ಪನ ಸುವಾರ್ತಾ ಸೇವೆಯ ಮೂಲಕ ಅನೇಕ ಹೊಸ ಹಳ್ಳಿಗಳನ್ನು ತಲುಪುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)