Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 20.02.2025

ಧೈನಂದಿನ ಧ್ಯಾನ(Kannada) – 20.02.2025

 

ಕೋಳಿ

 

"...ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ..." - ಮತ್ತಾಯ 23:37

 

ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡಿರುವ ಏಕೈಕ ಪಕ್ಷಿ ಪ್ರಭೇದ ಕೋಳಿಗಳು. ಕೋಳಿ ಎಂದರೆ ತಾಯ್ತನದ ಉದಾಹರಣೆ ಎಂದು ಹೇಳಲಾಗುವ ಪಕ್ಷಿ. ಕೋಳಿ ತನ್ನ ಮರಿಗಳಿಗೆ ಆಹಾರವನ್ನು ನೀಡುತ್ತದೆ ಮತ್ತು ಆಹಾರವನ್ನು ಹೇಗೆ ಹುಡುಕಬೇಕೆಂದು ಕಲಿಸುತ್ತದೆ. ಶತ್ರುಗಳು ಬಂದಾಗ ಅದು ಅವರ ವಿರುದ್ಧ ಹೋರಾಡುತ್ತದೆ. ಪಕ್ಷಿಗಳು ಗಿಡುಗಗಳಂತೆ ಮರಿಗಳನ್ನು ಹೊತ್ತೊಯ್ಯಲು ಬಂದಾಗ ಅವುಗಳನ್ನು ರೆಕ್ಕೆಗಳ ಕೆಳಗೆ ಅಡಗಿಸಿಟ್ಟು ರಕ್ಷಿಸುವುದನ್ನು ನಾವು ನೋಡಿದ್ದೇವೆ. ಇದೆಲ್ಲವೂ ತಾಯಿಯಲ್ಲಿ ಕಂಡುಬರುವ ರಕ್ಷಣಾತ್ಮಕ ಮತ್ತು ಪೋಷಿಸುವ ಸ್ವಭಾವವನ್ನು ನಮಗೆ ನೆನಪಿಸುತ್ತದೆ. ದೇವರು ಕೂಡ ನಮ್ಮನ್ನು ಅದೇ ರೀತಿ ರಕ್ಷಿಸುತ್ತಾರೆ ಮತ್ತು ನಮ್ಮನ್ನು ನೋಡಿಕೊಳ್ಳುತ್ತಾರೆ, ನಮಗೆ ಬಟ್ಟೆಗಳನ್ನು ಒದಗಿಸುತ್ತಾರೆ ಶಿಕ್ಷಣ ಮತ್ತು ಉದ್ಯೋಗದಂತಹ ಅನೇಕ ಪ್ರಯೋಜನಗಳನ್ನು ಒದಗಿಸುತ್ತಾರೆ. "ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ" (ಜೆಕರ್ಯ 2:8) ಎಂಬ ವಚನದ ಪ್ರಕಾರ, ನಮ್ಮನ್ನು ತನ್ನ ಕಣ್ಣಿನ ಗುಡ್ಡೆಯಂತೆ ರಕ್ಷಿಸುವ ಕರ್ತನು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

   

ದೇವರ ಅಪ್ಪುಗೆಯನ್ನು ಬಯಸದ ಮಕ್ಕಳಾಗಿ ಅಂದು ಯೆರೂಸಲೇಮ್ ಪಟ್ಟಣದವರು ಇದ್ದರು. "ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು (ಮತ್ತಾ. 23:37) ಎಂದು ಕರ್ತನು ಹೇಳುತ್ತಾರೆ. ಕರ್ತನು ನಮ್ಮನ್ನು ಅಪ್ಪಿಕೊಳ್ಳಲು ಸಿದ್ಧನಾಗಿದ್ದರೂ, ಆ ಅಪ್ಪುಗೆಯನ್ನು ಬಯಸದ, ಆತನನ್ನು ಅರಿಯದ ಲಕ್ಷಾಂತರ ಜನರಿದ್ದಾರೆ! ಸೇನೆಗಳ ಕರ್ತನ ರೆಕ್ಕೆಗಳ ಮರೆಯಲ್ಲಿ, ನಮ್ಮನ್ನು ನಮ್ಮ ಮಕ್ಕಳನ್ನು ಮಾತ್ರ ರಕ್ಷಿಸಿಕೊಳ್ಳಲು ಬಯಸುತ್ತೇವೆ. ಆತನನ್ನು ಅರಿಯದವರನ್ನು ತಲುಪಲು ಮತ್ತು ಆತನ ಅಪ್ಪುಗೆಯನ್ನು ಸ್ವೀಕರಿಸಲು ನಮ್ಮ ಪ್ರಯತ್ನಗಳೇನು? ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆಯೇ? ಕರ್ತನ ಬಳಿಗೆ ಬರದವರಿಗೆ ನಾವು ಶುಭವಾರ್ತೆಯನ್ನು ಕೊಂಡೊಯ್ದು ಸೇರಿಸುತ್ತೇವೆಯೇ? ಬರೋಣದಲ್ಲಿ ಎಷ್ಟು ಆತ್ಮಗಳನ್ನು ನಾವು ಕರ್ತನ ಬಳಿಗೆ ಕರೆದುಕೊಂಡು ಹೋಗುತ್ತೇವೆ? ನಮ್ಮ ಬಗ್ಗೆ ಕರ್ತನಿಗೆ ಯಾರೆಲ್ಲಾ ಮೊರೆಯಿಡುತ್ತಾರೆ? ಕರ್ತನೇ, ನಿಮ್ಮ ಬಗ್ಗೆ ನನ್ನೊಂದಿಗೆ ಇವರು ಒಮ್ಮೆಯೂ ಮಾತನಾಡಲೇ ಇಲ್ಲ ಎಂದು ದೂಷಿಸಿದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ?

   

ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ದೇವರ ಬಗ್ಗೆ ಹೇಳೋಣ. ನಾವು ಆತನ ಪ್ರೀತಿಯ ರೆಕ್ಕೆಗಳೊಳಗೆ ಬಂದು ಸೈತಾನನ ಕುತಂತ್ರಗಳಿಂದ ರಕ್ಷಿಸಿಕೊಳ್ಳಲು ನಮ್ಮಿಂದ ಸಾಧ್ಯವಾದಷ್ಟು ಮಾಡೋಣ. "ಆತನ ಮೇಲೆ ನಂಬಿಕೆ ಇಡದವರು ಅವರನ್ನು ಹೇಗೆ ಆರಾಧಿಸುತ್ತಾರೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ" (ರೋಮಾ 10:14)

- K. ಕಾಮರಾಜ್

 

ಪ್ರಾರ್ಥನಾ ಅಂಶ:

ಕಚೇರಿ ಆಡಳಿತ ಸಿಬ್ಬಂದಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)