ಧೈನಂದಿನ ಧ್ಯಾನ(Kannada) – 16.02.2025 (Kids Special)
ಧೈನಂದಿನ ಧ್ಯಾನ(Kannada) – 16.02.2025 (Kids Special)
ಜೇನುನೊಣಗಳು
"ಶಿಕ್ಷೆಯನ್ನೊಲ್ಲದವನು ತನ್ನನ್ನೇ ನಿರಾಕರಿಸುವನು; ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು" - ಜ್ಞಾನೋಕ್ತಿ 15:32
ಹಸಿರು ಹುಲ್ಲುಗಾವಲುಗಳು, ಸುಂದರವಾದ ತೊರೆಗಳು, ಎತ್ತರದ ಪರ್ವತಗಳು, ಮತ್ತು ಗೊಂಚಲುಗಳಲ್ಲಿ ಅರಳುತ್ತಿರುವ ಮರಗಳು ಮತ್ತು ಸಸ್ಯಗಳು. ಇದನ್ನೆಲ್ಲಾ ನೋಡಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ನಿಮಗೆ ಇಷ್ಟಾನಾ ಪುಟಾಣಿಗಳೇ! ಹೃದಯವನ್ನು ಆಕರ್ಷಿಸುವ ಯಾವ ಒಂದು ವಸ್ತುವನ್ನು ನೋಡಿದರೂ ಸಂತೋಷವಾಗಿಯೇ ಇರುತ್ತದೆ. ಆದರೆ ಎಲ್ಲವನ್ನೂ ಅನುಭವಿಸಲು ಸಾಧ್ಯವಿಲ್ಲವಲ್ಲಾ? ಮುದ್ದು ಮಕ್ಕಳೇ! O,k ಜೇನುನೊಣ ಇಂದು ನಮಗೆ ಯಾವ ಪಾಠ ಕಲಿಸಲಿದೆ ಎಂಬುದರ ಕುರಿತು ಒಂದು ಕಥೆಯನ್ನು ಕೇಳೋಣ್ವಾ?
ಒಂದು ಕಾಡಿನಲ್ಲಿ ಜೇನುನೊಣಗಳ ಸುಂದರವಾದ ಗುಂಪು ವಾಸಿಸುತ್ತಿತ್ತು. ಜೇನುನೊಣಗಳು ಹೂವುಗಳ ಮೇಲೆ ಕುಳಿತು ಮಕರಂದ ಸಂಗ್ರಹಿಸುವ ಸ್ವಭಾವವನ್ನು ಹೊಂದಿವೆ. ನಿಮಗೆಲ್ಲರಿಗೂ ಜೇನುತುಪ್ಪ ತುಂಬಾ ಇಷ್ಟಾನಾ? ನನಗೂ ತುಂಬಾ ಇಷ್ಟ. ಗುಂಪಿನಲ್ಲಿದ್ದ ಒಂದು ಜೇನುನೊಣವು ಎಲ್ಲಾ ಹೂವುಗಳ ಮೇಲೆ ಕುಳಿತು ಆಟವಾಡಲು ತುಂಬಾ ಸಂತೋಷಪಟ್ಟಿತು. ಸಂಜೆ, ಅಮ್ಮನೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ, ಜೇನುನೊಣ ಆ ದಿನ ನಡೆದ ಎಲ್ಲದರ ಬಗ್ಗೆ ಹೇಳುತ್ತಲೇ ಇತ್ತು. ನಾನು ಕೆಲವು ಹೂವುಗಳ ಮೇಲೆ ಕುಳಿತಾಗ ಸ್ವಲ್ಪ ವಿಭಿನ್ನವೆನಿಸಿತು. ಕೆಲವು ಹೂವುಗಳು ಸುಂದರವಾಗಿದ್ದವು ಎಂದು ಹೇಳುತ್ತಾ ತುಂಬಾ ದೂರ ಪ್ರಯಾಣ ಮಾಡಿದ್ದೇ ಗೊತ್ತಾಗದೆ ಹೋಯಿತು. ಏನು ಪುಟಾಣಿಗಳೇ! ನೀವು ಕೂಡ ಪ್ರತಿದಿನ ಎದುರಿಸುವ ಸಮಸ್ಯೆಗಳ ಬಗ್ಗೆ ನಿಮ್ಮ ಹೆತ್ತವರಿಗೆ ಹೇಳಬೇಕು. O.k ನಾ. ತಾಯಿ ಜೇನುನೊಣ ಹೇಳಿತು, ತುಂಬಾ ಸುವಾಸನೆ ಇರುವ ಹೂವುಗಳ ಮೇಲೆ ಕುಳಿತುಕೊಳ್ಳಬಾರದು, ಅದು ನಿನ್ನನ್ನೇ ನಾಶಮಾಡಿಬಿಡುತ್ತದೆ ಎಂದು. "ಸರಿ ಅಮ್ಮಾ" ಅಂತ ಹೇಳಿ, ಜೇನುನೊಣ ಎಂದಿನಂತೆ ಕಾಡಿಗೆ ಹೋಗಿ ಜೇನುತುಪ್ಪ ಸವಿದು ತಿಂದಿತು.
ಉಳಿದ ಎಲ್ಲಾ ಜೇನುನೊಣಗಳು ಹೂವುಗಳೊಂದಿಗೆ ಆಟವಾಡುತ್ತಾ ಮತ್ತು ಜೇನುತುಪ್ಪವನ್ನು ಸಂಗ್ರಹಿಸುತ್ತಾ ಖುಷಿಪಟ್ಟವು. ನಮ್ಮ ಪುಟ್ಟ ಜೇನುನೊಣ ಎಲ್ಲಾ ಹೂವುಗಳನ್ನು ಸಂತೋಷದಿಂದ ಮುಟ್ಟಿ ಆಟವಾಡಿತು. ಸುಂದರವಾದ ಹೂವಿನ ಮೇಲೆ ಕುಳಿತುಕೊಂಡಿತು. ಅಮ್ಮ ಹೇಳಿದ್ದನ್ನು ಮರೆತುಹೋಯಿತು. ಆ ಪರಿಮಳಯುಕ್ತ ಹೂವಿನ ಪರಿಮಳ ಹಾಗೆಯೇ ನಿದ್ದೆಗೆಳೆಯಿತು. ಜೇನುನೊಣ ಕಣ್ಣು ತೆರೆದು ಹಾರಲು ಪ್ರಯತ್ನಿಸಿತು, ಆದರೆ ಸಾಧ್ಯವಾಗಲಿಲ್ಲ. ಅಯ್ಯೋ! ನನ್ನ ಅಮ್ಮನ ಮಾತನ್ನು ಕೇಳಲಿಲ್ಲವಲ್ಲಾ ಎಂದು ಯೋಚಿಸುತ್ತಿರುವಾಗಲೇ ತಾಯಿ ಜೇನುನೊಣ ಹುಡುಕಿಕೊಂಡು ಬಂದು ಹೂವಿನಿಂದ ಅದನ್ನು ಕೆಳಗೆ ತಳ್ಳಿತು. ಜೇನುನೊಣ ತಕ್ಷಣ ಹಾರಿಹೋಯಿತು. ಅವಿಧೇಯತೆಯಿಂದ ತನಗೆ ಅಪಾಯ ಕಾದಿರುವುದನ್ನು ಅರಿತುಕೊಂಡು, ತಾಯಿ ಜೇನುನೊಣದ ಬಳಿ ಕ್ಷಮೆ ಕೇಳಿತು.
ಏನು ಪುಟಾಣಿಗಳೇ! ಹೆತ್ತವರ ಮಾತುಗಳಿಗೆ ವಿಧೇರಾಗದೆ ನಡೆದರೆ, ಅಪಾಯದಲ್ಲಿ ಸಿಲುಕುತ್ತೇವೆ. ವಿಧೇಯತೆ ತೋರುವ ಮಗು ಮಾತ್ರವೇ 'ಶ್ರೇಷ್ಠತೆ'ಯ ಆಶೀರ್ವಾದವನ್ನು ಪಡೆಯಲು ಸಾಧ್ಯ. O.k ನಾ ಮುದ್ದು ಮಕ್ಕಳೇ!
- J.P. ಹೆಪ್ಸಿಬಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482