Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 14.02.2025

ಧೈನಂದಿನ ಧ್ಯಾನ(Kannada) – 14.02.2025

 

ಕಾಗೆ

 

"ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ, ಮಾಂಸ ಇವುಗಳನ್ನು ತಂದುಕೊಡುತ್ತಿದ್ದವು..." - 1 ಅರಸು. 17:6

 

ಪ್ರತಿ ವಾರ ನಾನು ಗ್ರಾಮಗಳಿಗೆ ಹೋಗಿ ಸೇವೆ ಮಾಡುವುದು ಅಭ್ಯಾಸ. ಒಂದು ದಿನ, ನಾವು ಒಂದು ಹಳ್ಳಿಯಲ್ಲಿ ಚಹಾ ಕುಡಿಯುತ್ತಾ ವಡೆ ತಿನ್ನುತ್ತಾ ಕುಳಿತಿದ್ದಾಗ, ಒಂದು ಕಾಗೆ ಇದ್ದಕ್ಕಿದ್ದಂತೆ ಹಾರಿ ಬಂದು ವಡೆಯನ್ನು ಹೊತ್ತುಕೊಂಡು ಹೋಯಿತು. ಮರದಲ್ಲಿ ಕುಳಿತಿದ್ದ ಮೂರು ಕಾಗೆಗಳು ಅದನ್ನು ಹಂಚಿಕೊಂಡು ತಿಂದವು. ನಂತರ ನಾನು ಚಹಾ ಕುಡಿಯುತ್ತಾ ಕಾಗೆಯ ಬಗ್ಗೆ ಯೋಚಿಸಿದೆ.

         

ಐದು ಇಂದ್ರಿಯಗಳನ್ನು ಹೊಂದಿರುವ ಈ ಹಕ್ಕಿಗೆ, ಕಿತ್ತುಕೊಳ್ಳುವುದು ತಪ್ಪು ಎಂದು ಗೊತ್ತಿಲ್ಲ. ಆದರೆ ಆಹಾರವನ್ನು ಹಂಚಿಕೊಂಡು ತಿನ್ನುವ ಒಳ್ಳೆಯ ಅಭ್ಯಾಸ ಇದೆಯಲ್ಲಾ ಎಂದು ಭಾವಿಸಿದೆ. ನೋಡಲು ವರ್ಣಮಯವಾಗಿಲ್ಲದ ಅದರ ಬಳಿ ನಾವು ಕಲಿಯಬಹುದಾದ ವರ್ಣಮಯವಾದ ವಿಷಯಗಳಿವೆ. ಕಾಗೆಗಳು ಬೆಳಿಗ್ಗೆ ಬೇಗನೆ ಎದ್ದು ಕರ್ತನನ್ನು ಸಂತೋಷದಿಂದ ಹಾಡಿ ಸ್ತುತಿಸುತ್ತವೆ. ಎಲೀಯನ ದಿನಗಳಲ್ಲಿ ದೇಶದಲ್ಲಿ ಮಳೆ ಬರಲಿಲ್ಲ, ಮತ್ತು ಎಲ್ಲೆಡೆ ಕ್ಷಾಮ ಮತ್ತು ಅನಾವೃಷ್ಟಿ ಇತ್ತು. ದೇವರು ಎಲೀಯನಿಗೆ ಕೆರೀತ್ ಹಳ್ಳದ ಬಳಿಯಲ್ಲಿ ಇರುವಂತೆ ಹೇಳಿದರು. ಎಲೀಯನು ವಿಧೇಯನಾಗಿ ಹೊರಟುಹೋದನು. ದೇವರು ನೇಮಿಸಿದ ಕಾಗೆಯು ಅವನಿಗೆ ಪ್ರತಿದಿನ ಬೆಳಿಗ್ಗೆ ರೊಟ್ಟಿ ಮತ್ತು ಮಾಂಸವನ್ನು ಮತ್ತು ಪ್ರತಿದಿನ ಸಂಜೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಟ್ಟಿತು ಎಂದು ಸತ್ಯವೇದದಲ್ಲಿ ನೋಡುತ್ತೇವೆ. ಬೆಳಗಿನ ಜಾವ ಎಂದರೆ 4.30 ರಿಂದ 5.30 ರವರೆಗೆ. ಇಷ್ಟು ಬೆಳಿಗ್ಗೆ ಎದ್ದೇಳುವ ಅಭ್ಯಾಸ ಇದ್ದದರಿಂದಲೇ ದೇವರು ಎಲೀಯನನ್ನು ಪೋಷಿಸಲು ಕಾಗೆಯನ್ನು ಉಪಯೋಗಿಸಿದರು. ಅದಲ್ಲದೆ ಅದು ದೇವರ ವಾಕ್ಯಕ್ಕೆ ವಿಧೇಯತೆ ತೋರುವ ಪಕ್ಷಿಯೂ ಆಗಿತ್ತು. ನಾವು ಸಹ ಬೆಳಿಗ್ಗೆ ಬೇಗನೆ ಎದ್ದು, ದೇವರನ್ನು ಹುಡುಕಬೇಕೆಂದು ಮತ್ತು ಆತನ ಮಾತನ್ನು ಪ್ರಶ್ನಿಸದೆ ಪಾಲಿಸಬೇಕೆಂದು ದೇವರು ನಿರೀಕ್ಷಿಸುತ್ತಿದ್ದಾರೆ. "ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು." (ಜ್ಞಾನೋಕ್ತಿ 8:17) ಎಂದು ಸತ್ಯವೇದದಲ್ಲಿ ನೋಡುತ್ತೇವೆ. ಅರಸನಾದ ದಾವೀದನು ಸಹ "ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವದು; ಉದಯಕಾಲದಲ್ಲಿಯೇ [ಪ್ರಾರ್ಥನೆಯನ್ನು] ಸಮರ್ಪಿಸಿ ಸದುತ್ತರವನ್ನು ಎದುರುನೋಡುತ್ತಿರುವೆನು ಎಂದು ಹೇಳುತ್ತಾರೆ. (ಕೀರ್ತನೆ 5:3) ಆದ್ದರಿಂದ ಅರಸನಾದ ದಾವೀದನು ದೇವರ ಹೃದಯಕ್ಕೆ ಒಪ್ಪುವ ವ್ಯಕ್ತಿಯಾಗಿದ್ದನು.

      

ಪ್ರಿಯರೇ! ಪ್ರತಿದಿನ ಮುಂಜಾನೆಯಲ್ಲಿ ಆತನ ಕೃಪೆಯು ಹೊಸದಾಗಿರುತ್ತದೆ. ಆ ಹೊಸ ಕೃಪೆಯಿಂದ ತುಂಬಲ್ಪಡಲು ನಾವು ಪ್ರತಿದಿನ ಬೆಳಿಗ್ಗೆ ದೇವರನ್ನು ಹುಡುಕೋಣ. ಅಷ್ಟೇ ಅಲ್ಲ, ನಾವು ಕಾಗೆಯಂತೆ ದೇವರ ಮಾತಿಗೆ ವಿಧೇಯರಾಗೋಣ. ದೇವರಿಂದ ಉಪಯೋಗಿಸಲ್ಪಡುವ ಪ್ರತಿಯೊಬ್ಬರೂ ದೇವರ ವಾಕ್ಯಕ್ಕೆ ವಿಧೇಯರಾಗುತ್ತಾರೆ. ನಾವು ಸಹ ಮುಂಜಾನೆಯೇ ಎದ್ದೇಳೋಣ, ದೇವರೊಂದಿಗೆ ಸಂಬಂಧವನ್ನು ಹೊಂದೋಣ ಮತ್ತು ದೇವರ ವಾಕ್ಯಕ್ಕೆ ವಿಧೇಯರಾಗೋಣ. ದೇವರಿಂದ ಉಪಯೋಗಿಸಲ್ಪಡುವ ಪಾತ್ರೆಯಾಗಿ ಇರೋಣ. 

- Mrs. ಜ್ಯೋತಿ ಆನಂದ್

 

ಪ್ರಾರ್ಥನಾ ಅಂಶ:

ಈರೋಡಿನಲ್ಲಿ ನಡೆಯಲಿರುವ ಯುವ ಶಿಬಿರದ ಅಗತ್ಯತೆಗಳು ಪೂರೈಸಲ್ಪಡವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)