Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 26.02.2024

ಧೈನಂದಿನ ಧ್ಯಾನ(Kannada) – 26.02.2024

 

ಬೇಗನೆ ಬರುತ್ತೇನೆ

 

"…ನಿಜವಾಗಿ ಬೇಗ ಬರುತ್ತೇನೆ ಎಂದು ಹೇಳುತ್ತಾನೆ”. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ" - ಪ್ರಕಟನೆ 22:20

 

ದೈವಭಕ್ತಿಯುಳ್ಳ ಒಬ್ಬ ವೈದ್ಯರು ಬಹಳ ಪ್ರತಿಭಾವಂತರಾಗಿದ್ದರು. ಅವರ ಹೆಂಡತಿ ಎಲ್ಲದಕ್ಕೂ ತನ್ನ ವೈದ್ಯ ಪತಿಯನ್ನೇ ಅವಲಂಬಿಸಿದ್ದಳು. ವೈದ್ಯರು ಹಠಾತ್ತನೆ ಸತ್ತುಹೋದರು ಆಗ ಎಲ್ಲರೂ ಪತಿ ಇಲ್ಲದೆ ಇವರ ಹೆಂಡತಿ ತುಂಬಾ ಪರಿತಪಿಸುತ್ತಾಳೆ ಎಂದು ನಿರೀಕ್ಷಿಸುತ್ತಿದ್ದರು. ಆದರೆ ಆಕೆ ಕೆಲವೇ ದಿನಗಳಲ್ಲಿ ಸಮಾಧಾನ ಹೊಂದಿ ಚೇತರಿಸಿಕೊಂಡರು. ಕಾರಣ ವೈದ್ಯರು ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದ ಕೊನೆಯ ಮಾತುಗಳೇ! ಅದೇನೆಂದರೆ "ಹೊರಗೆ ಹೋಗಿದ್ದೇನೆ. ಬೇಗನೆ ಬಂದು ಬಿಡುತ್ತೇನೆ" ಎಂಬ ಮಾತುಗಳು ಅವರ ಅಂತರಂಗವನ್ನು ತುಂಬಿ ಬಹು ದೊಡ್ಡ ಆದರಣೆಯನ್ನು, ಸಾಂತ್ವನವನ್ನು ಪಡೆದರು. ಆ ದಿನದಿಂದ ಮುಂದೆ ವೈದ್ಯರ ಹೆಂಡತಿಯು ಈ ಲೌಕಿಕ ಜೀವನದ ಎಲ್ಲಾ ಅಗತ್ಯಗಳಿಗಾಗಿ ಎಲ್ಲಾ ಸಮಯದಲ್ಲೂ ಯೇಸುವನ್ನೇ ಅವಲಂಬಿಸಿದರು. ಈ ಲೌಕಿಕ ಜೀವನವೇ ಕೊನೆಯಲ್ಲ, ಇದೊಂದು ಬಾಡಿಗೆ ಮನೆಯಷ್ಟೇ. ಯೇಸುವನ್ನು ಮತ್ತು ಅವರೊಂದಿಗೆ ತನ್ನ ಗಂಡನನ್ನು ಸಹ ನೋಡುತ್ತೇವೆ ಎಂದು ನಂಬಿಕೆಯಲ್ಲಿ ದೃಢಪಟ್ಟು ಜೀವನದಲ್ಲಿ ಮುಂದೆ ಸಾಗಿದಳು.

 

ಯೇಸುಕ್ರಿಸ್ತನು ಕೊನೆಯ ಕರ್ತನ ಭೋಜನದಲ್ಲಿ ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ” ಅಂದನು. ಕರ್ತನ ಭೋಜನವು ಆತನ ಎರಡನೇ ಬರುವಿಕೆಯನ್ನು ನೆನಪಿಸಿಕೊಳ್ಳುವಂತೆಯೂ, ಆತನ ಬರುವಿಕೆಯನ್ನು ಆಸಕ್ತಿಯಿಂದ ಎದುರುನೋಡಬೇಕೆಂಬುದನ್ನೂ ನಮಗೆ ಸ್ಪಷ್ಟವಾಗಿ ತೋರಿಸುತ್ತಿದೆ.

 

ಪ್ರಿಯರೇ! ಕರ್ತನಾದ ಯೇಸು ಕ್ರಿಸ್ತನು ನಮ್ಮ ಪಾಪಗಳಿಗಾಗಿ ಶಿಲುಬೆಯಲ್ಲಿ ಜಡಿಯಲ್ಪಟ್ಟು, ಮರಣಹೊಂದಿ ಮೂರನೆಯ ದಿನದಲ್ಲಿ ಪುನರುತ್ಥಾನಗೊಂಡಂತೆ, ಆತನ ಎರಡನೆಯ ಬರುವಿಕೆಯೂ ಸಹ ಬಹಳ ಮುಖ್ಯವಾದದ್ದು. ಅದು ಯಾವಾಗ ಬರುತ್ತದೆ ಎಂದು ತಂದೆಗೆ ಹೊರತು ಬೇರೆ ಯಾರಿಗೂ ತಿಳಿದಿಲ್ಲ. ಹಾಗಾಗಿ ಆ ಭೇಟಿಗಾಗಿ ಕಾತರದಿಂದ ಕಾಯುತ್ತಿರೋಣ. ಅಲ್ಲಿಯವರೆಗೆ ನಾವು ನಮ್ಮ ಎಲ್ಲಾ ಕಾರ್ಯಗಳಿಗಾಗಿ ಅವರ ಮೇಲೆಯೇ ಅವಲಂಬಿತರಾಗಿರೋಣ. "ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ." (1 ಕೊರಿಂಥ 15:19) ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತಿದೆ. ಅವರ ಬರುವಿಕೆಗಾಗಿ ಕಾಯುತ್ತಿರುವ ನಾವು ಸಹ ಇತರರನ್ನು ಸಂಪಾದಿಸಿ ಎರಡನೇ ಬರುವಿಕೆಗೆ ಸಿದ್ಧಮಾಡೋಣ. ಏಕೆಂದರೆ ಅವರ ಎರಡನೆಯ ಬರುವಿಕೆಯು ಬಹು ಸಮೀಪದಲ್ಲಿದೆ!!

- Mrs. ಬ್ಯೂಲಾ

 

ಪ್ರಾರ್ಥನಾ ಅಂಶ:

ಡೇ ಕೇರ್ ಸೆಂಟರ್ ಮೂಲಕ ನಾವು ಭೇಟಿಯಾಗುವ ಆಂಧ್ರಪ್ರದೇಶ ಮತ್ತು ಒಡಿಶಾದ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)