Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.05.2022 (Kids Special)

ಧೈನಂದಿನ ಧ್ಯಾನ(Kannada) – 01.05.2022 (Kids Special)

 

ರಜಾದಿನ ಸಂತೋಷವಾಗಿದೆಯಾ?

 

"ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?..." - ಕೀರ್ತನೆ 143:10

 

Hai ಪುಟಾಣಿಗಳೇ! ಎಲ್ಲರಿಗೂ School leave ತಾನೇ Jollyಯಾಗಿ ವಿಧವಿಧವಾಗಿ ಆಟವಾಡುತ್ತೀರ ತಾನೇ! ಸಿಬಿ, ಜೆರಿ, ನೇಟ್ ಎಂಬ ಮೂವರು Friends leave ನಲ್ಲಿ ಏನು ಮಾಡೋಣ ಎಂದು ಯೋಚಿಸಿದರು.

 

ನೇಟ್ ಹೇಳಿದನು, "ಸಿಬಿ, ಜೆರಿ, ಪಕ್ಕದಲ್ಲಿ ವೆಕೇಶನ್ ಹೋಮ್ ಬೈಬಲ್ ಶಾಲೆಯನ್ನು ನಡೆಸಲಿದ್ದಾರೆ. ಹಾಡುಗಳು, ಕಥೆಗಳು, skit, ಸಾಕಷ್ಟು ತಿಂಡಿಗಳು ಹೀಗೆ ತುಂಬಾ Jollyಯಾಗಿ ಇರುತ್ತದಂತೆ. ಭಾರತಿ ಟೀಚರ್ ನಿಮ್ಮ freinds ಎಲ್ಲರನ್ನೂ ಕರೆದುಕೊಂಡು ಬನ್ನಿ ಎಂದು ಹೇಳಿದರು. ನಾವು ಮೂವರು ಒಟ್ಟಿಗೆ Jollyಯಾಗಿ ಇರೋಣ ಬನ್ನಿ" ಎಂದು ಕರೆದನು.

 

ಸಿಬಿ “ನಾನು ನನ್ನ ಮಾವನ ಮನೆಗೆ ಹೋಗುತ್ತೇನೆ ಬರೋದಿಲ್ಲ" ಎಂದು ಹೇಳಿಬಿಟ್ಟನು. ಜೆರಿ, “ನಾನು ಕೂಡ ನನ್ನ ತಾಯಿಯೊಂದಿಗೆ Vanನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದೇನೆ. ಅನೇಕ ಸ್ಥಳಗಳನ್ನು ಪ್ರಕೃತಿಯ ದೃಶ್ಯಾವಳಿಗಳನ್ನು ನೋಡಬಹುದು. ಜಲಪಾತದಲ್ಲಿ ಸ್ನಾನ ಮಾಡಬಹುದು, Boating ಹೋಗಬಹುದು" ಎಂದು ಹೇಳಿಬಿಟ್ಟನು. ಹೀಗೆ ಎಲ್ಲರೂ "Happy Holidays" ಹೇಳಿಬಿಟ್ಟು ಅವರವರ ಮನೆಗೆ ಹೋಗಿ ಬಿಟ್ಟರು.

 

ರಜೆ ಮುಗಿದು School ಗೆ ಬಂದರು. ನೇಟ್ VBS ನಲ್ಲಿ ತಾನು ಹಾಡಿದ ಹಾಡುಗಳನ್ನು ತುಂಬಾ ಸಂತೋಷವಾಗಿ ಹಾಡುತ್ತಾ, ಬಗೆಬಗೆಯ ತಿಂಡಿ ತಿನಿಸುಗಳನ್ನು ತಿಂದದ್ದನ್ನು, ತುಂಬಾ Freinds ಪರಿಚಯವಾಯಿತು, VBS ತುಂಬಾ ಖುಷಿಯಾಗಿತ್ತು ಎಂದು ಹೇಳಿದನು. ನನ್ನನ್ನು Picnic ಗೆ ಕೂಡ ಕರೆದುಕೊಂಡು ಹೋದರು ಎಂದು ಹೇಳಿದ ಕೂಡಲೇ ಸಿಬಿ ಮತ್ತು ಜೆರಿ ತುಂಬಾ ಚಿಂತಿತರಾಗಿದ್ದರು. ಸಿಬಿ ಹೇಳಿದನು, “ನನ್ನ ಮಾವನ ಮಗ ಅವನ ಯಾವುದೇ ಆಟದ ಸಾಮಾನುಗಳನ್ನು ಮುಟ್ಟಬಾರದು ಎಂದು ನನಗೆ ಹೇಳಿ ಬಿಟ್ಟನು. ಮಾವ ಕೂಡ, "ಹೊರಗೆ ಕರೆದುಕೊಂಡು ಹೋಗಲು ಸಮಯವಿಲ್ಲ" ಎಂದು ಹೇಳಿದರು. Beach, Zoo, Swimming pool ಹೀಗೆ ಒಂದು ಸ್ಥಳಕ್ಕೂ ಹೋಗಲು ಸಾಧ್ಯವಾಗಲಿಲ್ಲ" ಎಂದು ತುಂಬಾ ಬೇಸರದಿಂದ ಹೇಳಿದನು.

 

ಜೆರಿ ಹೇಳಿದನು, "ಪ್ರವಾಸಕ್ಕೆ ಬಂದ ಸ್ಥಳದಲ್ಲಿ ಉಳಿದವರೆಲ್ಲರೂ ತಮ್ಮ ಮಕ್ಕಳಿಗೆ ಸಾಕಷ್ಟು ಆಟದ ಸಾಮಾನುಗಳನ್ನು ಮತ್ತು ತಿಂಡಿಗಳನ್ನು ತೆಗೆದುಕೊಟ್ಟರು. ನನ್ನ ತಾಯಿಯ ಬಳಿ ಹಣವಿಲ್ಲದ್ದರಿಂದ ನನಗೆ ತುಂಬಾ ನಿರಾಶೆಯಾಯಿತು. ನನಗೆ ಆರೋಗ್ಯ ಸರಿಯಿಲ್ಲದ್ದರಿಂದ Boating, falls, ಪ್ರಕೃತಿ ದೃಶ್ಯಾವಳಿಗಳು ಒಂದನ್ನೂ Enjoy ಮಾಡಲು ಸಾಧ್ಯವಾಗಲಿಲ್ಲ” ಎಂದು ಬೇಸರದಿಂದ ಹೇಳಿದನು.

 

ನೇಟ್ ಹೇಳಿದನು, “ok freinds quarterly exam leave ನಲ್ಲಿ ಮಕ್ಕಳ ಶಿಬಿರವನ್ನು ನಡೆಸುತ್ತಾರಂತೆ. ನಾವು ಮೂವರೂ Jollyಯಾಗಿ ಹೋಗೋಣ ಚಿಂತಿಸಬೇಡಿ" ಎಂದನು. ಮುದ್ದು ಪುಟಾಣಿಗಳೇ ನೀವು ಕೂಡ ರಜೆಯಲ್ಲಿ ಪಕ್ಕದಲ್ಲಿ ನಡೆಯುವ VBS ಗ ಹೋಗಿ ಖುಷಿಯಾಗಿರಲು ತೀರ್ಮಾನಿಸಿಬಿಟ್ರಾ Ok! Bye! God Bless you! 

- Sis. A. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)