Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 19.07.2024

ಧೈನಂದಿನ ಧ್ಯಾನ(Kannada) – 19.07.2024

 

ನಿನಗಾಗಿ

 

"ಈ ನನ್ನ ಮಗನು... ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು…" - ಲೂಕ 15:24

 

ಒಬ್ಬ ಯುವಕ ಮತ್ತು ಯೇಸು ಮಾತನಾಡುತ್ತಾ ಸುಂದರವಾದ ದಾರಿಯಲ್ಲಿ ನಡೆಯುತ್ತಿದ್ದರು. ದೇವರೊಂದಿಗೆ ಮಾತನಾಡಿದ ಮಾತುಗಳು ಆ ಯುವಕನಿಗೆ ಸಂತಸ ನೀಡಿತು. ಆದರೆ ಸ್ವಲ್ಪ ದೂರದಲ್ಲಿ ಅವನು ದಾರಿಯಲ್ಲಿ ವರ್ಣರಂಜಿತ ದೀಪಗಳು ಮತ್ತು ವರ್ಣರಂಜಿತ ಮನಸ್ಸಿಗೆ ಮುದ ನೀಡುವ ವಸ್ತುಗಳನ್ನು ನೋಡಿದನು. ತಕ್ಷಣವೇ ಅವನು ಯೇಸುವನ್ನು ಹಿಂತಿರುಗಿ ನೋಡಿ, "ಯೇಸು, ಇಲ್ಲಿ ಒಂದು ಮಾರ್ಗವಿದೆ, ಬಾ, ಹೋಗೋಣ" ಎಂದು ಹೇಳಿದನು. ಯೇಸು ಹೇಳಿದರು, "ಅಲ್ಲಿಗೆ ಹೋಗಬೇಡ, ಅದು ನಿನ್ನನ್ನು ನಿತ್ಯತ್ವಕ್ಕೆ ಕರೆದೊಯ್ಯುವುದಿಲ್ಲ" ಎಂದರು. ಹುಡುಗನಿಗೆ ಕೋಪ ಬಂತು. "ನೀವು ಬೇಕಾದರೆ ಬರಬೇಡಿ, ಆದರೆ ನಾನು ಹೋಗುತ್ತಿದ್ದೇನೆ" ಎಂದು ಅವನು ಯೇಸುವಿನ ಕೈಗಳನ್ನು ಬಿಟ್ಟು ಒಬ್ಬನೇ ಆ ದಾರಿಯಲ್ಲಿ ನಡೆದನು. ಅವನು ಕೆಲವು ದಿನಗಳ ಕಾಲ ಲವಲವಿಕೆಯಿಂದ ಸುತ್ತಾಡಿದನು. ಆಗ ಅವನ ಹೃದಯದಲ್ಲಿ ಶೂನ್ಯತೆ ನೆಲೆಸಿತು. ಅವನು ಸ್ವಲ್ಪ ಯೋಚಿಸಿದನು. ಅತ್ತನು. ಏನು ಮಾಡಬೇಕೆಂದು ತಿಳಿಯದೆ ಬಂದ ದಾರಿಯಲ್ಲೇ ನಡೆದನು. ಅವನು ಯೇಸುವಿನೊಂದಿಗಿನ ತನ್ನ ದಿನಗಳನ್ನು ನೆನಪಿಸಿಕೊಳ್ಳುತ್ತಾ, "ಅಯ್ಯೋ, ನಾನು ಅವರನ್ನು ತೊರೆದೆನಲ್ಲಾ" ಎಂದು ಕಣ್ಣೀರು ಹಾಕುತ್ತಾ ನಡೆದನು. ಏನು ಆಶ್ಚರ್ಯ! ಯೇಸುವನ್ನು ಅವನು ಬಿಟ್ಟುಹೋದ ಸ್ಥಳದಲ್ಲಿಯೇ ಅವರು ಅವನಿಗಾಗಿ ಕಾಯುತ್ತಿದ್ದರು. ಅವನು ಓಡಿಹೋಗಿ ಯೇಸುವನ್ನು ತಬ್ಬಿಕೊಂಡು ಅತ್ತನು. ಎಂತಹ ಪ್ರೀತಿ! ಯೇಸುವಿನ ಪ್ರೀತಿ! ಇದರಂತೆಯೇ ಸತ್ಯವೇದದಲ್ಲೂ ಲೂಕ 15 ನೇ ಅಧ್ಯಾಯದಲ್ಲಿ, ಕಿರಿಯ ಮಗ ತನಗೆ ಬರಬೇಕಾದ ಆಸ್ತಿಯನ್ನು ತೆಗೆದುಕೊಂಡು ಅದನ್ನು ಅನುಭವಿಸಿದ ನಂತರ ಎಲ್ಲವೂ ಕಳೆದುಕೊಂಡ ಮೇಲೆ ಅವನಿಗೆ ಬುದ್ಧಿ ಬಂತು. ಅವನು ಅಳುತ್ತಾ ತನ್ನ ತಂದೆಯ ಮನೆಗೆ ಹಿಂದಿರುಗಿದನು. ಅವನ ತಂದೆ ತನ್ನ ಮಗ ಬರುತ್ತಿರುವುದನ್ನು ನೋಡಿ ಓಡೋಡಿ ಬಂದು ಅವನನ್ನು ತಬ್ಬಿಕೊಂಡು ಮುತ್ತಿಟ್ಟನು. ಸಂತೋಷವಾಗಿದ್ದರು.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ, ನೀವು ಒಂದು ದಿನ ಯೇಸುವಿನೊಂದಿಗೆ ನಡೆದೆ. ಸಂತೋಷವಾಗಿದ್ದೆ. ಆದರೆ ಇವತ್ತು? ಈಗ? ನಿಮ್ಮ ಸಂತೋಷ ಎಲ್ಲಿದೆ? ನಿಮ್ಮ ಮಾರ್ಗವನ್ನು ಯಾರು ಬದಲಾಯಿಸಿದರು? ಮನುಷ್ಯರಾ? ಹಣವಾ? ಸೆಲ್ ಫೋನಾ? ಕೆಲಸವಾ? ಮತ್ತೇನು? ಯೋಚಿಸಿ ನೋಡಿ ಇನ್ನೂ ಏನೂ ಮುಗಿದಿಲ್ಲ. ಯೇಸು ಕ್ರಿಸ್ತನು ನಿನಗಾಗಿ ಕಾಯುತ್ತಿದ್ದಾರೆ. ಅವರು ನಿನ್ನನ್ನು ಅಪ್ಪಿಕೊಳ್ಳಲು ಎರಡೂ ಕೈಗಳನ್ನು ಚಾಚಿ ನಿಂತಿದ್ದಾರೆ. ಈ ಪ್ರೀತಿಯ ದೇವರು ಪ್ರಪಂಚದ ಪ್ರತಿಯೊಬ್ಬ ರಕ್ಷಣೆ ಹೊಂದದ ವ್ಯಕ್ತಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಕಾಯುತ್ತಿದ್ದಾರೆ ಚಿಕ್ಕವರ ನಡುವೆ, ಹಳ್ಳಿಗಳ ನಡುವೆ ನಿಂತು ಅಳುತ್ತಿದ್ದಾರೆ. ನೀನು ಬಂದು ಅವರ ಕಣ್ಣೀರು ಒರೆಸುವೆಯಾ? ಯೋಚಿಸೋಣ! ಕಾರ್ಯನಿರ್ವಹಿಸೋಣ!!

- Mrs. ಭುವಿತಾ ಎಬಿನೇಜರ್

 

ಪ್ರಾರ್ಥನಾ ಅಂಶ:

ನಮ್ಮ ಪತ್ರಿಕಾ ಸೇವೆಗಳ ಮೂಲಕ ಅನೇಕರು ಮುಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)