Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 24.03.2023

ಧೈನಂದಿನ ಧ್ಯಾನ(Kannada) – 24.03.2023

 

ಶತಾಧಿಪತಿ

 

"ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ" – 1 ಕೊರಿಂಥ. 10:24

 

ಇಂದಿನ ಸತ್ಯವೇದ ಭಾಗದಲ್ಲಿ, ನಾವು ನೋಡುತ್ತಿರುವ ಶತಾಧಿಪತಿ ರೋಮನ್ ಸೈನ್ಯದ ನಾಯಕ. ಯೇಸು ಕ್ರಿಸ್ತನು ಅವನನ್ನು ಹೊಗಳುವಷ್ಟರ ಮಟ್ಟಿಗೆ ಅವನಲ್ಲಿ ಅನೇಕ ಒಳ್ಳೆಯ ಗುಣಗಳು ಕಂಡುಬಂದವು. ನಾವು ಅವುಗಳ ಬಗ್ಗೆ ಯೋಚಿಸಿ ಆ ಗುಣಗಳು ನಮ್ಮಲ್ಲಿ ಕೊರತೆಯಿದ್ದರೆ, ನಾವು ಅವುಗಳನ್ನು ಪಡೆಯಲು ಪ್ರಯತ್ನಿಸೋಣವಾ?

 

ಸೇವಕನ ಮೇಲೆ ಕಾಳಜಿ: ಸಮಾಜದಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಈ ಶತಾಧಿಪತಿ ಸರ್ಕಾರಿ ಅಧಿಕಾರಿಯೂ ಆಗಿದ್ದ. ಇವರ ಆದೇಶವನ್ನು ಪಾಲಿಸುವವರು ಅನೇಕರಿದ್ದಾರೆ. ತುಂಬಾ ಅಧಿಕಾರ ಮತ್ತು ಸ್ಥಾನಮಾನವನ್ನು ಹೊಂದಿದ್ದ ಅವರು ತನ್ನ ಸೇವಕರ ಮೇಲೂ ಹೆಚ್ಚು ಅಕ್ಕರೆಯುಳ್ಳವರಾಗಿದ್ದರು. ಅವರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುತ್ತಿದ್ದರು. ಆದುದರಿಂದಲೇ ಯೇಸು ಕಪೆರ್ನೌಮಿಗೆ ಬರುತ್ತಿದ್ದಾರೆಂದು ತಿಳಿದಾಗ ಆತನನ್ನು ಭೇಟಿಯಾಗಲು ಹೋಗಿ ತನ್ನ ಸೇವಕನ ಸೌಖ್ಯಕ್ಕಾಗಿ ಬೇಡಿಕೊಂಡರು. ತನ್ನ ಜೀವನ ಮತ್ತು ಕುಟುಂಬದ ವಿಷಯಗಳಿಗಾಗಿ ಯೇಸುವಿನ ಬಳಿ ಬೇಡಿಕೊಳ್ಳಲು ಬಹುಶಃ ಅನೇಕ ವಿನಂತಿಗಳು ಇದ್ದಿರಬಹುದು. ಆದರೆ ಅದಕ್ಕೂ ಮೀರಿ ನಿಸ್ವಾರ್ಥತೆಯಿಂದ ಕಾಣಲ್ಪಟ್ಟರು.

 

ತನ್ನನ್ನು ತಗ್ಗಿಸಿಕೊಂಡರು: ಸೇವಕನನ್ನು ಗುಣಪಡಿಸಲು ತನ್ನ ಮನೆಗೆ ಬರಲು ಸಿದ್ಧನಾಗಿದ್ದ ಯೇಸು ಕ್ರಿಸ್ತನ ಬಳಿ ಶತಾಧಿಪತಿಯು, “ದೇವರೇ! ನೀವು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ; ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕನು ಸ್ವಸ್ಥನಾಗುತ್ತಾನೆ" ಎಂದರು. ತನ್ನ ಸೇವಕನಿಗಾಗಿಗೂ ಅಷ್ಟೊಂದು ಭಾರವುಳ್ಳ ಅವರು ಖಂಡಿತವಾಗಿಯೂ ಸಮಾಜದಲ್ಲಿ ಒಳ್ಳೆಯವನೆಂದು ಹೆಸರು ಹೊಂದಿದ್ದವರೇ ಆಗಿರಬೇಕು. ಆದರೆ ಅವರ ಹೃದಯದಲ್ಲಿ ನಾನು ಕೊರತತೆಯುಳ್ಳವನು ಮತ್ತು ಪಾಪಿ ಎಂಬ ಸ್ಪಷ್ಟ ಆಲೋಚನೆ ಇತ್ತು. ಆದುದರಿಂದಲೇ ಕರ್ತನೇ, ನೀವು ನನ್ನ ಮನೆಗೆ ಬರಲು ನಾನು ಅರ್ಹನಲ್ಲ ಎಂದು ಹೇಳಿದರು. ಸಾಮಾನ್ಯವಾಗಿ ಮನುಷ್ಯನ ಪ್ರಾಕೃತಿಕವಾದ ಸ್ವಭಾವವೇನೆಂದರೆ, ಪ್ರಸಿದ್ಧವಾದ ಸೇವಕರೋ ಅಥವಾ ಬೇರೆ ಯಾರಾದರೂ ನಮ್ಮ ಮನೆಗೆ ಬರುವುದಾಗಿ ಹೇಳಿಬಿಟ್ಟರೆ ನಾವು ಎಂದಿಗೂ ಅದನ್ನು ನಿರಾಕರಿಸುವುದಿಲ್ಲ. ಕಾರಣ, “ಇವರು ನಮ್ಮ ಮನೆಗೆ ಬಂದಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದಾರೆ" ಎಂದು ನಾವು ಅನೇಕ ಜನರಿಗೆ ಹೇಳಲು ಇಷ್ಟಪಡುತ್ತೇವೆ. ಆದರೆ ಶತಾಧಿಪತಿ ನಮ್ಮಂತಲ್ಲ; ಅವರು ತನ್ನನ್ನು ತಗ್ಗಿಸಿಕೊಂಡರು.

 

ಪ್ರಿಯರೇ! ನಮ್ಮ ಕೈಕೆಳಗೆ ಅಥವಾ ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಆರೋಗ್ಯದ ಮೇಲೆ ನಾವು ಕಾಳಜಿ ವಹಿಸುತ್ತೇವೆಯೇ! ಅಥವಾ "ನಿನಗೆ ಹುಷಾರಿಲ್ಲವಾ? ಆದರೂ "ನನ್ನ ಕೆಲಸ ಮುಗಿಸಿ ಬಿಟ್ಟು ಆಮೇಲೆ ಹೋಗಿ ಮಲಗು" ಎಂದು ಹೇಳುವವರಾಗಿದ್ದೇವಾ? ನಂತರ, ನಾವು ನಮ್ಮ ಬಗ್ಗೆ ಏನಂದುಕೊಂಡಿದ್ದೇವೆ? ಇತರರು ನಮ್ಮನ್ನು ಹೊಗಳುವುದರಿಂದ ನಾನು ತುಂಬಾ ಒಳ್ಳೆಯವನು ಅಂದುಕೊಂಡಿದ್ದೇವೆಯೇ! ಅಥವಾ ಯೇಸುವಿನ ದೃಷ್ಟಿಯಲ್ಲಿ ನನ್ನ ಹೃದಯವು ಹೇಗಿದೆ ಎಂದು ತಿಳಿದು ನಮ್ಮನ್ನು ತಗ್ಗಿಸಿಕೊಳ್ಳುತ್ತೇವಾ! ಯೋಚಿಸೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಪ್ರತಿ ಸೋಮವಾರ ನಡೆಯುವಂತಹ ಪೂರ್ಣ ರಾತ್ರಿ ಪ್ರಾರ್ಥನೆಯಲ್ಲಿ ಪವಿತ್ರಾತ್ಮನು ಶಕ್ತಿಯುತವಾಗಿ ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482


Comment As:

Comment (0)