ಧೈನಂದಿನ ಧ್ಯಾನ(Kannada) – 12.05.2025
ಧೈನಂದಿನ ಧ್ಯಾನ(Kannada) – 12.05.2025
ಶುಭ ಸಂದೇಶವನ್ನು ಹೇಳೋಣವಾ?
"ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ?..." - ರೋಮಾ 10:14
ಒಂದು ವಾರದಿಂದ, ಲಿಡಿಯಾ ತನ್ನ ಸಹ ಶಿಕ್ಷಕರೊಂದಿಗೆ ಬೀದಿ ಬೀದಿಗೆ, ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಯಾವುದೇ ಅರ್ಹತೆಗಳಿಲ್ಲದೆ, ತನ್ನ ಶಾಲಾ ಶಿಕ್ಷಣವನ್ನು ಮುಗಿಸಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು, ಅದು ಅವಳಿಗೆ ತುಂಬಾ ಇಷ್ಟವಾದ ಕೆಲಸವಾಗಿತ್ತು. ಆ ದಿನ, ಮಧ್ಯಾಹ್ನ 1:00 ಗಂಟೆ ಸುಮಾರಿಗೆ, ಅವಳ ತಾಯಿ ಇದ್ದಕ್ಕಿದ್ದಂತೆ ಅವಳನ್ನು ಹುಡುಕಿಕೊಂಡು ಬಂದು, "ಲಿಡಿಯಾ, ಶಿಕ್ಷಕರ ತರಬೇತಿಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ ಬಾ, ಅರ್ಜಿಯನ್ನು ತೆಗೆದುಕೊಳ್ಳೋಣ" ಎಂದು ಹೇಳಿದರು. ಅವಳಿಗೆ ಕೋಪವೂ ಮತ್ತು ಅದೇ ಸಮಯದಲ್ಲಿ ಸಹಾನುಭೂತಿಯೂ ಏರ್ಪಟ್ಟಿತು. ಯಾಕಮ್ಮಾ, ನಮ್ಮ ಕುಟುಂಬ ಇರುವ ಈ ಪರಿಸ್ಥಿತಿಯಲ್ಲಿ ಇದು ಅಗತ್ಯವಾ? ಎಂದು ಹೇಳಿದರೂ, ತಕ್ಷಣ ಅಮ್ಮ ಹೇಳಿದರು, ಅದೆಲ್ಲಾ ಬಿಡು, ನಿನ್ನ ಭವಿಷ್ಯದ ಬಗ್ಗೆ ಯೋಚಿಸು, ತಕ್ಷಣ ಹೊರಡು" ಎಂದರು. ಇದು ನಡೆದು ಇಪ್ಪತ್ತು ವರ್ಷಕ್ಕೂ ಮೇಲಾಯಿತು. ಈಗ ಲಿಡಿಯಾ ಸರ್ಕಾರಿ ಶಾಲಾ ಶಿಕ್ಷಕಿ. ತನ್ನ ತಾಯಿಯ ನೆನಪಾಗಿ ಅವಳ ಕಣ್ಣಲ್ಲಿ ನೀರು ಬಂತು. ಅವಳು ದೇವರಿಗೆ ಧನ್ಯವಾದ ಹೇಳಿದಳು. ಆ ದಿನ ನನ್ನ ತಾಯಿ ಬಂದು ಅರ್ಜಿ ಸಲ್ಲಿಸುತ್ತಿರುವುದಾಗಿ ಹೇಳದೇ ಇದ್ದಿದ್ದರೆ, ನಾನು ಅದನ್ನು ಕೇಳಿಸಿಕೊಳ್ಳದೇ ಇದ್ದಿದ್ದರೆ, ನನ್ನ ಜೀವನ ಹೇಗಿರುತ್ತಿತ್ತು? ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು.
ಸಿರಿಯಾ ಸೈನ್ಯದಿಂದ ಮುತ್ತಿಗೆ ಹಾಕಲ್ಪಟ್ಟ ಸಮಾರ್ಯ ದೇಶದಲ್ಲಿ ನಿರಂತರ ಕ್ಷಾಮವಿತ್ತು. ಕ್ಷಾಮವು ಎಷ್ಟು ಭೀಕರವಾಗಿತ್ತೆಂದರೆ ಅವರಿಗೆ ಹುಟ್ಟಿದ ಮಕ್ಕಳನ್ನು ಸಹ ಕೊಂದು ತಿನ್ನಲಾಗುತ್ತಿತ್ತು (2 ಅರಸುಗಳು 6:28). ಊರಿನಲ್ಲಿರುವವರ ಪರಿಸ್ಥಿತಿ ಹೀಗಿದ್ದರೆ, ಕುಷ್ಠರೋಗದಿಂದಾಗಿ ಊರಿಂದ ಹೊರಗೆ ಹಾಕಲ್ಪಟ್ಟವರ ಪರಿಸ್ಥಿತಿಯನ್ನು ಪರಿಗಣಿಸಿ. ಅಲ್ಲಿದ್ದ ನಾಲ್ವರು ಕುಷ್ಠರೋಗಿಗಳು ನಾವು ಹಸಿವಿನಿಂದ ಸಾಯುವುದಕ್ಕಿಂತ ಶತ್ರುಗಳು ವಾಸಿಸುತ್ತಿದ್ದ ಗುಡಾರಕ್ಕೆ ಹೋಗುವುದು ಮೇಲು ಎಂದು ಹೇಳಿ, ಸಿರಿಯಾ ಪಾಳೆಯದೊಳಗೆ ಹೋದರು. ಕರ್ತನು ಸಿರಿಯಾ ಸೈನ್ಯಕ್ಕೆ ರಥಗಳ ಶಬ್ದವನ್ನೂ ಕುದುರೆಗಳ ಶಬ್ದವನ್ನೂ ಮಹಾಸೈನ್ಯದ ಶಬ್ದವನ್ನೂ ಕೇಳುವಂತೆ ಮಾಡಿದರು. ಶತ್ರುಗಳು ಭಯಭೀತರಾಗಿ ಎಲ್ಲವನ್ನೂ ತ್ಯಜಿಸಿ ಓಡಿಹೋದರು. ಆ ಕುಷ್ಠರೋಗಿಗಳು ತಮ್ಮ ದೇಶಕ್ಕೆ ಹಿಂತಿರುಗಿ ಈ ಶುಭವಾರ್ತೆಯನ್ನು ಸಾರಿದರು. ದೇಶದ ಕ್ಷಾಮವು ಬದಲಾಗಿ ಸಂತೋಷವು ಉಂಟಾಯಿತು. ಕುಷ್ಠರೋಗಿಗಳು ಸಮಾರ್ಯ ದೇಶಕ್ಕೆ ಸಾರಿದ ಶುಭ ಸುದ್ದಿಯು ದೇಶದ ಕ್ಷಾಮವನ್ನು ಬದಲಾಯಿಸಿತು.
ಅದರಂತೆಯೇ, ಪ್ರಿಯರೇ! ಲಿಡಿಯಾಳ ತಾಯಿ ಅವಳಿಗೆ ಒಳ್ಳೆಯ ಸುದ್ದಿ ಹೇಳಿದಳು. ಅದೇರೀತಿ ಯೇಸು ಕ್ರಿಸ್ತನನ್ನು ತಿಳಿದಿರುವ ಪ್ರತಿಯೊಬ್ಬರಿರೂ ಇತರರೊಂದಿಗೆ ಹಂಚಿಕೊಳ್ಳಲು ಒಂದು ಶುಭ ಸುದ್ದಿ ಇದೆ. ಹೌದು, "ಯೇಸುಕ್ರಿಸ್ತನ ರಕ್ತವು ಎಲ್ಲಾ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸುತ್ತದೆ." ಆತನು, ಆತನೊಬ್ಬನೇ, ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತವು ಮಾತ್ರವೇ, ನಮ್ಮನ್ನು ಪಾಪದ ಕೆಸರಿನಿಂದ ಶುದ್ಧೀಕರಿಸಿ, ನಮ್ಮನ್ನು ಹೊಸ ಮನುಷ್ಯರನ್ನಾಗಿ ಮಾಡುತ್ತದೆ. ಹಲ್ಲೇಲೂಯಾ! ಈ ಶುಭಸುದ್ದಿ ನಿಮಗಾಗಿಯೇ ತಾನೇ ನಂಬುತ್ತೀರಾ? ವಿಧೇಯರಾಗಿ, ಆತನ ಬಳಿಗೆ ಬಂದು ಸೇರಿರಿ. ಹೊಸ ಜೀವನವನ್ನು ಪಡೆಯಿರಿ. ಆಮೆನ್.
- Mrs. ಎಮೀಮಾ ಸೌಂದರರಾಜನ್
ಪ್ರಾರ್ಥನಾ ಅಂಶ:
6,000 ಹಳ್ಳಿಗಳಲ್ಲಿ ವಿಬಿಎಸ್ ಸೇವೆ ಮಾಲು ಸರಿಯಾದ ಸಮಯ ಮತ್ತು ಸಂದರ್ಭಗಳನ್ನು ದೇವರು ಒದಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482