ಧೈನಂದಿನ ಧ್ಯಾನ(Kannada) – 11.05.2025
ಧೈನಂದಿನ ಧ್ಯಾನ(Kannada) – 11.05.2025
ಮೇಲೆ ಕರಡಿ, ಕೆಳಗೆ ಸಿಂಹ.
"ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ [ದೇಶದಲ್ಲಿ] ವಾಸವಾಗಿರುವಿ" - ಕೀರ್ತನೆ 37:27
Hello ಮುದ್ದು ಪುಟಾಣಿಗಳೇ!ನಿಮಗೆಲ್ಲಾ Animals ಅಂದ್ರೆ ಇಷ್ಟಾನಾ? ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳ ಹೆಸರನ್ನು ಹೇಳಿ ನೋಡೋಣ. ಸಿಂಹ, ಹುಲಿ, ಕರಡಿ, ಆನೆ, ಜಿಂಕೆ. ತುಂಬಾ ಚೆನ್ನಾಗಿ ಹೇಳುದ್ರಿ. ಇಂದು ನಾವು ಎಲ್ಲಾ ರೀತಿಯ ಪ್ರಾಣಿಗಳನ್ನು ಬೇಟೆಯಾಡುವ ಇಬ್ಬರು ಸಹೋದರರ ಬಗ್ಗೆ ಒಂದು ಕಥೆಯನ್ನು ಕೇಳಲಿದ್ದೇವೆ.
ರವಿ ಮತ್ತು ರಾಜ ಆಪ್ತ ಸ್ನೇಹಿತರು. ಅವರು ಬೇಟೆಯಾಡುವುದರಲ್ಲಿಯೂ ಅತ್ಯುತ್ತಮರು. ಒಂದು ದಿನ, ಇಬ್ಬರೂ ಬೇಟೆಯಾಡಲು ಕಾಡಿಗೆ ಹೋದರು. ಪ್ರಾಣಿಗಳನ್ನು ಬೇಟೆಯಾಡುವ ಆತುರದಲ್ಲಿ ಇಬ್ಬರೂ ಬೇರ್ಪಟ್ಟರು. ರವಿ ಕಾಡಿನೊಳಗೆ ತುಂಬಾ ದೂರ ಹೋಗಿ ಪ್ರಾಣಿಗಳನ್ನು ಹುಡುಕಲು ಪ್ರಾರಂಭಿಸಿದನು. ಆ ಕ್ಷಣದಲ್ಲಿ, ಇದ್ದಕ್ಕಿದ್ದಂತೆ ಸಿಂಹದ ಘರ್ಜನೆಯ ಶಬ್ದವನ್ನು ಕೇಳಿ ತಿರುಗಿ ನೋಡಿದನು. ಸಿಂಹವು ಅವನ ಕಡೆಗೆ ಬಂದಿತು. ರವಿ ಭಯದಲ್ಲಿ ಒಂದೇ ಓಟ ಓಡಿದನು. ಹಿಂತಿರುಗಿ ನೋಡದೆ ಓಡಿ ಒಂದು ಮರ ಹತ್ತಿಬಿಟ್ಟನು. ಸಿಂಹವು ಅವನನ್ನು ಹಿಂಬಾಲಿಸಿ ಮರದ ಕೆಳಗೆ ನಿಂತಿತು. ರವಿ ನಿಟ್ಟುಸಿರು ಬಿಟ್ಟು ಮೇಲಕ್ಕೆ ನೋಡಿದ. ಅಲ್ಲಿ, ಒಂದು ಕರಡಿ ಗಟ್ಟಿಮುಟ್ಟಾದ ಕೊಂಬೆಯ ಮೇಲೆ ಮಲಗಿತ್ತು. ಕೆಳಗೆ ಸಿಂಹ, ಮೇಲೆ ಕರಡಿ, ಇದನ್ನು ನೋಡಿದ ರವಿಯ ಹೃದಯ, ಕೈಗಳು ಮತ್ತು ಕಾಲುಗಳು ನಡುಗಿದವು. ಏನು ಮಾಡಬೇಕೆಂದು ತಿಳಿಯದೆ ದಿಗ್ಭ್ರಮೆಗೊಂಡನು.
ಆ ಸಮಯದಲ್ಲಿ, ಸಿಂಹವು ಕರಡಿಯನ್ನು ನೋಡಿ ಹೇಳಿತು, ನಮಗೆಲ್ಲಾ ಈ ಮನುಷ್ಯರೇ ಶತ್ರುಗಳು. ಹಾಗಾಗಿ, ಅವನನ್ನು ಕೆಳಗೆ ತಳ್ಳಿಬಿಡು ನಾವಿಬ್ಬರೂ ಹಂಚಿಕೊಂಡು ತಿನ್ನೋಣ ಎಂದಿತು. ಕರಡಿ ಇಲ್ಲ , ಇಲ್ಲ ಅವನು ತಿಳಿದೋ ತಿಳಿಯದೆಯೋ ನನ್ನ ಬಳಿಗೆ ಬಂದುಬಿಟ್ಟ ಅವನಿಗೆ ನಾನು ಹಾನಿ ಮಾಡುವುದಿಲ್ಲ ಎಂದು ಹೇಳಿತು. ಸಿಂಹವು ಕೋಪದಿಂದ ಮರದ ಕೆಳಗೆ ನಿಂತಿತ್ತು. ಸ್ವಲ್ಪ ಸಮಯದ ನಂತರ, ಕರಡಿ ನಿದ್ರೆಗೆ ಜಾರಿತು. ಈಗ ಸಿಂಹ ರವಿಯನ್ನು ನೋಡಿ, "ಹೇ ಮನುಷ್ಯ, ನನಗೆ ಈಗ ಮಾಂಸ ಬೇಕು. ಹಾಗಾಗಿ ಆ ಮಲಗಿರುವ ಕರಡಿಯನ್ನು ಕೆಳಗೆ ತಳ್ಳು, ನಾನು ಅದನ್ನು ತಿಂದು ಬಿಟ್ಟು ಹೊರಟು ಹೋಗುತ್ತೇನೆ. ನೀನು ಕೂಡ ಭಯವಿಲ್ಲದೆ ಮನೆಗೆ ಹೋಗಬಹುದು" ಎಂದು ಹೇಳಿತು. ಇದು ರವಿಗೆ ಒಳ್ಳೆಯ ಐಡಿಯಾ ಆಗಿತ್ತು. ಆದ್ದರಿಂದ ಅವನು ಕರಡಿಯನ್ನು ಕೆಳಗೆ ತಳ್ಳಲು ಅದರ ಪಕ್ಕಕ್ಕೆ ಹೋದನು. ಅಷ್ಟೊತ್ತಿಗೆ ಕರಡಿ ಎಚ್ಚರಗೊಂಡಿತು. ತಕ್ಷಣವೇ, ಸಿಂಹವು ನೋಡಿದ್ಯಾ ಈ ಮನುಷ್ಯರ ಬುದ್ಧಿಯನ್ನು ತೋರಿಸಿಬಿಟ್ಟ. ಇನ್ನೂ ಏಕೆ ಯೋಚಿಸುತ್ತಿದ್ದೀಯ? ತಡಮಾಡದೆ ತಕ್ಷಣ ತಳ್ಳಿಬಿಡು ಎಂದು ಹೇಳಿತು. ತಕ್ಷಣ ಕರಡಿ, "ಇಲ್ಲ, ಅವನು ನನಗೆ ಹಾನಿ ಮಾಡಿದರೂ ಪರವಾಗಿಲ್ಲ, ನಾನು ನಂಬಿಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿತು. ಸಿಂಹವು ಹೊರಟು ಹೋಯಿತು. ಇದನ್ನೆಲ್ಲಾ ನೋಡುತ್ತಿದ್ದ ರವಿಗೆ ತನ್ನ ತಪ್ಪಿನ ಅರಿವಾಯಿತು, ಕರಡಿಗೆ ಕ್ಷಮೆಯಾಚಿಸಿ ಮನೆಗೆ ಹಿಂತಿರುಗಿದನು.
ತಮ್ಮ ತಂಗಿ! ನಾವು ಎಂದಿಗೂ ಇತರರಿಗೆ ಹಾನಿ ಮಾಡಬಾರದು. ಯೇಸಪ್ಪನಿಗೆ ಇದು ಇಷ್ಟವೇ ಇಲ್ಲ. ಅದೂ ಕೂಡ, ನಮಗೆ ಒಳ್ಳೆಯದನ್ನು ಮಾಡಿದವರಿಗೆ ನಾವು ಎಂದಿಗೂ ಹಾನಿ ಮಾಡುವ ಬಗ್ಗೆ ಯೋಚಿಸಲೇ ಬಾರದು. O,k ನಾ.
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482