
ಧೈನಂದಿನ ಧ್ಯಾನ(Kannada) – 15.01.2021
ಧೈನಂದಿನ ಧ್ಯಾನ(Kannada) – 15.01.2021
ಬ್ಲಾಕ್ ಕಾಫಿ
ಅವರು ಕೂತುಕೊಂಡು ಊಟಮಾಡುತ್ತಿರುವಾಗ ಯೇಸು – ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು, ಅವನು ನನ್ನ ಸಂಗಡ ಊಟಮಾಡುವವನೇ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.
“ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ;...” - ಮಾರ್ಕನು 14:8
ಕೆಲವು ವರ್ಷಗಳ ಮುಂಚೆ ಶಿವಗಂಗೈ ಜಿಲ್ಲೆಯಲ್ಲಿ ಒಂದು ವ್ಯಾನ್ ನಲ್ಲಿ ಗುಂಪಾಗಿ ಸೇವೆಗೆ ಹೋಗಿದ್ದೆವು. ಹಳ್ಳಿ ಹಳ್ಳಿಯಾಗಿ ಸುವಾರ್ತೆಯನ್ನು ಪ್ರಕಟಿಸುತ್ತಾ ಬಂದೆವು. ಒಂದು ನಿರ್ದಿಷ್ಟವಾದ ಹಳ್ಳಿಯಲ್ಲಿ ಕೈ ಪ್ರತಿಗಳನ್ನು ಕೊಟ್ಟ ನಂತರ ಕಿರಿಯರ ಸೇವೆ ಮಾಡುತ್ತಿದ್ದೆವು. ಸೇವೆ ಮುಗಿಯಿತು ಹೊರಡುವ ಸಮಯದಲ್ಲಿ ಚಿತ್ರ ಎಂಬ ಒಂದು ಸಹೋದರಿ ತನ್ನ ಮನೆಗೆ ಬಂದು ಪ್ರಾರ್ಥಿಸುವಂತೆ ಕೇಳಿಕೊಂಡರು. ನಮ್ಮಲ್ಲಿ ಕೆಲವರು ಅವರ ಮನೆಗೆ ಹೋಗಿ ಪ್ರಾರ್ಥಿಸಿದೆವು. ನಮ್ಮನ್ನು ಚಿತ್ರ ಮತ್ತು ಜೊತೆ ಇದ್ದ ಅಕ್ಕಪಕ್ಕದ ಮನೆಯವರು ಉಪಚರಿಸಿದ್ದನ್ನು ಎಂದಿಗೂ ಮರೆಯಲಾಗುವುದಿಲ್ಲ. ಅದರಲ್ಲಿ ನಿರ್ದಿಷ್ಟವಾಗಿ ಬ್ಲಾಕ್ ಕಾಫಿ, ಚಕ್ಕಲಿ ಅಡಗಿದೆ. ನಾವು ಹೊರಡುವಾಗ ನನ್ನ ಬಳಿ “ಈ ದಾರಿಯಲ್ಲಿ ಹೋಗುವಾಗ ಖಂಡಿತವಾಗಿ ನಮ್ಮ ಮನೆಗೆ ಬಂದು ಪ್ರಾರ್ಥಿಸಿ ಹೋಗಿರಿ” ಎಂದು ಚಿತ್ರ ಮನೆಯವರು ಕೇಳಿಕೊಂಡರು. ಸತತವಾಗಿ ಅದನ್ನು ನಮ್ಮ ಕಾರ್ಯನಿರ್ವಹಿಸುವ ಗ್ರಾಮವಾಗಿ ಮಾಡಿಕೊಂಡು ಪ್ರತಿವಾರವೂ ಹೋಗಿ ಸೇವೆ ಮಾಡುತ್ತಿದ್ದೆವು. ಅಲ್ಲಿ ಸುಂದರವಾದ ಸಭೆಯೊಂದನ್ನು ದೇವರ ನಾಮಕ್ಕೆ ಮಹಿಮೆಯಾಗಿ ಸ್ಥಾಪಿಸಲಾಯಿತು.
ಯೇಸುಕ್ರಿಸ್ತನು ಸೇವೆಗೆ ಹೋಗುವ ದಾರಿಯಲ್ಲಿ ಬೆಥಾನಿಯಾದಲ್ಲಿರುವ ಸೀಮೋನನ ಮನೆಗೆ ಹೋಗಿದ್ದನ್ನು ಓದುತ್ತೇವೆ. ಅಲ್ಲಿ ಒಂದು ಸ್ತ್ರೀ ಉತ್ತಮವಾದ, ಬೆಲೆಯುಳ್ಳ ತೈಲವನ್ನು ಯೇಸುವಿನ ಪಾದಗಳಿಗೆ ಹಚ್ಚಿದಳು. ಅಲ್ಲಿದ್ದ ಎಲ್ಲರಿಗಿಂತ ತನ್ನ ಬಳಿ ಇದ್ದದ್ದನ್ನು ದೇವರಿಗೆಂದು ಖರ್ಚು ಮಾಡಿದ ಆ ಸ್ತ್ರೀಯನ್ನು ಕುರಿತು ಯೇಸು ಒಳ್ಳೆಯ ಸಾಕ್ಷಿ ಕೊಡುತ್ತಿದ್ದಾರೆ.
ಮೇಲ್ಕಂಡ ಎರಡು ಸಂಭವ ಗಳನ್ನು ಓದಿದ ಹಾಗೆ, ಆ ಸಹೋದರಿಯರು ಕಷ್ಟದಲ್ಲಿಯೂ ತಮ್ಮಿಂದ ಸಾಧ್ಯವಾದಷ್ಟು ಮಾಡಿದ್ದನ್ನು ದೇವರು ಮರೆತು ಹೋಗುವವರಲ್ಲ. ಈ ಸಂದೇಶದಿಂದ ದೇವರು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನಿಮಗೆ ಆಗಿ ಮಿಕ್ಕಿದ್ದನ್ನು ದೇವರ ಕೆಲಸಕ್ಕೆ ಖರ್ಚುಮಾಡಿರಿ ಎಂಬುದಲ್ಲ. ಚಾರೆಪ್ತಾ ವಿಧವೆಯ ಹಾಗೆ ತನಗಿದ್ದ ಕೊನೆಯ ಆಹಾರವನ್ನೂ ದೇವರಿಗೆ ಅಂದರೆ ಸೇವೆಗೆ ಕೊಡುವುದನ್ನು ದೇವರು ಮೆಚ್ಚುತ್ತಾರೆ. “ಇವಳು ತನ್ನಿಂದ ಸಾಧ್ಯವಾಗುವಷ್ಟು ಮಾಡಿದಳು” (ಮಾರ್ಕ 14:8) ಎಂಬ ಮತ್ತೊಂದು ಸಾಕ್ಷಿಯನ್ನು ನೀವೂ ಹೊಂದಬಹುದೇ.
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:-
ಕಳೆದ ತಿಂಗಳಲ್ಲಿ ಅನೇಕ ಸ್ಥಳಗಳಲ್ಲಿ ಕ್ರಿಸ್ತನ ಜನನದ ಶುಭ ಸಂದೇಶವನ್ನು ಪ್ರಕಟಿಸಿದೆವು. ಅದನ್ನು ಕೇಳಿದ ಒಬ್ಬೊಬ್ಬರ ಹೃದಯದಲ್ಲಿಯೂ ಕ್ರಿಸ್ತನು ಜನಿಸುವಂತೆ ಪ್ರಾರ್ಥಿಸಿರಿ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482