Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 10.01.2021 (Kids Special)

ಧೈನಂದಿನ ಧ್ಯಾನ(Kannada) – 10.01.2021 (Kids Special)

ಅವಶ್ಯವಾದದ್ದು ಒಂದೇ

"ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು” - ಲೂಕ 10:42

ಹೊಸ ರಾಜನೊಬ್ಬನು ದೇಶವನ್ನು ಆಳುವುದಕ್ಕಾಗಿ ಪದವಿ ಸ್ವೀಕಾರ ಮಾಡಿದರು. ತನ್ನ ರಾಜ್ಯದ ಎಲ್ಲಾ ಕಾರ್ಯಗಳನ್ನು ಕ್ರಮಪಡಿಸಿದರು. ಮನಸ್ಸಿನಲ್ಲಿ ಒಂದು ತೀರ್ಮಾನ ಮಾಡಿದರು. ನನಗೆ ಸಮಯ ಸಿಕ್ಕಾಗಲೆಲ್ಲಾ ದೇಶದ ಮುಖ್ಯ ಬೀದಿಗಳಲ್ಲಿ ಹೋಗಿ ಬಹಳ ಬಡತನದಲ್ಲಿರುವ ವ್ಯಕ್ತಿಗಳಿಗೆ ನಾನೇ ಸಹಾಯ ಮಾಡುತ್ತೇನೆ ಎಂದು ತೀರ್ಮಾನಿಸಿದರು. ಒಂದು ದಿನ ಹಾಗೆ ಹೋಗುತ್ತಿರುವಾಗ ಒಂದು ಮನುಷ್ಯನನ್ನು ಸಂಧಿಸಿದರು. ಹರಿದ ಬಟ್ಟೆ, ಎಣ್ಣೆಯನ್ನೇ ನೋಡಿರದ ತಲೆ, ಆಹಾರ ಇಲ್ಲದ್ದರಿಂದ ಬಹಳ ತೆಳ್ಳಗಾಗಿದ್ದ ಶರೀರ, ಕೈಕಾಲುಗಳಲ್ಲಿ ಹುಣ್ಣುಗಳೊಂದಿಗೆ ಕೈಚಾಚಿ ಕುಳಿತಿದ್ದರು. ರಾಜ ಹತ್ತಿರ ಹೋಗಿ ನಿನಗೆ ಏನು ಸಹಾಯ ಮಾಡಬೇಕು ಎಂದು ಕೇಳಿದರು.

ಆ ಮನುಷ್ಯ ಈ ಮಾತನ್ನು ಕೇಳಿದ ಕೂಡಲೇ ಒಂದು ನಿಮಿಷ ತನ್ನ ಸ್ಥಿತಿಯನ್ನು ಗ್ರಹಿಸಿ,  "ಅಯ್ಯಾ, ನಿಮ್ಮೊಂದಿಗೆ ನಾನೂ ಇರಬೇಕು" ಎಂದು ಹೇಳಿದನು. ಅವರು ಕೂಡಲೇ ಅವನನ್ನು ತನ್ನ ರಥದಲ್ಲಿ ಹತ್ತಿಸಿಕೊಂಡರು. ಅರಮನೆಗೆ ಬಂದು ಕೆಲಸದವರನ್ನು ಕರೆದು,  "ಇವರ ತಲೆಯ ಕೂದಲನ್ನು ಚೆನ್ನಾಗಿ ಕತ್ತರಿಸಿ, ಚೆನ್ನಾಗಿ ಸ್ನಾನ ಮಾಡಿಸಿ, ಬಹಳ ಬೆಲೆಯುಳ್ಳ ಒಳ್ಳೆಯ ವಸ್ತ್ರಗಳನ್ನು ಹಾಕಿ, ಎಣ್ಣೆ ಹಚ್ಚಿ, ಹುಣ್ಣುಗಳಿಗೆ ಔಷಧಿ ಹಚ್ಚಿರಿ. ರಾಜ್ಯದಲ್ಲಿ ಒಂದು ಸ್ಥಳವನ್ನು, ಅರಮನೆಯಲ್ಲಿ ಒಂದು ಸ್ಥಳವನ್ನು ಸಿದ್ಧಮಾಡಿರಿ"  ಎಂದು ಆಜ್ಞೆ ಕೊಟ್ಟರು.

ಕೆಲಸದವರಿಗೆಲ್ಲಾ ಒಂದೇ ಆಶ್ಚರ್ಯ. ಇವನಿಗೆ ಏನು ಇಷ್ಟೊಂದು ಮರ್ಯಾದೆ ಎಂದು! ಅವನು ಹೇಳಿದನು,  "ನನ್ನನ್ನು ಹುಡುಕಿ ಇದುವರೆಗೂ ಒಬ್ಬರೂ ಬಂದದ್ದಿಲ್ಲ. ನಾನು ಹಲವರ ಬಳಿ ಹೋಗಿ ಮೋಸಹೋಗಿ ಬಂದಿದ್ದೇನೆ. ಆದ್ದರಿಂದ ನನ್ನನ್ನು ಹುಡುಕಿ ಬಂದವರ ಪ್ರೀತಿಯ ಅಂತರಾಳವನ್ನು ಅರ್ಥಮಾಡಿಕೊಂಡು ಅವರೊಂದಿಗೆ ಇರಲು ಹಂಬಲದಿಂದ ಕೇಳಿದೆನು. ಅವರು ನನ್ನನ್ನು ಅಂಗೀಕರಿಸಿದರು" ಎಂದನು. ಕೆಲಸದವರು ನಾವು ರಾಜನ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಒಂದು ದಿನವೂ ಕೂಡ ನಾವು ರಾಜನೊಂದಿಗೆ ಇರಬೇಕು ಎಂದು ಬಯಸಲಿಲ್ಲವೇ. ಆದರೆ ಇವನಿಗೆ ಈ ಭಾಗ್ಯವು ಸಿಕ್ಕಿಬಿಟ್ಟಿತೇ! ಎಂದು ಚಿಂತಿಸಿದರು.

ಪ್ರೀತಿಯ ಪುಟಾಣಿಗಳೇ! ನಾವು ಆಲಯಕ್ಕೆ ಹೋಗಬಹುದು, ಪ್ರಾರ್ಥಿಸಬಹುದು, ಸತ್ಯವೇದ ಓದಬಹುದು. ಆದರೆ ಯೇಸುವೊಂದಿಗಿರಲು ಹಂಬಲದಿಂದ ಕೇಳಿದರೆ ಅವರು ತನ್ನ ರಕ್ತದಿಂದ ನಮ್ಮನ್ನು ತೊಳೆದು, ರಕ್ಷಣೆಯ ವಸ್ತ್ರಗಳನ್ನು ಕೊಟ್ಟು ಬೇಡದಿರುವ ಎಲ್ಲಾ ಅಶುದ್ಧತ್ವವನ್ನು ನಮ್ಮಿಂದ ತೊಲಗಿಸಿ ನಮ್ಮನ್ನು ಶುದ್ಧಿಗೊಳಿಸಿ, ಅವರೊಂದಿಗೆ ಇರುವಂತೆ ನಮ್ಮನ್ನು ಅರ್ಹತೆಯುಳ್ಳವರಾಗಿ ಮಾರ್ಪಡಿಸುತ್ತಾರೆ. ಇಂದೇ ಕೇಳೋಣವಾ!
-    Sis.ದೆಬೋರಾಳ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)