Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 01.01.2021

ಧೈನಂದಿನ ಧ್ಯಾನ(Kannada) – 01.01.2021

ಕಾಪಾಡುವ ಯೇಸು

"...ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗ, ಬಿಸಿಲಿಗೆ ನೆರಳು, ಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ" - ಯೆಶಾಯ 25:4

ಅಮೆರಿಕ ದೇಶಕ್ಕೆ ಸೇರಿದ ಒಬ್ಬ ದೊಡ್ಡ ಕೋಟ್ಯಾಧಿಪತಿಗೆ ಮರಣ ಭಯವು ಬಾಧಿಸುತ್ತಿತ್ತು. ದಿಢೀರೆಂದು ಪ್ರಪಂಚ ಯುದ್ಧವು ಸಂಭವಿಸಿ ತನ್ನ ನಗರದಲ್ಲಿ ಪರಮಾಣು ಬಾಂಬ್ ಗಳು ಹಾಕಿದರೆ ಏನು ಮಾಡುವುದು ಎಂದು ನೆನೆಸಿ ಭಯಪಟ್ಟರು. ಏಕೆಂದರೆ ಪರಮಾಣು ಬಾಂಬ್ ಹಾಕುವಾಗ ಅದರಿಂದ ತಾನು ತನ್ನ ಕುಟುಂಬ ರಕ್ಷಿಸಲ್ಪಡುವದಕ್ಕಾಗಿ ಭೂಮಿಯ ತಳಭಾಗದಲ್ಲಿ ಒಂದು ದೊಡ್ಡ ಪರಮಾಣು ಬಾಂಬ್ ಅಡಗುತಾಣ ಒಂದನ್ನು ಕಟ್ಟಲು ತೀರ್ಮಾನಿಸಿದರು. ದೊಡ್ಡ ದೊಡ್ಡ ವಿಜ್ಞಾನಿಗಳು, ಕಟ್ಟಡ ಪ್ರವೀಣರು, ಇಂಜಿನಿಯರ್ ಗಳು ಎಡೆಬಿಡದೆ ಶ್ರಮವಹಿಸಿ ಹಲವು ಕೋಟಿ ವೆಚ್ಚದಲ್ಲಿ, ಪರಮಾಣು ಬಾಂಬ್ ಎಸೆದಾಗ ತಪ್ಪಿಸಿಕೊಂಡು ಸುರಕ್ಷಿತವಾಗಿರುವಂತಹ ದೃಢವಾದ ಬಂಗಲೆಯೊಂದನ್ನು ಕಟ್ಟಿ ಮುಗಿಸಿದರು.

ಆ ಬಂಗಲೆಯನ್ನು ಪ್ರತಿಷ್ಠೆ ಮಾಡುವಂತೆ ಆ ಕೋಟ್ಯಾಧಿಪತಿ ಬಹಳ ಪ್ರಬಲವಾದ ದೇವರ ಸೇವಕರಾದ ಮಾರೀಸ್ ಸೆರುಲ್ಲೋರವರನ್ನು ಆಹ್ವಾನಿಸಿದ್ದರು. ಒಂದೊಂದು ಕೋಣೆಯನ್ನು ಸೇವಕರಿಗೆ ತೋರಿಸುತ್ತಲೇ ಅವುಗಳನ್ನು ವಿಜ್ಞಾನ ರೀತಿಯಲ್ಲಿ ಕಟ್ಟಿರುವುದಾಗಿ, ಯಾವುದೇ ಶಾಖವು, ಆಘಾತವು ಆ ಬಂಗಲೆಯ ಗೋಡೆಯನ್ನು ಕದಲಿಸಲು ಸಾಧ್ಯವಿಲ್ಲ ಎಂದು ಗೋಡೆ ಬಲವಾದ ಲೋಹದ ಮಿಶ್ರದೊಂದಿಗೆ ಕಟ್ಟಿರುವುದಾಗಿ ಯು ಅದರ ಅದ್ಭುತವನ್ನು ಹೆಮ್ಮೆಯಿಂದ ಹೊಗಳಿಕೊಂಡು ಹೇಳುತ್ತಲೇ ಹೋದರು.

ಸೇವಕರು ಇದೆಲ್ಲವನ್ನೂ ಕೇಳುತ್ತಲೇ ಇದ್ದು, ತಾನು ಅದಕ್ಕಿಂತ ಕಡಿಮೆ ವೆಚ್ಚದಲ್ಲಿ, ಅಧಿಕವಾದ ದೃಢತೆಯೊಂದಿಗೆ ಕೇವಲ ಒಂದು ಅಡಗುತಾಣ ನಿರ್ಮಿಸಿದ್ದೇನೆ, ಅದರಲ್ಲಿ ಸಂಪೂರ್ಣ ರಕ್ಷಣೆ ಉಂಟು ಎಂದು, ಅದನ್ನು ರೆಕ್ಕೆಗಳಿಂದ ಕಟ್ಟಿರುವುದಾಗಿಯು ಹೇಳಿದಾಗ ಬಹಳ ಅಚ್ಚರಿಯಿಂದ ನೋಡಿದರು ಆ ಕೋಟ್ಯಾಧಿಪತಿ. ನಿಧಾನವಾಗಿ ಸೇವಕರು ಕೀರ್ತನೆಗಳು. 91:4 ನ್ನು ತೆರೆದು ತೋರಿಸಿದರು. ಹೇಗೆ ಪರಾತ್ಪರನ ಮರೆಹೊಕ್ಕಿರುವವನು ಸುರಕ್ಷಿತವಾಗಿರುತ್ತಾನೆ ಎಂದು, ಅವರ ರೆಕ್ಕೆಗಳ ನೆರಳಿನಲ್ಲಿ ಇರುವವನು ಸುರಕ್ಷಿತವಾಗಿರುತ್ತಾನೆ ಎಂದು ಬೋಧಕರು ವಿವರಿಸಿದಾಗ ಬಹಳ ಅಚ್ಚರಿಗೊಂಡರು ಕೋಟ್ಯಾಧಿಪತಿ. ಸತ್ಯವೇದದಲ್ಲಿ ಯೋಬನೆಂಬ ಭಕ್ತನನ್ನು ಕುರಿತು ಓದುವಾಗ, ಅವರ ಮಾರ್ಗಗಳು ದೇವರಿಗೆ ಇಷ್ಟವಾಗಿದ್ದದರಿಂದ, ತನ್ನನ್ನು, ತನ್ನ ಕುಟುಂಬವನ್ನು ಆತನೇ ಕಾಪಾಡುವಾತನು ಎಂದು ಅವರನ್ನು ಒರಗಿಕೊಂಡದ್ದರಿಂದ, ಕರ್ತನು ಯೋಬನನ್ನು ಅವನಿಗಿದ್ದ ಎಲ್ಲವನ್ನು ಬೇಲಿಹಾಕಿ ಕಾಪಾಡಿದರು ಎಂದು ಬರೆಯಲ್ಪಟ್ಟಿದೆ.

ಪ್ರಿಯರೇ! ಹಿಂದಿನ ವರ್ಷ ಬಂದ ಹಲವು ವಿಧವಾದ ಆಪತ್ತುಗಳಲ್ಲಿಯೂ, ವ್ಯಾಧಿಗಳಲ್ಲಿಯೂ, ಬಳಲಿ ಹೋಗಿ ಹಣವನ್ನೆಲ್ಲಾ ಖರ್ಚು ಮಾಡಿ ನನ್ನ ಕುಟುಂಬಕ್ಕೆ ಒಂದು ರಕ್ಷಣೆ ಇಲ್ಲವೇ ಎಂದು ಚಿಂತಿಸುತ್ತಿದ್ದೀರಾ? ನಿಮ್ಮನ್ನು ನೋಡಿ ಯೇಸು ಹೇಳುತ್ತಿದ್ದಾರೆ, ಈ ಹೊಸ ವರ್ಷದಲ್ಲಿ ನಿಮ್ಮನ್ನು, ನಿಮ್ಮ ಕುಟುಂಬವನ್ನು ಎಲ್ಲಾ ಕೇಡಿನಿಂದಲೂ, ಮರಣಕರ ವ್ಯಾಧಿಯಿಂದಲೂ ನಾನು ಬೇಲಿ ಹಾಕಿ ಕಾಪಾಡುತ್ತೇನೆ ಎಂದು ಹೇಳಿದ ! ಯೇಸುವಿನ ಕೈಗಳಲ್ಲಿ ನಿಮ್ಮನ್ನು ಒಪ್ಪಿಸಿಕೊಡಿರಿ. ನಿಶ್ಚಯವಾಗಿ ಈ ವರ್ಷ ಪೂರ್ತಿಯಾಗಿ ಕಾಪಾಡುವಂತಹ ದೇವರ ಹಸ್ತವು ನಿಮ್ಮ ಕುಟುಂಬದ ಮೇಲೆ ಇರುತ್ತದೆ. ಯಾವುದಕ್ಕೂ ಭಯಪಟ್ಟು ಚಿಂತಿಸಬೇಡಿರಿ.
-    S.P.ಸಂದನಪಾಂಡಿ

ಪ್ರಾರ್ಥನಾ ಅಂಶ:-
ಈ ಹೊಸವರ್ಷದಲ್ಲಿ ದೇವರ ಹಸ್ತವು ಸೇವೆಯ ಒಂದೊಂದು ಭಾಗದಲ್ಲಿಯೂ ಬಲವಾಗಿ ಪ್ರಕಟವಾಗುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)